ದಕ್ಷಿಣ ಕನ್ನಡ | ಮದರ್ ತೆರೆಸಾ ಸಂಸ್ಮರಣಾ ದಿನ: ಸೆ.21ರಂದು ವಿಚಾರ ಸಂಕಿರಣ

Date:

‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆ ಪ್ರತಿರೂಪ ಮದರ್ ತೆರೇಸಾ ಸೇವೆ ಸಲ್ಲಿಸಿದ್ದರು. ಅವರ 26ನೇ ಸಂಸ್ಮರಣಾ ದಿನಾಚರಣೆ ಅಂಗವಾಗಿ ಸಪ್ಟೆಂಬರ್ 21ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಮದರ್ ತೆರೆಸಾ ವಿಚಾರ ವೇದಿಕೆ ಅಧ್ಯಕ್ಷ ರೊನಾಲ್ಡೊ ಕೆಸ್ಟಲಿನೋ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮದರ್ ತೆರೇಸಾ ನೆನಪಿನಲ್ಲಿ ‘ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು’ ಎಂಬ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ದಿನೇಶ್ ಅಮಿತ್ ಮಟ್ಟು ಉದ್ಘಾಟಿಸಲಿದ್ದಾರೆ” ಎಂದು ಹೇಳಿದ್ದಾರೆ.

“ವಿಚಾರ ಸಂಕಿರಣದಲ್ಲಿ ಸಾಹಿತಿ, ಬರಹಗಾರ ಡಾ.ಕೆ.ಅಶ್ರಫ್ ವಿಚಾರ ಮಂಡನೆ ಮಾಡಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಅಶ್ರಫ್ ಕೆ ಅವರು ಪ್ರತಿಕ್ರಿಯೆ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ.

“ಪ್ರೀತಿ ಹಾಗೂ ಸೇವೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಹೃದಯಗಳನ್ನು ಗೆದ್ದ ಜಗತ್ತಿನ ಮಹಾತಾಯಿ ಮದರ್ ತೆರೇಸಾ ಅವರ ಚಿಂತನೆ ಹಾಗೂ ಆದರ್ಶಗಳನ್ನು ಇಂದಿನ ಯುವ ಪೀಳಿಗೆಯ ಮಧ್ಯೆ ಕೊಂಡೊಯ್ಯುವ ಉದ್ದೇಶವಿದೆ. ಅದಕ್ಕಾಗಿ, 2017ರಿಂದ ‘ಸಂತ ಮದರ್ ತೆರೇಸಾ ವಿಚಾರ ವೇದಿಕೆ’ಯು ವಿಚಾರ ಸಂಕಿರಣ, ಸಂವಾದ, ಸೌಹಾರ್ದ ಹಬ್ಬಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸರ್ವಧರ್ಮದ ಜನತೆಯ ಪ್ರೀತಿ ವಿಶ್ವಾಸಗಳನ್ನು ಹೊರಹೊಮ್ಮಿದೆ” ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸುನಿಲ್ ಕುಮಾರ್ ಬಜಲ್, ಡೋಲ್ಫಿ ಡಿ’ಸೋಜಾ, ಅಲ್ವಿನ್ ಡಿಸೋಜ, ಅಬ್ದುಲ್ ಮುನೀರ್, ಸ್ಟಾನಿ ಡಿ ಕುನ್ನಾ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೈತ್ರಾ ಕುಂದಾಪುರ ನಮ್ಮ ಸಂಘಟನೆಯಲ್ಲಿ ಇದ್ದಾಳೆ ಎಂದು ಯಾರು ಹೇಳಿದ್ದು? ಶರಣ್ ಪಂಪ್‌ವೆಲ್ ಹೇಳಿಕೆ

ಚೆನ್ನಾಗಿ ಭಾಷಣ ಮಾಡುತ್ತಾಳೆ ಎಂದು ನಮ್ಮ ಕಾರ್ಯಕ್ರಮಕ್ಕೆ ಕರೆಯುತ್ತಿದ್ವಿ ಮಂಗಳೂರಿನ ಕದ್ರಿಯಲ್ಲಿ ಪ್ರಾಂತ...

ಮಂಗಳೂರು | ಕ್ಯಾರವಾನ್ ಪ್ರವಾಸೋದ್ಯಮಕ್ಕೆ ಕರಾವಳಿಗರ ನೀರಸ ಪ್ರತಿಕ್ರಿಯೆ

ಕರಾವಳಿ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಕವಾಗಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಕ್ಯಾರವಾನ್ ಪ್ರವಾಸೋದ್ಯಮ...

ದಕ್ಷಿಣ ಕನ್ನಡ | ವಾಟ್ಸ್ಯಾಪ್‌ ಮೂಲಕ ತ್ರಿವಳಿ ತಲಾಖ್‌ ನೀಡಿದ ಪತಿ; ಪತ್ನಿ ದೂರು

ವಿದೇಶದಲ್ಲಿರುವ ಪತಿ ವಾಟ್ಸಾಪ್ ಸಂದೇಶದ ಮೂಲಕ ತನ್ನ ಪತ್ನಿಗೆ ದಿಢೀರ್ ತ್ರಿವಳಿ...

ದಕ್ಷಿಣ ಕನ್ನಡ | ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ; ತರಗತಿಗಳು ವಿಳಂಬ

ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ...