ಬೆಂಗಳೂರು-ಸೇಲಂ ಮಾರ್ಗದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು

Date:

ಮಧುರೈ ವಿಭಾಗದ ಮಾಳವಿಟ್ಟನ್ ರೈಲ್ವೆ ನಿಲ್ದಾಣದಿಂದ ಮೈಸೂರು ವಿಭಾಗದ ಹಾವೇರಿ ನಿಲ್ದಾಣಕ್ಕೆ 2,408 ಟನ್‌ಗಳಷ್ಟು ರಸಗೊಬ್ಬರ ಸಾಗಿಸುತ್ತಿದ್ದ ಸರಕು ರೈಲಿನ ಆರು ಬೋಗಿಗಳು ಬೆಂಗಳೂರಿನಿಂದ ಸುಮಾರು 99 ಕಿ.ಮೀ ದೂರದಲ್ಲಿ ಹಳಿತಪ್ಪಿವೆ.

ರೈಲಿನಲ್ಲಿರುವ ಲೋಕೋ ಪೈಲಟ್ (ಎಲ್‌ಪಿ), ಸಹಾಯಕ ಎಲ್‌ಪಿ ಮತ್ತು ಟ್ರೈನ್ ಮ್ಯಾನೇಜರ್ ಸುರಕ್ಷಿತವಾಗಿದ್ದಾರೆ. ನಾಲ್ಕು ರೈಲುಗಳನ್ನು ರದ್ದುಪಡಿಸಲಾಗಿದ್ದು, ಎಂಟು ರೈಲುಗಳನ್ನು ಬೇರೆಡೆಗೆ ಮಾರ್ಗ ಬದಲಿಸಲಾಗಿದ್ದು, ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ.

“ಬೆಂಗಳೂರು-ಸೇಲಂ ವಿಭಾಗದ ಮಾರಂಡಹಳ್ಳಿ ಮತ್ತು ರಾಯಕೊಟ್ಟೈ ನಿಲ್ದಾಣಗಳ ನಡುವೆ ಅಪಘಾತ ಸಂಭವಿಸಿದೆ. ರೈಲು ಹಳಿ ತಪ್ಪಲು ಕಾರಣ ತಿಳಿದುಬಂದಿಲ್ಲ” ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ರೈಲಿನಲ್ಲಿ ಒಟ್ಟು 42 ಬೋಗಿಗಳಿದ್ದು, ರಸಗೊಬ್ಬರ ಚೀಲಗಳನ್ನು ಸಾಗಿಸಲಾಗುತ್ತಿತ್ತು. ಹಿರಿಯ ಅಧಿಕಾರಿಗಳು ಸೇರಿದಂತೆ ಬೆಂಗಳೂರು ವಿಪತ್ತು ನಿರ್ವಹಣಾ ತಂಡವು ಅಪಘಾತ ಪರಿಹಾರ ರೈಲಿನೊಂದಿಗೆ ಮುಂಜಾನೆ 3 ಗಂಟೆಗೆ ಹಳಿ ತಪ್ಪಿದ ಸ್ಥಳಕ್ಕೆ ತೆರಳಿದ್ದು, ಪುನಃಸ್ಥಾಪನೆ ಪ್ರಗತಿಯಲ್ಲಿದೆ” ಎಂದು ಪ್ರಕಟಣೆ ತಿಳಿಸಿದೆ.

“ಈ ರೈಲು ಬಿಸಿಎನ್ ಬೋಗಿಗಳನ್ನು ಒಳಗೊಂಡಿದೆ. ಎಲ್‌ಪಿ, ಎಎಲ್‌ಪಿ ಮತ್ತು ಟ್ರೈನ್ ಮ್ಯಾನೇಜರ್ ಸುರಕ್ಷಿತವಾಗಿದ್ದಾರೆ. ಹಿಂದಿನ ಭಾಗದಲ್ಲಿರುವ ಬೋಗಿಗಳುಳು ಹಳಿ ತಪ್ಪಿವೆ. ಹಾಗಾಗಿ ಸರಕುಗಳನ್ನು ಕೆಳಗಿಳಿಸುವ ಕಾರ್ಯ ನಡೆಯುತ್ತಿದೆ. ರೈಲು ಸಂಚಾರಕ್ಕೆ ತೆರೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ” ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಉಸ್ತುವಾರಿ) ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕೆಎಸ್ಆರ್ ಬೆಂಗಳೂರು-ಜೋಲಾರ್‌ಪೇಟೆ-ಕೆಎಸ್ಆರ್ ಬೆಂಗಳೂರು ಮೆಮು ಸ್ಪೆಷಲ್ ರೈಲು (ರೈಲು ಸಂಖ್ಯೆ 06551/06552) ಶುಕ್ರವಾರ ರದ್ದಾಗಿದೆ. ಕೆಎಸ್‌ಆರ್‌ನಿಂದ ಬೆಳಗ್ಗೆ 8.45ಕ್ಕೆ ಮತ್ತು ಜೋಲಾರ್ ಪೇಟೆಯಿಂದ ಮಧ್ಯಾಹ್ನ 2 ಗಂಟೆಗೆ ಹೊರಡಬೇಕಿತ್ತು.  ಸೇಲಂ-ಯಶವಂತಪುರ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16212) ಸೇಲಂನಿಂದ ಮತ್ತು ಧರ್ಮಪುರಿಯಿಂದ ಹೊರಡುವ ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (ರೈಲು ಸಂಖ್ಯೆ 06278) ರೈಲು ಧರ್ಮಪುರಿಯಿಂದ ಹೊರಡುತ್ತದೆ.

