ತಮ್ಮ ಮುಂದಿನ ಭವಿಷ್ಯದಲ್ಲಿ ಉತ್ತಮ ಜೀವನವನ್ನು ನಿರ್ಮಿಸಿಕೊಳ್ಳಿ. ಇನ್ನುಮುಂದೆ ನಿಮ್ಮ ಜವಾಬ್ದಾರಿಗಳು ನಿಮ್ಮ ಹೆಗಲು ಏರಿವೆ. ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಜೀವನವನ್ನು ಹೇಗೆ ರೂಪಿಸಿಕೊಳ್ಳುವಿರೋ ಹಾಗೆ ನಿಮ್ಮ ಬದುಕು ರೂಪಗೊಳ್ಳುತ್ತದೆ” ಎಂದು ಗದಗ ತಾಲೂಕಿನ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಇಂಗಳಹಳ್ಳಿ ಹೇಳಿದರು.
ಗದಗ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಎಲ್ಲ ಕಾಲೇಜು ವಿದ್ಯಾರ್ಥಿ ನಿಲಯಗಳ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಚಿಂಚಿಲಾ ಮಾತನಾಡಿ, “ಮೂರು ವರ್ಷದ ಡಿಗ್ರಿ ವ್ಯವಸ್ಥೆ ಮುಕ್ತಾಯವಾಗಿದೆಯೆಂದು ತಿಳಿದುಕೊಳ್ಳಬೇಡಿ. ಜೀವನದಲ್ಲಿ ಸಾಕಷ್ಟು ಕಲಿಯುವುದು ಇದೆ. ಅದು ನಿರಂತರ ಕಲಿಕೆಯಾಗಿರುತ್ತದೆ. ಪದವಿ ಮುಗಿಸಿ ಉನ್ನತ ಶಿಕ್ಷಣ ಪಡೆದು ನೌಕರಿ ಪಡೆಯುವುದಷೇ ಅಲ್ಲ. ಸಮಾಜದ ಜವಾಬ್ದಾರಿ ನಿಮ್ಮ ಮೇಲಿದೆ. ಅದನ್ನೂ ಕೂಡ ಹೋರಬೇಕಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗಿಲ್ಲ ಬೋಧಕರು; ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಹಾಸ್ಟೆಲ್‌ನಲ್ಲಿದ್ದು, ನೌಕರಿ ತಗೆದುಕೊಂಡು ಹೋದಂತಹ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ, ಮಂಜುಳಾ ಚಿಂಚಲಿ, ಎಲ್ಲ ವಸತಿ ನಿಲಯದ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಇದ್ದರು.