ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಶಿವಾಜಿ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಯುವಕನನ್ನು ಧಾರವಾಡದ ಕುಂದಗೋಳ ಠಾಣೆ ಪೋಲಿಸರು ಬಂಧಿಸಿದ್ದಾರೆ.
ಕುಂದಗೋಳ ಕಾಳಿದಾಸ ನಗರದ ಶಿವು ಅರಳಿಕಟ್ಟಿ ಎಂಬಾತ ಬಂಧಿತ ಯುವಕ. ಈತ ಫೇಸ್‌ಬುಕ್‌ನಲ್ಲಿ ಶಿವಾಜಿಯ ಕುರಿತು “ಬಿಜೆಪಿಯ ಹಿಂದುತ್ವ ಹೆಸರಿನಲ್ಲಿನ ಭಯೋತ್ಪಾದಕರ ಆರಾಧ್ಯ ದೈವ ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಎಂಟು ಜನ ಪತ್ನಿಯರ ಹೆಸರು. ಸಯೀ ಬಾಯಿ, ಸೋಯಿರಾಬಾಯಿ, ಸುಗುಣಬಾಯಿ, ಸರವಾರಬಾಯಿ, ಕಾಶೀಬಾಯಿ, ಗುಣವಂತಾಬಾಯಿ, ಲಕ್ಷ್ಮೀಬಾಯಿ, ಪುತಳಾಬಾಯಿ. ಬಹುಪತ್ನಿತ್ವ ಒಂದೇ ಧರ್ಮದಲ್ಲಿ ಮಾತ್ರ ಇದೆ ಎಂದು ವಾದಿಸುವ ಮೋದಿ ಗುಲಾಮರ ಗಮನಕ್ಕೆ” ಎಂದು ಬರೆದುಕೊಂಡಿದ್ದ.
ಜೂನ್ 6 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದು, ಹಿಂದೂಪರ ಸಂಘಟಕರು ಮತ್ತು ಛತ್ರಪತಿ ಶಿವಾಜಿ ಅಭಿಮಾನಿಗಳಿಗೆ ಅವಮಾನ ಮಾಡಿದ್ದಾನೆ ಎಂದು ಆರೋಪಿಸಿ ಮರಾಠಾ ಸಮಾಜದ ಮುಂಖಡ ವಿಠ್ಠಲ ಚವ್ಹಾಣ, ಛತ್ರಪತಿ ಶಿವಾಜಿ ಅಭಿಮಾನಿಗಳು, ಯುವಕನ ವಿರುದ್ಧ ಪೋಲಿಸರಿಗೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ಪೋಲಿಸರು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಚಿಗರಿ ಬಸ್‌ಗಳಲ್ಲಿ ಮಹಿಳೆಯರಿಗಿಲ್ಲ ಉಚಿತ ಪ್ರಯಾಣ