ಚಾಮರಾಜನಗರ | ಎಡಿಸಿ ನಕಲಿ ಸಹಿ ಬಳಸಿ ₹1 ಕೋಟಿಗೂ ಅಧಿಕ ಹಣ ಲೂಟಿ; ‘ಡಿ ಗ್ರೂಪ್‌’ ನೌಕರನ ವಿರುದ್ಧ ಆರೋಪ

Date:

  • ನಕಲಿ ಸಹಿ ಮೂಲಕ ಅಕ್ರಮ ಹಣ ವರ್ಗಾವಣೆ; ತಡವಾಗಿ ಪ್ರಕರಣ ಬೆಳಕಿಗೆ
  • ಬೇಜವಾಬ್ದಾರಿ ತೋರಿದ್ದ ದ್ವಿತೀಯ ದರ್ಜೆ ಸಹಾಯಕಿ ಅಮಾನತು

ಚಾಮರಾಜನಗರ ಜಿಲ್ಲೆಯ ಹಿಂದಿನ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಆನಂದ್ ಹೆಸರನ್ನು ನಕಲಿ ಸಹಿ ಬಳಸಿ ₹1 ಕೋಟಿಗೂ ಅಧಿಕ ಹಣವನ್ನು ‘ಡಿ ಗ್ರೂಪ್‌’ ನೌಕರನೊಬ್ಬ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಚಾಮರಾಜನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಚಾಮರಾಜನಗರ ಎಡಿಸಿ ಕಚೇರಿಯ ‘ಡಿ ಗ್ರೂಪ್’ ನೌಕರ ರಾಜೇಶ್ ಎಂಬಾತ ‘ಎಡಿಸಿ’ ನಕಲಿ ಸಹಿ ಬಳಸಿ ಅವ್ಯವಹಾರ ಮಾಡಿರುವ ಆರೋಪಿ.‌ ಜಿಲ್ಲಾಧಿಕಾರಿ ಅವರ ಗ್ರಾಮೀಣ ರಸಪ್ರಶ್ನೆ ಕಾರ್ಯಕ್ರಮದ ಬ್ಯಾಂಕ್ ಖಾತೆಯಿಂದ ₹1 ಕೋಟಿಗೂ ಅಧಿಕ ಹಣವನ್ನು ತನ್ನ ಖಾತೆಗೆ ಮತ್ತು ಇತರರ ಖಾತೆಗೆ ವರ್ಗಾವಣೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಕರಣ ಸಂಬಂಧ ಬೇಜವಾಬ್ದಾರಿ ತೋರಿದ್ದ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ‌. ಆರೋಪಿ ರಾಜೇಶ್‌ನನ್ನು ಬಂಧಿಸಿರುವ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚುನಾವಣಾ ಅಕ್ರಮ ಪ್ರಕರಣ: ಶಾಸಕ ಗೌರಿಶಂಕರ್ ಶಾಸಕತ್ವ ಅಸಿಂಧು

2021 ರಿಂದಲೂ ಈ ಅವ್ಯವಹಾರ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈವರೆಗೂ, ಕೃತ್ಯ ಆಡಿಟ್ ನಡೆಸುವ ವೇಳೆ ಬೆಳಕಿಗೆ ಬರದಿರಲಿಲ್ಲ. ಹೀಗಾಗಿ, ಆರೋಪಿ ರಾಜೇಶ್‌ ಮಾತ್ರವೇ ಈ ಅವ್ಯವಹಾರ ನಡೆಸಿದನೇ ಅಥವಾ ಆತನೊಂದಿಗೆ ಬೇರೆಯವರೂ ಕೈಜೋಡಿಸಿದ್ದಾರೆಯೇ ಎಂಬ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಚಾಮರಾಜನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ ಮಾತನಾಡಿ, “ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ. ವಿಚಾರ ತಿಳಿದುಬಂದ ತಕ್ಷಣವೇ ದೂರು ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆತನಿಂದ ಅಗತ್ಯ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಜೊತೆಗೆ ಇದಕ್ಕೆ ರಾಜಕೀಯ ನಂಟಿರುವ ಬಗೆಗೂ ವಿಚಾರಣೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

“ಉಳಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಇತರೆ ಸಿಬ್ಬಂದಿ ಆರೋಪಿ ಜೊತೆಗೆ ಸೇರಿಕೊಂಡು ಅಕ್ರಮ ಹಣ ವರ್ಗಾವಣೆಗೆ ಮುಂದಾಗಿದ್ದರೆ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ನ್ಯಾಯಾಂಗ ಬಡಾವಣೆಯಲ್ಲಿ ಬೀದಿ ಬದಿ ವ್ಯಾಪಾರಿಯ ಎಳನೀರು ಕಳ್ಳತನ

ಬಡ ವ್ಯಾಪಾರಿಯೊಬ್ಬರು ಮಾರಾಟ ಮಾಡಲು ತಂದಿರಿಸಿದ್ದ ಸುಮಾರು 800 ಎಳನೀರು ರಾತ್ರೋರಾತ್ರಿ...

ಈಗಲಾದರೂ ಚರ್ಚೆಗೆ ಬರುತ್ತದೆಯೇ ಪ್ರಾದೇಶಿಕ ಅಸಮಾನತೆ ಕೂಗು

ಕರ್ನಾಟಕ ಏಕೀಕರಣವಾಗಿ ಅರ್ಧ ಶತಮಾನ ಕಳೆದರೂ ಇಡೀ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಯ...

ಉತ್ತರ ಕನ್ನಡ | ಬೇಸಿಗೆಗೂ ಮುನ್ನವೇ ನೀರಿನ ಬವಣೆ; ಸಂಕಷ್ಟದಲ್ಲಿ ಗ್ರಾಮಗಳು

ಶಿರಸಿ ಮಲೆನಾಡು ಆದರೆ, ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ....

ಚಾಮರಾಜನಗರ | ಸರ್ವರ್‌ ಸಮಸ್ಯೆಯಿಂದ ವಸತಿ ಯೋಜನೆ ದಾಖಲೆ ಸಲ್ಲಿಕೆ ವಿಳಂಬ; ಕಾಲಾವಧಿ ಮುಂದೂಡುವಂತೆ ಒತ್ತಾಯ

ವಸತಿ ಯೋಜನೆಗಳ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ದಾಖಲೆಗಳನ್ನು ಸಲ್ಲಿಸಲು ನವೆಂಬರ್‌ 30...