ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ನನ್ನನ್ನು ಸರ್ಕಾರ ಆಯ್ಕೆ ಮಾಡಿದೆ. ಇದು ಕಾವ್ಯಕ್ಕೆ ಸಿಕ್ಕ ಗೌರವ, ಸಾಮಾಜಿಕ ನ್ಯಾಯ ಎಂದು ಹಲವರು ಹೇಳುತ್ತಿದ್ದಾರೆ. ಆದರೆ, ಇದು ಸಾಮಾಜಿಕ ಕಲಾ ನ್ಯಾಯ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.
ಮಂಗಳವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಾನು ಸಿನಿಮಾ ಬರಹಾಗಾರ, ನನಗೆ ಕವಿ ಪಟ್ಟ ಬೇಡ” ಎಂದರು.
ಬರಗಾಲದಲ್ಲಿ ದಸರಾ ಆಚರಿಸುತ್ತಿದ್ದೇವೆ. ನಾವು ರೈತರ ವಿಚಾರವನ್ನು ಗಮನಿಸಿಬೇಕು. ರೈತರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಬೇಕು. ಸ್ಮಾರ್ಟಿ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಆಗಬೇಕು” ಎಂದು ಹೇಳಿದರು.
“ಕನ್ನಡದ ಅಸ್ಮಿತೆ ಕಾಪಾಡಬೇಕು. ಹಿಂದಿ ಹೇರಿಕೆ ಇಂದಿನದ್ದಲ್ಲ. ನಾನು ಎಂಟನೇ ತರಗತಿಯಲ್ಲಿದ್ದಾಗಲಿಂದಲೂ ಇದೆ. ದೆಹಲಿಗೆ ಕನ್ನಡ ಬೇಕಾಗಿಲ್ಲ – ನಮಗೆ ಹಿಂದಿ ಬೇಕಾಗಿಲ್ಲ” ಎಂದರು.
“ಮಕ್ಕಳು ಇಂಗ್ಲಿಷ್ನಲ್ಲೇ ಓದಬೇಕೆಂಬ ಆಸೆ ಪೊಷಕರಲ್ಲಿದೆ. ಇಂಗ್ಲಿಷ್ ಇದ್ದರೆ ಮಾತ್ರ ಕೆಲಸ ಸಿಗುವುದು ಎಂಬ ಭಾವನೆ ಅವರಲ್ಲಿದೆ. ಮನೆಯಲ್ಲಿ ಇಂಗ್ಲಿಷ್ ಕಲಿಸುವ ಹಂತಕ್ಕೆ ಪೋಷಕರು ಹೋಗಿದ್ದಾರೆ. ಇಂಗ್ಲಿಷ್ ಕೆಲಸಕ್ಕೆ ಇಟ್ಟುಕೊಳ್ಳಿ ಕನ್ನಡದ ಅಸ್ಮಿತೆ ಉಳಿಸಲು ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ ಆಗಬೇಕು” ಎಂದು ಹೇಳಿದರು.