ದಕ್ಷಿಣ ಕನ್ನಡ | ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ; ಟೇಕಾಫ್‌ ಆಗದೆ ಮರಳಿದ ವಿಮಾನ

Date:

ಟೇಕಾಫ್‌ಗೆ ಸಿದ್ದವಾಗಿದ್ದ ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ ಹೊಡೆದಿರುವ ಘಟನೆ ಗುರುವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನ ರನ್ ವೇನಲ್ಲಿ ಸಾಗುತ್ತಿದ್ದಾಗ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ 8.15ಕ್ಕೆ ಹೊರಟಿದ್ದ ವಿಮಾನವು ಟ್ಯಾಕ್ಸಿ ವೇ ದಾಟಿ ರನ್​ವೇನಲ್ಲಿ ಸಾಗುತ್ತಿದ್ದಂತೆ ವಿಮಾನದ ರೆಕ್ಕೆಯ ಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಹಕ್ಕಿ ಡಿಕ್ಕಿ ಹೊಡೆದಿರುವ ವಿಮಾನ

ಅಪಾಯದ ಸೂಚನೆ ಅರಿತ ಪೈಲೆಟ್ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಟೇಕಾಫ್ ರದ್ದು ಮಾಡಿ ರನ್ ವೇನಿಂದ ವಿಮಾನ ವಾಪಸ್ ಬಂದಿದೆ. ಪ್ರಯಾಣಿಕರನ್ನು ಇಳಿಸಿ ವಿಮಾನದ ತಪಾಸಣೆ ನಡೆಸಲಾಗಿದೆ.

ಈ ಸುದ್ದಿ ಓದಿದ್ದೀರಾ? ತುಮಕೂರು | ನಿಂತಿದ್ದ ಬಸ್‌ಗೆ ಟಿಟಿ ವಾಹನ ಡಿಕ್ಕಿ; ಇಬ್ಬರು ದುರ್ಮರಣ

ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ವಿಮಾನದ ಮೂಲಕ ಪ್ರಯಾಣಿಕರು ದುಬೈಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಘಟನೆಯಿಂದ ಕೆಲ ಕಾಲ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿರುವುದು ಕಂಡುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಾಮರಾಜನಗರ | ಫ್ಯಾನ್‌ ಜೊತೆಗೆ ಆಸ್ಪತ್ರೆಗೆ ದಾಖಲಾಗುತ್ತಿರುವ ಗರ್ಭಿಣಿಯರು!

ಆಸ್ಪತ್ರೆಯಲ್ಲಿರುವ ಫ್ಯಾನ್‌ಗಳು ಕೆಟ್ಟು ನಿಂತಿರುವ ಕಾರಣದಿಂದ ಬಿಸಿಲ ತಾಪ ತಾಳಲಾರದೆ ಆಸ್ಪತ್ರೆಗೆ...

ಖಾತೆ ಕ್ಯಾತೆ | ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದರಾ ರಾಮಲಿಂಗಾರೆಡ್ಡಿ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಪೂರ್ತಿ ಭರ್ತಿಯಾಗಿದ್ದು, ಸಿಎಂ, ಡಿಸಿಎಂ...

ಚಾಮರಾಜನಗರ | ತಿಮಿಂಗಿಲ ವಾಂತಿ ಸಾಗಾಟ; ಇಬ್ಬರ ಬಂಧನ

ಮೂರೂವರೆ ಕೆ.ಜಿಗಳಷ್ಟು ತಿಮಿಂಗಿಲ ವಾಂತಿಯನ್ನು (ಅಂಬರ್ ಗ್ರೀಸ್) ಸಾಗಣೆ ಮಾಡುತ್ತಿದ್ದ ಇಬ್ಬರನ್ನು...