ಮಾರ್ಗ ಬದಲಿಸಿದ ರೈಲುಗಳು:

ಇಲ್ಲಿಯವರೆಗೆ ಒಟ್ಟು ಎಂಟು ರೈಲುಗಳನ್ನು ಬೇರೆಡೆಯಿಂದ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ತಿರುನೆಲ್ವೇಲಿಯಿಂದ ಪ್ರಾರಂಭವಾಗುವ ತಿರುನೆಲ್ವೇಲಿ – ದಾದರ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 11022); ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16235) ಟುಟಿಕೋರಿನ್‌ನಿಂದ ಹೊರಡುತ್ತದೆ. ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16528) ಕಣ್ಣೂರಿನಿಂದ ಹೊರಡುತ್ತದೆ. ಮಯಿಲಾಡುತುರೈ-ಮೈಸೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16231) ಮಯಿಲಾಡುತುರೈನಿಂದ ಹೊರಡುತ್ತದೆ. ನಾಗರಕೋಯಿಲ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17236) ನಾಗರಕೋಯಿಲ್ ಮತ್ತು ಕೊಯಮತ್ತೂರು- ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 11014) ಕೊಯಮತ್ತೂರಿನಿಂದ ಹೊರಡುತ್ತವೆ. ಈ ಆರು ರೈಲುಗಳು ಸೇಲಂ, ತಿರುಪತ್ತೂರು, ಜೋಲಾರ್‌ಪೇಟೆ ಎ ಕ್ಯಾಬಿನ್ ಮತ್ತು ಕೃಷ್ಣರಾಜಪುರಂ ಮೂಲಕ ಪ್ರಯಾಣವನ್ನು ಪ್ರಾರಂಭಿಸುತ್ತವೆ.

ಈ ಸುದ್ದಿ ಓದಿದ್ದೀರಾ? ಕನ್ನಡದ ಖ್ಯಾತ ಕತೆಗಾರ, ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ ಇನ್ನಿಲ್ಲ

ಕೆಎಸ್ಆರ್ ಬೆಂಗಳೂರು – ಎರ್ನಾಕುಲಂ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 12677) ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಕಾರೈಕಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16529) ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಡುವ ರೈಲುಗಳು ಕೃಷ್ಣರಾಜಪುರಂ, ಜೋಲಾರ್‌ಪೇಟೆ ಎ ಕ್ಯಾಬಿನ್, ತಿರುಪತ್ತೂರು ಮತ್ತು ಸೇಲಂ ಮೂಲಕ ಪ್ರಯಾಣಿಸುತ್ತವೆ.

ಮಾರ್ಗ ಬದಲಿಸಿದ ಎಲ್ಲ ರೈಲುಗಳಿಗೆ ಕುಪ್ಪಂ, ಬಂಗಾರಪೇಟೆ, ಮಾಲೂರು ಮತ್ತು ಕೃಷ್ಣರಾಜಪುರಂನಲ್ಲಿ ಒಂದು ನಿಮಿಷ ಹೆಚ್ಚುವರಿ ನಿಲುಗಡೆ ನೀಡಲಾಗುವುದು ಎಂದು ತಿಳಿದುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ

ಸೀತಾಫಲ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಸ್ವಾದಿಷ್ಟ, ರೋಗ...

ಕಾವೇರಿ ವಿವಾದ | ತಮಿಳು ನಟ ಸಿದ್ಧಾರ್ಥ್‌ ಕ್ಷಮೆ ಕೇಳಿದ ನಟ ಶಿವರಾಜ್‌ಕುಮಾರ್

ತಮಿಳು ನಟ ಸಿದ್ಧಾರ್ಥ್‌ ಅವರ ಸುದ್ದಿಗೋಷ್ಠಿಗೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ...

ಕರ್ನಾಟಕ ಬಂದ್ | ದಾವಣಗೆರೆ: ತಮಿಳುನಾಡಿ ನೀರು ಹರಿಸದಂತೆ ಒತ್ತಾಯಿಸಿ ಕರವೇ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಕಾವೇರಿ ನಿರ್ವಹಣಾ...

ಹಾವೇರಿ | ಕಾವೇರಿ ನೀರು ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಲಿ

ರಾಜ್ಯ ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯ ವಿವಿಧ ಸಂಘಟನೆಗಳ...