ಹಾಸನ | ಚುನಾವಣೆ ವೇಳೆ ಬಂದೂಕು ಜಮೆ; ರೈತರು, ಬೆಳೆಗಾರರಿಗೆ ವಿನಾಯಿತಿ ನೀಡಲು ಮನವಿ

Date:

  • ಜಿಲ್ಲಾಧಿಕಾರಿ ಭೇಟಿ ಮಾಡಿದ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಯೋಗ
  • ಸಮಿತಿಯಲ್ಲಿ ಪರಿಶೀಲಿಸಿ ವಿನಾಯಿತಿ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ

ಚುನಾವಣೆ ಸಂದರ್ಭದಲ್ಲಿ ಬಂದೂಕು ಜಮೆ ಮಾಡಿಕೊಳ್ಳುವುದರಿಂದ ಮಲೆನಾಡು ಭಾಗದ ರೈತರು ಮತ್ತು ಬೆಳೆಗಾರರಿಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಯೋಗವು ಹಾಸನ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಮಲೆನಾಡು ಭಾಗದಲ್ಲಿ ಒಂಟಿ ಮನೆಗಳು ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆಯನ್ನು ಕಳ್ಳರಿಂದ ರಕ್ಷಣೆ ಮಾಡಿಕೊಳ್ಳಲು ಹಾಗೂ ಕಾಡುಪ್ರಾಣಿಗಳಿಂದ ಬೆಳೆ ಮತ್ತು ಪ್ರಾಣ ರಕ್ಷಣೆ ಮಾಡಿಕೊಳ್ಳಲು ಬಂದೂಕು ಬಳಕೆ ಅನಿವಾರ್ಯ. ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಉಳಿದ ರೈತರಿಗೆ ಬಂದೂಕು ಜಮೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿ, “ಚುನಾವಣಾ ಆಯೋಗವು ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೋಲಿಸ್ ಪರಿಷ್ಟಾಧಿಕಾರಿಯನ್ನು ಒಳಗೊಂಡಂತೆ ಸಮಿತಿ ರಚಿಸಿದೆ. ಬಂದೂಕು ಜಮೆಯಿಂದ ವಿನಾಯಿತಿ ಕೋರುವ ರೈತ ಬೆಳೆಗಾರರು ಸಕಾರಣ ಸಲ್ಲಿಸಿ ಅರ್ಜಿ ಸಲ್ಲಿಸಿದಲ್ಲಿ ಅರ್ಜಿದಾರರ ಪೂರ್ವಾಪರ ಪರಿಶೀಲಿಸಿ, ಅವಶ್ಯಕವೆಂದು ಕಂಡು ಬಂದಲ್ಲಿ ಅಂತಹ ರೈತ ಬೆಳೆಗಾರರಿಗೆ ಬಂದೂಕು ಜಮೆಯಿಂದ ವಿನಾಯಿತಿ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಕಲ್ಲುಕ್ವಾರಿ ದುರಂತ ಪ್ರಕರಣ; ವರ್ಷದ ಬಳಿಕ ಆರೋಪಿಗಳ ಬಂಧನ

ನಿಯೋಗದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಕೆ ಎನ್ ಸುಬ್ರಹ್ಮಣ್ಯ , ಖಜಾಂಚಿ ಎಂ ಎಸ್ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಎಂ ಸಿ ಬಸವರಾಜ್ ಹಾಗೂ ಕೆ ಪಿ ಕೃಷ್ಣೇಗೌಡ, ನಿರ್ದೇಶಕ ಎಚ್ ಎಂ ರಮೇಶ್, ಕಸಬಾ ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷ ಕೆ ಬಿ ಲೋಹಿತ್, ಆಲೂರು ತಾಲೂಕು ಬೆಳಗಾರರ ಸಂಘದ ಅಧ್ಯಕ್ಷ ರವಿಕುಮಾರ್ ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ‘ಮಾಂಜಾ ದಾರ’ಕ್ಕೆ ಸಿಲುಕಿ‌ ಯುವಕ ಬಲಿ

ಕಾರಹುಣ್ಣಿಮೆಯ ದಿನ ಉತ್ತರಕರ್ನಾಟಕದಲ್ಲಿ ಗಾಳಿಪಟ ಹಾರಿಸುವುದು ವಾಡಿಕೆ. ಈ ಗಾಳಿಪಟದ ಮುಂಜಾ...

ನಮ್ಮ ಸಚಿವರು | ಮಾಸ್ ಲೀಡರ್ ಆಗುವ ಲಕ್ಷಣವುಳ್ಳ ಪ್ರಿಯಾಂಕ್ ಖರ್ಗೆ; ಕ್ಷೇತ್ರದ ಅಭಿವೃದ್ಧಿಗೆ ನೀಡಬೇಕಿದೆ ಆದ್ಯತೆ

ಪ್ರಿಯಾಂಕ್ ಖರ್ಗೆ ಅವರು  ಕಾಂಗ್ರೆಸ್‌ನಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ತಂದೆಯ ಹಾದಿಯಲ್ಲಿಯೇ...

ಧಾರವಾಡ | ವಿದ್ಯುತ್ ದರ ಹೆಚ್ಚಳ; ಕೈಗಾರಿಕಾ ಉದ್ಯಮಿಗಳ ಸಂಘ ಖಂಡನೆ

ವಿದ್ಯುತ್ ಶುಲ್ಕ ಗಣನೀಯ ಹೆಚ್ಚಳವನ್ನು ವಿರೋಧಿಸಿ ಧಾರವಾಡ ಬೆಳವಣಿಗೆ ಕೇಂದ್ರ ಮತ್ತು...

2022ರ ವಿಶ್ವ ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ | ಕೇಂದ್ರದ ದತ್ತಾಂಶ

ಭಾರತ 2022ರಲ್ಲಿ 8.95 ಲಕ್ಷ ಡಿಜಿಟಲ್ ಪಾವತಿ ವಹಿವಾಟು ನಡೆಸಿದೆ 9 ವರ್ಷದಲ್ಲಿ...