ಜನಪರ ಆಡಳಿತ ನಡೆಸುವಂತೆ ಸರ್ಕಾರಕ್ಕೆ ‘ಎದ್ದೇಳು ಕರ್ನಾಟಕ’ ತಾಕೀತು

Date:

“ಕೊಟ್ಟ ಭರವಸೆಗಳನ್ನು ಈಡೇರಿಸಬೇಕು. ಬಿಜೆಪಿಯ ದುರಾಡಳಿತವು ಜಾರಿಗೊಳಿಸಿರುವ ವಿನಾಶಕಾರಿ ಕ್ರಮಗಳನ್ನು ಸರಿಪಡಿಸಬೇಕು. ಜನತೆಯ ಆಗ್ರಹಗಳಿಗೆ ಸರ್ಕಾರ ಸ್ಪಂದಿಸಬೇಕು. ಜನರಿಗಾಗಿ, ಜನರ ಬದುಕಿಗಾಗಿ ಸರ್ಕಾರ ಕೆಲಸ ಮಾಡಬೇಕು” ಎಂದು ನೂತನ ಕಾಂಗ್ರೆಸ್‌ ಸರ್ಕಾರಕ್ಕೆ “ಎದ್ದೇಳು ಕರ್ನಾಟಕ ಅಭಿಯಾನ” ತಾಕೀತು ಮಾಡಿದೆ.

ಚುನಾವಣಾ ಸಮಯದಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಹಲವಾರು ಸಂಘಟನೆಗಳು ‘ಎದ್ದೇಳು ಕರ್ನಾಟಕ ಅಭಿಯಾನ’ದಡಿ ಶ್ರಮಿಸಿವೆ. ರಾಜ್ಯಾದ್ಯಂತ ಅಭಿಯಾನಕ್ಕಾಗಿ ದುಡಿದ ಕಾರ್ಯಕರ್ತರನ್ನು ಅಭಿನಂದಿಸಲು ಬೆಂಗಳೂರಿನಲ್ಲಿ ಶುಕ್ರವಾರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಅಭಿಯಾನವು ಸರ್ಕಾರದ ಹೊಣೆಗಾರಿಕೆಗಳ ಪತ್ರವನ್ನು ಮಂಡಿಸಿದ್ದು, ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಸಲ್ಲಿಸಿತು.

ಸಮಾವೇಶದಲ್ಲಿ ಅಭಿಯಾನವು ಸರ್ಕಾರದ ಮುಂದಿಟ್ಟ ಹಕ್ಕೊತ್ತಾಯಗಳನ್ನು ಮಂಡಿಸಿ ‘ಕರ್ನಾಟಕ ಜನಶಕ್ತಿ’ಯ ರಾಜ್ಯಾಧ್ಯಾಕ್ಷ ನೂರ್‌ ಶ್ರೀಧರ್ ಮಾತನಾಡಿದರು. “ಚುನಾವಣೆಯಲ್ಲಿನ ಕಾಂಗ್ರೆಸ್‌ ಗೆಲುವು ಕಾಂಗ್ರೆಸ್‌ನ ಗೆಲುವು ಮಾತ್ರವಲ್ಲ. ಅದು, ಜನಸಾಮಾನ್ಯರ ಗೆಲುವು. ಇದನ್ನು ಸರ್ಕಾರದ ಚುಕ್ಕಾಣಿ ಹಿಡಿದಿರುವವರು ಒಪ್ಪಿಕೊಳ್ಳಬೇಕು. ಬಿಜೆಪಿಯ ದುರಾಡಳಿತದ ವಿರುದ್ಧದ ಜನರ ಒಡಲೊಳಗಿನ ಸಿಟ್ಟು ಕಾಂಗ್ರೆಸ್‌ಗೆ ಅಧಿಕಾರ ನೀಡಿದೆ. ಜನರನ್ನು ಜಾಗೃತಗೊಳಿಸಲು, ಕೋಮುವಾದಿಗಳ ವಿರುದ್ಧ ಮತ ಚಲಾಯಿಸುವಂತೆ ಪ್ರೇರೇಪಿಸಲು ಜನಪರ ಸಂಘಟನೆಗಳು, ತಳಸಮುದಾಯದ ಸಂಸ್ಥೆಗಳು, ಸಾಹಿತಿ-ಚಿಂತಕರು ಅವಿರತವಾಗಿ ದುಡಿದಿದ್ದಾರೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಎಲ್ಲ ಸಂಘಟನೆಗಳು ಒಗ್ಗೂಡಿ ನಡೆಸಿದ ವಿಶೇಷ ಪ್ರಯತ್ನ ‘ಎದ್ದೇಳು ಕರ್ನಾಟಕ’ ಅಭಿಯಾನವಾಗಿದೆ. ಇದು, ಜನಾಭಿಪ್ರಾಯವನ್ನು ರೂಪಿಸುವ ಹಾಗೂ ಜಾತ್ಯತೀತ ಮತಗಳನ್ನು ಸಂಘಟಿತಗೊಳಿಸುವ– ಎರಡೂ ರೀತಿಯ ಕರ್ತವ್ಯಗಳನ್ನು ನಿಭಾಯಿಸಿದೆ” ಎಂದರು.

