ಸರ್ಕಾರಿ ಶಿಕ್ಷಕರ ಗೈರು ಹಾಜರಿ ತಡೆಗೆ ‘ಜಿಪಿಎಸ್‌’ ಕ್ರಮ

Date:

ಕಲಬುರಗಿ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಯ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ಶಿಕ್ಷಕರು ಜಿಪಿಎಸ್‌ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಮೂಲಕ ತಾವಿರುವ ಸ್ಥಳಗಳನ್ನು ದೃಢೀಕರಿಸಬೇಕು ಎಂದು ಅಲ್ಲಿನ ಬಿಇಒ ವೀರಣ್ಣ ಬೊಮ್ಮನಳ್ಳಿ ಸೂಚಿಸಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕರು ಗೈರು ಹಾಜರಾಗುತ್ತಿದ್ದಾರೆ. ಯಾವಾಗಲೋ ಬಂದು ಹಾಜರಾತಿ ಹಾಕುತ್ತಾರೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆ ಈ ನಿರ್ದೇಶನ ಹೊರಡಿಸಿದ್ದಾರೆ. ಅದರಂತೆ, ಕಲಬುರಗಿ ಉತ್ತರ ಬಿಇಒ ಕಚೇರಿ ವ್ಯಾಪ್ತಿಯ 207 ಸರ್ಕಾರಿ ಶಾಲೆಗಳ ಶಿಕ್ಷಕರು ಪ್ರತಿ ದಿನ ಬೆಳಗ್ಗೆ ಪಾರ್ಥನೆಯ ಸಮಯ ಮತ್ತು ಶಾಲೆ ಮುಚ್ಚುವ ಸಮಯದಲ್ಲಿ ಜಿಪಿಎಸ್‌ ಸ್ಥಳಗಳನ್ನು ವಾಟ್ಸಾಪ್‌ನಲ್ಲಿ ದೃಢಪಡಿಸಬೇಕು ಎಂದು ಸೂಚಿಸಲಾಗಿದೆ.

ಈ ಕ್ರಮವು ಕಡ್ಡಾಯವಲ್ಲದಿದ್ದರೂ, ಶಿಕ್ಷಕರು ಮತ್ತು ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಶಿಕ್ಷಕರು ವಿಶೇಷವಾಗಿ ದೂರದ ಪ್ರದೇಶಗಳ ಶಾಲೆಗಳಿಗೆ ತೆರಳುವವರು ತರಗತಿಗಳನ್ನು ಬಂಕ್ ಮಾಡುವುದು ಮತ್ತು ಅನಧಿಕೃತ ರಜೆ ತೆಗೆದುಕೊಳ್ಳುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹಲವಾರು ಪೋಷಕರು ಹೇಳಿದ್ದಾರೆ.

ಕಮಲಾಪುರ ತಾಲೂಕಿನಲ್ಲಿ ಶಿಕ್ಷಕರ ಗೈರು ಹಾಜರಾತಿಯ ದೂರುಗಳು ಹೆಚ್ಚಾಗಿ ಕೇಳಿಬಂದಿವೆ. ಇತ್ತೀಚೆಗಷ್ಟೇ ಕಮಲಾಪುರ ಹೊಸ ತಾಲೂಕಾಗಿ ಘೋಷಣೆಯಾಗಿದ್ದು, ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸ್ಥಾಪನೆಯಾಗಿಲ್ಲ. ಕಲಬುರಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಕಮಲಪುರ ತಾಲೂಕಿನ ಹಲವಾರು ಶಾಲೆಗಳು 70 ಕಿ.ಮೀ ಅಧಿಕ ದೂರದಲ್ಲಿವೆ. ಪರಿಣಾಮವಾಗಿ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಲು ಸಾಧ್ಯವಾಗದೆ, ಶಿಕ್ಷಕರ ಮೇಲೆ ನಿಗಾ ಇಡುವುದು ಕಷ್ಟವಾಗಿದೆ. ಹೀಗಾಗಿ, ಜಿಪಿಎಸ್‌ ಮೊರೆ ಹೋಗಿದ್ದೇವೆ ಎಂದು ಬಿಇಒ ಬೊಮ್ಮನಳ್ಳಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಶಾಸಕ ಪ್ರದೀಪ್ ಈಶ್ವರ್ ಸಹಾಯ ಅರಸಿ ಬಂದ ವೃದ್ಧೆ; ಬರಿಗೈನಲ್ಲೇ ವಾಪಸ್

“ನಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ 226 ವಿದ್ಯಾರ್ಥಿಗಳಿದ್ದಾರೆ. ಆದರೆ, ಕೇವಲ ನಾಲ್ವರು ಶಿಕ್ಷಕರಿದ್ದಾರೆ. ಈ ಹಿಂದೆ ಖಾಯಂ ಶಿಕ್ಷಕರು ಅತಿಥಿ ಶಿಕ್ಷಕರಿಗೆ ತರಗತಿಗಳನ್ನು ನಡೆಸುವಂತೆ ಹೇಳಿ, ಗೈರಾಗುತ್ತಿದ್ದರು. ಆದರೆ, ಈಗ ಅನುಸರಿಸಿದ ಕಟ್ಟುನಿಟ್ಟಿನ ಕ್ರಮಗಳು ಶಿಕ್ಷಕರು ಶಾಲೆಗೆ ಬರುವಂತೆ ಮಾಡಿದೆ” ಎಂದು ಮರಮಂಚಿ ತಾಂಡಾ ನಿವಾಸಿ ಸಂಜೀವ್ ಕುಮಾರ್ ರಾಠೋಡ್ ಹೇಳಿರುವುದಾಗಿ ಡಿಎಚ್ ವರದಿ ಮಾಡಿದೆ.

“ಬಹುತೇಕ ಗ್ರಾಮಗಳು ಮತ್ತು ತಾಂಡಾಗಳಿಗೆ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲ. ಈಗ ಅವರು ಪ್ರತಿದಿನ ತಮ್ಮ ಶಾಲೆಗಳಿಗೆ ಪ್ರಯಾಣಿಸಲು ಕ್ರೂಸರ್ ಮತ್ತು ಇತರ ವಾಹನಗಳನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ” ಎಂದು ಕಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಗಮೇಶ್ ಕೊಪ್ಪರಾದ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೀದರ್ | ಔರಾದ ಶಾಸಕರ ಊರಿನಲ್ಲೇ ಇಲ್ಲ ಖಾಯಂ ಶಿಕ್ಷಕರು

“ಶಿಕ್ಷಕರು ಗೈರುಹಾಜರಾಗುತ್ತಿರುವ ಬಗ್ಗೆ ಇಲಾಖೆಗೆ ಹಲವಾರು ದೂರುಗಳು ಬಂದಿವೆ. ಅವರನ್ನು ನಿಯಂತ್ರಿಸಲು ಜಿಪಿಎಸ್ ಕ್ರಮ ಉತ್ತಮವಾಗಿದೆ. ಎಲ್ಲ ಸರ್ಕಾರಿ ಶಾಲೆಗಳಿಗೂ ವಿಸ್ತರಿಸುವ ಮುನ್ನ ಸಾಧಕ-ಬಾಧಕಗಳ ಕುರಿತು ಅಧ್ಯಯನ ಮಾಡಲಾಗುವುದು” ಎಂದು ಕಲ್ಯಾಣ ಕರ್ನಾಟಕ ಶಾಲಾ ಶಿಕ್ಷಣ ಹೆಚ್ಚುವರಿ ಆಯುಕ್ತ ಆನಂದ್ ಪ್ರಕಾಶ್ ಮೀನಾ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ತಮ್ಮ ಹಕ್ಕುಗಳಿಗಾಗಿ ಲಿಂಗತ್ವ ಅಲ್ಪಸಂಖ್ಯಾತರ ಹೋರಾಟ

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಗೌರವಯುತ ಜೀವನ ನಡೆಸಲು ತಮಗೆ ಲಿಂಗತ್ವ ಅಲ್ಪಸಂಖ್ಯಾತರ...

ಕಲಬುರಗಿ | ಅಕ್ರಮ ಸಾಗಾಟ; 9 ಲೀಟರ್ ಮದ್ಯ, 45 ಲಕ್ಷ ರೂ. ಮೌಲ್ಯದ ಬಸ್ ವಶ

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಸ್‌ ತಡೆದು ಅಬಕಾರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ...

ಯಾದಗಿರಿ | ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥ

ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಯಾದಗಿರಿ...

ಗದಗ | ಜನತಾದರ್ಶನ: ವೃದ್ಧೆಗೆ ಆಧಾರ್ ಕಾರ್ಡ್, ಮಾಸಾಶನ ಆದೇಶ ಪತ್ರ ವಿತರಣೆ

ಶತಾಯುಷಿ ವೃದ್ಧೆಯೊಬ್ಬರು ಆಧಾರ್ ಕಾರ್ಡ್‌ ಇಲ್ಲದ ಕಾರಣ, ಮಾಸಾಶನ ಪಡೆಯಲು ಸಾಧ್ಯವಾಗಿರಲಿಲ್ಲ....