ಚಿಕ್ಕಮಗಳೂರು ನಗರದ ಕೋಟೆಯಲ್ಲಿ ಇರುವ ಕೆನರಾ ಬ್ಯಾಂಕ್ ಶಾಖೆಯನ್ನು ಎಸ್‌ಟಿಜೆ ಕಾಲೇಜಿನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಕೋಟೆಯ ನಾಗರಿಕರು ಕೆನರಾ ಬ್ಯಾಂಕ್ ಕೇಂದ್ರ ಕಚೇರಿ ಸಿಇಒ ಅನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಸಮಾಜಿಕ ಕಾರ್ಯಕರ್ತ ಕೋಟೆ ಸೋಮಣ್ಣ ಮಾತನಾಡಿ, ಕೋಟೆ ಶಾಖೆಯಲ್ಲಿ ರೈತಾಪಿ ವರ್ಗದರು ಹೆಚ್ಚಾಗಿ ಖಾತೆದಾರರಾಗಿದ್ದಾರೆ. ಜೊತೆಗೆ ಬಡವರು, ಕೂಲಿ ಕಾರ್ಮಿಕರು, ವಯಸ್ಸಾದ ಹಿರಿಯ ಪಿಂಚಣಿ ದಾರರು ಹಾಗೂ ಸರ್ಕಾರಿ ನೌಕರರು ಈ ಶಾಖೆಯಲ್ಲಿ ಖಾತೆದಾರರಾಗಿತ್ತಾರೆ. ಕೋಟೆಗೆ ಈ ಕೆನರಾ ಬ್ಯಾಂಕ್ ಶಾಖೆ ತರಲು ಏಳು ವರ್ಷಗಳ ಹಿಂದೆ ಇದ್ದ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸ್ ಮತ್ತು ಸಾಕಷ್ಟು ಮಂದಿ ಶ್ರಮ ವಹಿಸಿದ್ದಾರೆ ಎಂದು ತಿಳಿಸಿದರು.
ಬಹಳಷ್ಟು ರೈತರು ಈ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದಾರೆ, ಚಿನ್ನದ ಮೇಲಿನ ಸಾಲ ಪಡೆದಿದ್ದಾರೆ, ಸೀಕ್ರೇಟ್ ಲಾಕರ್ ಓಪನ್ ಮಾಡಿಸಿರುತ್ತಾರೆ. ಬಹಳಷ್ಟು ಹಿರಿಯ ಪಿಂಚಣಿ ದಾರರು ಇದ್ದಾರೆ, ಸಾವಿರಾರು ಖಾತೆದಾರರು ಇದ್ದಾರೆ. ಲಾಭದಾಯಕವಾದ ಈ ಬ್ಯಾಂಕ್ ಅನ್ನು ಯಾವುದೋ ಒಂದು ಕಾರಣಕ್ಕೆ ಬದಲಾವಣೆ ಮಾಡುವುದು ಸರಿಯಲ್ಲ ಎಂದರು.

ಶಾಖೆ ವಿಲೀನ ಮಾಡುವುದರಿಂದ ಬಹಳಷ್ಟು ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಈ ವಿಷಯವನ್ನು ಮರು ಪರಿಶೀಲನೆ ಮಾಡಿ. ಮೇಲಾಧಿಕಾರಿಗಳು ಇದರ ಬಗ್ಗೆ ಬ್ಯಾಂಕ್‌ನ ಗ್ರಾಹಕರಿಗೆ ಒಳ್ಳೆಯ ಮತ್ತು ಆಶಾದಾಯಕ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಾಗರಿಕರಾದ ಕೋಟೆ ಸೋಮಣ್ಣ, ಯಶೋಧ ರವೀಂದ್ರ, ಸುಧಾಕರ್ ಗೌಡ್ರ, ಹೇಮಚಂದ್ರು, ಶಶಿ ಕುಮಾರ್, ಶಿವಣ್ಣ ಹಾಗೂ ಇತರರು ಇದ್ದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಮಳೆಗಾಲದ ಅವಘಡಗಳಿಗೆ ತುರ್ತಾಗಿ ಸ್ಪಂದಿಸಿ; ಶಾಸಕ ಮಂತರ್‌ಗೌಡ ನಿರ್ದೇಶನ