ಹಾಸನ | ಎಲ್ಲರಿಂದ ಸಮ್ಮತಿ ಸಿಕ್ಕರೆ ಮಾತ್ರ ಸ್ಪರ್ಧೆ: ಕೆ ಎಂ ರಾಜೇಗೌಡ

Date:

  • ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಕುರಿತು ಸ್ಪಷ್ಟನೆ
  • ನಾನು ಯಾರ ಪರ, ವಿರುದ್ಧವೂ ಇಲ್ಲ ಎಂದ ರಾಜೇಗೌಡ

ನಾನು ಯಾರ ಪರವಾದ ಅಭ್ಯರ್ಥಿಯಲ್ಲ. ಜೆಡಿಎಸ್‌ನಲ್ಲಿ ಎಲ್ಲರಿಂದಲೂ ಸಮ್ಮತಿ ಸಿಕ್ಕರೆ ಮಾತ್ರ ಸ್ಪರ್ಧೆಗಿಳಿಯುವೆ ಎಂದು ಪಕ್ಷದ ಹಿರಿಯ ಮುಖಂಡ ಕೆ.ಎಂ ರಾಜೇಗೌಡ ಸ್ಪಷ್ಟಪಡಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಾಕಾಂಕ್ಷಿಗಳಲ್ಲಿ ನನ್ನ ಹೆಸರು ಪ್ರಸ್ತಾಪವಾದ ನಂತರ ನನ್ನ ಬಗ್ಗೆ ವಿಭಿನ್ನ ಹೇಳಿಕೆಗಳು ಕೇಳಿ ಬರುತ್ತಿವೆ. ನಾನು ಯಾರ ಪರ, ವಿರುದ್ಧವೂ ಇಲ್ಲ. ಯಾರ ಬಿಂಬಿತ ಅಭ್ಯರ್ಥಿಯೂ ಅಲ್ಲ” ಎಂದು ಹೇಳಿದರು.

“ಭವಾನಿ ರೇವಣ್ಣ ಅವರೇ ಅಭ್ಯರ್ಥಿ ಎಂಬ ಮಾತುಗಳು ಈಗ ಕೇಳಿಬರುತ್ತಿವೆ. ಆದರೆ, ಪಕ್ಷದ ಎಲ್ಲ ಮುಖಂಡರೂ ಸಂಘಟಿತರಾಗಿ ಚುನಾವಣೆಯಲ್ಲಿ ಬೆಂಬಲ ನೀಡಿ ಹೋರಾಟ ಮಾಡುವ ನಿಖರ ಭರವಸೆ ನೀಡಿದರೆ ಮತ್ತು ನಾನು ಸರ್ವಸಮ್ಮತ ಅಭ್ಯರ್ಥಿಯಾದರೆ ಮಾತ್ರ ಸ್ಪರ್ಧಿಸುತ್ತೇನೆ” ಎಂದರು.

“ಪಕ್ಷದಲ್ಲಿ ಒಮ್ಮತ ಮೂಡಿ ಸ್ಪರ್ಧೆಗಿಳಿಯಿರಿ ಎಂದರೆ ಸ್ಪರ್ಧಿಸುವೆ. ಇಲ್ಲವೇ ಪಕ್ಷದ ಮುಖಂಡರು ಸೂಚಿಸುವ ಅಭ್ಯರ್ಥಿ ಪರ ಪ್ರಚಾರ ಮಾಡುವೆ” ಎಂದು ಹೇಳಿದರು.

“ಚುನಾವಣೆಯಲ್ಲಿ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಘೋಷಣೆ ಆಗುವವರೆಗೂ ನಾನು ಪ್ರಚಾರ ಮಾಡಲು ಹೋಗುವುದಿಲ್ಲ. ನಮ್ಮ ಪಕ್ಷದಲ್ಲಿ ಒಗ್ಗಟ್ಟಿರಬೇಕು. ಒಟ್ಟಾಗಿ ಎಂಬುದು ನನ್ನ ಅಪೇಕ್ಷೆ” ಎಂದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಸಚಿವರು | ಆರ್‌ ಬಿ ತಿಮ್ಮಾಪೂರ್‌ ಮಂತ್ರಿಯಾದರೂ ಮುಧೋಳ ಕ್ಷೇತ್ರದ ಜನರಿಗೆ ನೀಗದ ಬವಣೆ  

ಬಾಗಲಕೋಟೆ ಜಿಲ್ಲೆಯ ಏಕೈಕ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಮಾಜಿ ಉಪ ಮುಖ್ಯಮಂತ್ರಿ,...

ಮಂಡ್ಯ | ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ : ಸಚಿವ ಎನ್ ಚೆಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಪರಿಹರಿಸಿ, ಜಿಲ್ಲೆಯ...

ರಾಮನಗರ | ಕಾಡಾನೆ ದಾಳಿಗೆ ಸಾವು; ಕುಟುಂಬಕ್ಕೆ ಸಚಿವರಿಂದ ಪರಿಹಾರದ ಚೆಕ್‌ ವಿತರಣೆ

ರಾಮನಗರ ಜಿಲ್ಲೆ ಕನಕಪುರ ಬಳಿಯ ಮುತ್ತುರಾಯನ ದೊಡ್ಡಿ ಗ್ರಾಮಕ್ಕೆ ಅರಣ್ಯ ಜೀವಿಶಾಸ್ತ್ರ...

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

1500 ಕಾರ್ಮಿಕರಿಗೆ ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ನೆರವು ಕಾರ್ಮಿಕರ ನೆರವಿಗೆ...