“ಸಂವಿಧಾನ ವಿರೋಧಿ, ಸರ್ವಾಧಿಕಾರಿ, ಸಮಾಜಘಾತುಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲೇಬೇಕೆಂಬ ತುಡಿತವೇ ಈ ಅಭಿಯಾನದ ಪ್ರೇರಕ ಶಕ್ತಿಯಾಗಿತ್ತು. ಇದರ ಜೊತೆಗೆ, ಜನರಲ್ಲಿ ಮಡುಗಟ್ಟಿದ್ದ ಸಿಟ್ಟು, ಕಾಂಗ್ರೆಸ್‌ನ ಗ್ಯಾರಂಟಿಗಳು, ಸಾಮಾಜಿಕ ಶಕ್ತಿಗಳು ನಿರ್ವಹಿಸಿದ ಸಕ್ರಿಯ ಪಾತ್ರ ರಾಜ್ಯದಲ್ಲಿ ಬದಲಾವಣೆ ಬಿರುಗಾಳಿಯನ್ನು ಬೀಸುವಂತೆ ಮಾಡಿತು. ಅದರ ಫಲಿತಾಂಶ ನಮ್ಮ ಮುಂದಿದೆ” ಎಂದರು.

“ಇಂತಹ ಬದಲಾವಣೆಯ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರ ಹೆಚ್ಚಿನ ಜವಬ್ದಾರಿಗಳನ್ನು ನಿಭಾಯಿಸಬೇಕು. ಮುಖ್ಯವಾಗಿ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಬೇಕಿದೆ. ಜನರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ನಿಜವಾದ ಪರಿಹಾರ ಇರುವುದು ಜನರ ಆದಾಯ ಹೆಚ್ಚಳದಲ್ಲಿ, ಉದ್ಯೋಗ ಖಾತ್ರಿಯಲ್ಲಿ, ಸೌಹಾರ್ದ ಪರಿಸರ ರೂಪಿಸುವುದರಲ್ಲಿ. ಅದಕ್ಕಾಗಿ ಸರ್ಕಾರ ಒತ್ತು ನೀಡಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್‌-ಬಿಜೆಪಿ ನಡುವಿನ ಹೋರಾಟವಲ್ಲ, ಕೋಮುವಾದ ವಿರುದ್ಧದ ಜನರ ಹೋರಾಟ: ಸಿಎಂ ಸಿದ್ದರಾಮಯ್ಯ

“ಬಿಜೆಪಿಯ ದುರಾಡಳಿತದಿಂದ ಜಾರಿಯಾಗಿರುವ ವಿನಾಶಕಾರಿ ಕ್ರಮಗಳನ್ನು ಸರಿಪಡಿಸಬೇಕು. ಬಂಡವಾಳಶಾಹಿಗಳ ಪರವಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ, ಎನ್‌ಇಪಿ, ಮತಾಂತರ ನಿಷೇಧ ಕಾಯ್ದೆ, ವಿದ್ಯುತ್‌ ಖಾಸಗೀಕರಣ ಕಾಯ್ದೆ, ಪಠ್ಯ ಮನುವಾದೀಕರಣ, ಅಲ್ಪಸಂಖ್ಯಾತರಿಗೆ ಮೀಸಲಾತಿ ರದ್ದತಿ ನೀತಿಗಳನ್ನು ರದ್ದುಗೊಳಿಸಬೇಕು. ಜನಪರ ಕಾಯ್ದೆಗಳನ್ನು ರೂಪಿಸಬೇಕು. ಎಲ್ಲ ವರ್ಗ, ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕು” ಎಂದು ಆಗ್ರಹಿಸಿದರು.

