ದಾವಣಗೆರೆ | ಬಂಜಾರ ಸಮಾಜದ ಮೇಲೆ ಇತರ ಸಮುದಾಯದ ದಬ್ಬಾಳಿಕೆ; ಸೇವಾಲಾಲ್ ಸ್ವಾಮೀಜಿ ಖಂಡನೆ

Date:

ಬಂಜಾರ ಸಮಾಜದ ಮೇಲೆ ಇತರ ಸಮುದಾಯದವರು ದಬ್ಬಾಳಿಕೆ ನಡೆಯುತ್ತಿದ್ದಾರೆ. ಒತ್ತಾಯ ಪೂರ್ವಕವಾಗಿ ಮತಾಂತರ ಮಾಡಲಾಗುತ್ತಿದೆ. ಇತ್ತೀಚೆಗೆ, ಮತ್ತೊಂದು ಧರ್ಮದ ಯುವಕ ಬಂಜಾರ ಸಮಾಜದ ಯುವತಿಯನ್ನು ಪ್ರೀತಿಸಿ ವಿವಾಹವಾಗಿರುವ ಪ್ರಕರಣ ನಡೆದಿದೆ. ಈ ವಿವಾಹವನ್ನು ರದ್ದುಗೊಳಿಸಿ, ಯುವತಿಯರನ್ನು ರಕ್ಷಿಸಬೇಕೆಂದು ಬಂಜಾರ ಸಮಾಜದ ಶ್ರೀಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ಜನವರಿ 12ರಂದು ಡಿ.ಎಚ್.ಎಂ ಚರ್ಚ್ ನಲ್ಲಿ ಪಾದ್ರಿಯಾಗಿರುವ ಬಿ.ರಾಜಶೇಖರ್ ಎಂಬುವವರು ಮತಾಂತರ ಮಾಡುವ ಉದ್ದೇಶದಿಂದ ಬಂಜಾರ ಸಮುದಾಯದ ಯುವತಿ ಜ್ಯೋತಿಬಾಯಿ ಅವರನ್ನು ವಿವಾಹವಾಗಿದ್ದಾರೆ. ಮದುವೆ ನೊಂದಣಿಗೆ ಸಲ್ಲಿಸಿರುವ ಎಫ್‌ (F) ನಮೂನೆಯಲ್ಲಿ ಬಿ.ರಾಜಶೇಖರ್ ಕುಟುಂಬದವರ ಸಹಿ ಇಲ್ಲ ಹಾಗೂ ಅವರ ಒಪ್ಪಿಗೆಯೂ ಇಲ್ಲ. ಈ ವಿವಾಹದ ಮುಖ್ಯ ಉದ್ದೇಶ ಮತಾಂತರ ಮಾಡುವುದಾಗಿದೆ” ಎಂದು ಆರೋಪಿಸಿದರು.

ಬಂಜಾರ ಸಮುದಾಯದ ಯುವತಿ ಜ್ಯೋತಿಬಾಯಿ ಹಾಗೂ ಆಕೆಯ ಕುಟುಂಬದವರನ್ನು ಹೆದರಿಸಿ ಬೆದರಿಸಿ ವಿವಿಧ ಆಸೆ ಆಮೀಷಗಳನ್ನು ತೋರಿಸಿ ಸುಮಾರು ಐದು ವರ್ಷಗಳಿಂದ ಯುವತಿಯನ್ನು ಹಾಗೂ ಅವರ ಕುಟುಂಬದವರನ್ನು ಮತಾಂತರ ಮಾಡಿ ಮದುವೆಗೆ ಒಪ್ಪಿಸಲು ಪ್ರಯತ್ನ ಮಾಡಲಾಗಿದೆ. ಬಿ.ರಾಜಶೇಖರ್ ತಮ್ಮ ವೈಯಕ್ತಿಕ ದಾಖಲಾತಿಯನ್ನು ನೈಜವಾಗಿ ತೋರಿಸದೆ ಸಮಾಜದ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಆದ್ದರಿಂದ ಈ ವಿವಾಹದ ನೋಂದಣಿಯನ್ನು ರದ್ದುಪಡಿಸಬೇಕು ಹಾಗೂ ತಪ್ಪು ಮಾಹಿತಿ ನೀಡಿ ವಂಚಿಸಿದ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದ ಅವರು, ಒತ್ತಾಯವಾಗಿ ಮತಾಂತರ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುದ್ದಿಗೋಷ್ಠಿಯಲ್ಲಿ ರವೀಂದ್ರ ನಾಯ್ಕ್, ಎನ್.ಹನುಮಂತ ನಾಯ್ಕ್, ಲಿಂಗರಾಜನಾಯ್ಕ್, ಲಿಂಬ್ಯಾನಾಯ್ಕ್, ರಮೇಶ್ ರವಿನಾಯ್, ಮಂಜಾನಾಯ್ಕ್, ಸತೀಶ್ ಪೂಜಾರಿ, ಮುರುಗೇಶ್ ಹುಲಿಕಟ್ಟೆ ಹಾಗೂ ಇತರರು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ರಾಯಚೂರು | ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ: ಬಿ.ವಿ ನಾಯಕ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ರಾಯಚೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿದ್ದೇನೆ....

ತುಮಕೂರು | ಕಲೆಯ ಗ್ರಹಿಕೆ ಮೇಲೆ ನಿರ್ಬಂಧ ಹೇರುವುದು ಅಪಾಯಕಾರಿ: ವಿಮರ್ಶಕ ರಾಘವೇಂದ್ರರಾವ್

ಕಲೆಯ ಗ್ರಹಿಕೆ ಮೇಲೆ ನಿರ್ಬಂಧಗಳನ್ನು ಹೇರುವುದು ಅಪಾಯಕಾರಿಯಾಗಿದೆ. ಗ್ರಹಿಕೆಯು ನಿಯಮಬದ್ಧವಾಗಿದ್ದರೂ ನಿರ್ಬಂಧ...

ಗದಗ | ಪ್ರತಿಯೊಬ್ಬರಿಗೂ ಮುಖ್ಯವಾದ ಸಂಪತ್ತು ಆರೋಗ್ಯ; ಎಂಎಲ್‌ಸಿ ಸಂಕನೂರ

ಪ್ರತಿಯೊಬ್ಬರಿಗೂ ಆರೋಗ್ಯ ಸಂಪತ್ತು ಮುಖ್ಯವಾದ ಸಂಪತ್ತಾಗಿದೆ. ನೌಕರರು ತಮ್ಮ ಆರೋಗ್ಯ ಸಂರಕ್ಷಣೆಗೆ...

ತುಮಕೂರಿನಲ್ಲಿ ನೊಳಂಬ ಲಿಂಗಾಯತರಿಗೆ ಟಿಕೆಟ್ ನೀಡುವಂತೆ ಸ್ವಾಮೀಜಿಗಳ ಒತ್ತಾಯ

ಮುಂದಿನ ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಲ್ಲಿ ನೊಳಂಬ ಲಿಂಗಾಯತರಿಗೆ ಟಿಕೆಟ್ ಕೊಡುವಂತೆ...