ಉಡುಪಿ | ಮೆಸ್ಕಾಂನವರೇ, ಕ್ಷಮಿಸಿ ಜೂನ್‌ನಿಂದ ನಮಗೆ ಕರೆಂಟ್‌ ಬಿಲ್‌ ಕೊಡಬೇಡಿ; ಪತ್ರ ವೈರಲ್‌

Date:

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವುದಾಗಿ ಹೇಳಿದ್ದು, ಅದರಂತೆ ಈ ಬಾರಿಯ ಚುನಾವಣೆಯಲ್ಲಿ ಬಹುಮತ ಲಭಿಸಿದೆ. ಹಲವೆಡೆ ನಾವು ವಿದ್ಯುತ್‌ ಬಿಲ್‌ ಪಾವತಿಸುವುದಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಉಡುಪಿಯ ವಾಸುದೇವ ಭಟ್‌ ಪೆರಂಪಳ್ಳಿ ಅವರು ವಿದ್ಯುತ್‌ ಮೀಟರ್‌ ಬೋರ್ಡ್‌ನ ಕೆಳಗೆ ಬರೆದು ಅಂಟಿಸಿರುವ ಪತ್ರವೊಂದು ವೈರಲ್‌ ಆಗಿದೆ. “ಮೆಸ್ಕಾಂನವರೇ, ಕ್ಷಮಿಸಿ ಜೂನ್‌ ತಿಂಗಳಿನಿಂದ ನಮಗೆ ಕರೆಂಟ್‌ ಬಿಲ್‌ ಕೊಡಬೇಡಿ. ನಾವು ಬಿಲ್‌ ಕಟ್ಟಲ್ಲ” ಎಂದು ಪತ್ರದಲ್ಲಿ ಬರೆಯಲಾಗಿದೆ.

ತಾವು ಪತ್ರದಲ್ಲಿ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಾಸುದೇವ ಭಟ್‌, “ಕಾಂಗ್ರೆಸ್‌ ತನ್ನ ನೇತೃತ್ವದ ಸರ್ಕಾರ ಬಂದರೆ ಹಲವಾರು ಉಚಿತ ಯೋಜನೆಗಳನ್ನು ನೀಡುವುದಾಗಿ ಘೋಷಿಸಿತ್ತು. ಜೂನ್‌ನಿಂದಲೇ ಉಚಿತ ವಿದ್ಯುತ್‌ ಕೊಡುವ ಯೋಜನೆ ಘೋಷಣೆಯಾಗಿದೆ. ತಾನು ಸೇರಿದಂತೆ ಯಾರೂ ಕೂಡ ವಿದ್ಯುತ್‌ ಬಿಲ್‌ ಪಾವತಿಸಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಶೇ. 95ರಷ್ಟು ಜನ ಇದರ ಲಾಭ ಪಡೆಯಬಹುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಶೇ. 95ರ ಒಳಗೆ ನಾನು ಕೂಡ ಬರುತ್ತೇನೆ. ನಾನು ಒಬ್ಬ ಫ‌ಲಾನುಭವಿ ಎಂಬುದು ದೃಢವಾಗಿರುವುದರಿಂದ ಇನ್ನು ನಾನು ಬಿಲ್‌ ಮೊತ್ತ ಪಾವತಿಸಲಾರೆ” ಎಂದು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ವಿದ್ಯುತ್‌ ಬಿಲ್‌ ಪಾವತಿಸಲು ನಿರಾಕರಿಸಿರುವ ಬಗ್ಗೆ ನಮಗೆ ಇದುವರೆಗೂ ಯಾವುದೇ ದೂರುಗಳು ಬಂದಿಲ್ಲ. ಸದ್ಯಕ್ಕೆ ಬಿಲ್‌ಗ‌ಳು ಪಾವತಿಯಾಗುತ್ತಿವೆ” ಎಂದು ಮೆಸ್ಕಾಂ ಅಧೀಕ್ಷಕ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಆಯ್ಕೆ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕುಡಿಯುವ ನೀರಿನ ಟ್ಯಾಂಕ್‍ಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ವ್ಯಕ್ತಿಯೊಬ್ಬ ಕುಡಿಯುವ ನೀರಿನ ಟ್ಯಾಂಕ್‍ಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್...

ತುಮಕೂರು | ಸಿದ್ದರಾಮಯ್ಯನವರ ₹2000 ಚುನಾವಣೆ ಇದಲ್ಲ: ವಿ ಸೋಮಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ₹2,000ದ ಚುನಾವಣೆ ಇದಲ್ಲ. ದೇಶದ ಭವಿಷ್ಯ ರೂಪಿಸುವ...

ಚಿತ್ರದುರ್ಗ | ಮತದಾನ ಪ್ರಮಾಣ ಹೆಚ್ಚಿಸಲು ವಾಕಥಾನ್ ಜಾಥಾ

ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ...

ವಿಜಯಪುರ | ಸ್ವಚ್ಚತೆ ಕಾಣದೆ ತುಂಬಿ ಹರಿಯುತ್ತಿವೆ ಚರಂಡಿ; ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಬಗೇರಿ,...