“ಸರ್ಕಾರವು ಜನರು ಏನು ಕೇಳುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ಕೆಲಸ ಮಾಡಬೇಕು. ನಾನಾ ರೀತಿಯ ಜನವರ್ಗ ನಾನಾ ರೀತಿಯ ಹಕ್ಕೊತ್ತಾಯಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿವೆ. ಅವರ ಹಕ್ಕೊತ್ತಾಯಗಳೇನೆಂದು ಆಲಿಸಬೇಕು. ಪರಿಹಾರ ಹುಡುಕಬೇಕು. ರೈತರ ಬೆಳೆಗೆ ನ್ಯಾಯಯುತ ಬೆಲೆ ನೀಡಬೇಕು. ಬಗರ್ ಹುಕುಂ, ರೈತರಿಗೆ ಹಕ್ಕುಪತ್ರ, ವಸತಿಹೀನರಿಗೆ ನಿವೇಶನ, ನರೇಗಾ ಯೋಜನೆಯ ಬಲವರ್ಧನೆ, ಕನಿಷ್ಠ ಕೂಲಿಯ ಹೆಚ್ಚಳ, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ನ್ಯಾಯ, ಮಹಿಳೆಯರ ರಕ್ಷಣೆ ಮತ್ತು ಸೂಕ್ತ ಸ್ಥಾನಮಾನ ಸೇರಿದಂತೆ ಹಲವಾರು ಮೂಲಭೂತ ಅಗತ್ಯಗಳನ್ನು ಸರ್ಕಾರ ಪೂರೈಸಬೇಕು. ಅದಕ್ಕಾಗಿ ಕೆಲಸ ಮಾಡಬೇಕು” ಎಂದು ಅಭಿಯಾನದ ಪರವಾಗಿ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಡಗು | ಎಸ್ಟೇಟ್ ಕಾರ್ಮಿಕನನ್ನು ಕೊಂದಿದ್ದ ಹುಲಿ ಸೆರೆ

ಇತ್ತೀಚೆಗೆ ಕೊಡಗಿನಲ್ಲಿ ಎಸ್ಟೇಟ್ ಕಾರ್ಮಿಕನನ್ನು ಕೊಂದಿದ್ದ ಹುಲಿಯನ್ನು ಶುಕ್ರವಾರ ಅರಣ್ಯ ಅಧಿಕಾರಿಗಳು...

ಲೋಕಸಭಾ ಚುನಾವಣೆ | ಮತದಾನ ಮಾಡಿದವರಿಗೆ ಜ್ಯೂಸ್, ತಿಂಡಿ ನೀಡಲು ಮುಂದಾದ ಹೋಟೆಲ್‌ಗಳು

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ  ಮತದಾನ...

ಶಿವಮೊಗ್ಗ | ಬಿಜೆಪಿ ಶ್ರೀಮಂತರ ಓಲೈಕೆ ರಾಜಕಾರಣ ಮಾಡುತ್ತಿದೆ: ಕಿಮ್ಮ‌ನೆ ರತ್ನಾಕರ

ಬಿಜೆಪಿಯಿಂದ ಶ್ರೀಮಂತರ ಓಲೈಕೆಯ ರಾಜಕಾರಣ ನಡೆಯುತ್ತಿದೆ‌. ಅದನ್ನು ತಡೆಯಬೇಕಿದೆ ಎಂದು ಮಾಜಿ...

ಬೆಂಗಳೂರು | ಬರೋಬ್ಬರಿ ₹67.5 ಕೋಟಿಗೆ ಸೇಲ್ ಆದ ಕೋರಮಂಗಲದ ನಿವೇಶನ

ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ನಗರ. ನಗರದಲ್ಲಿ ಒಂದು ಸ್ವಂತ...