ಕೊಡಗು | ಮನೆಯ ಮುಂದಿನ ಗೇಟ್‌ ಮುರಿದು ಕಾಡಾನೆ ದಾಂಧಲೆ

Date:

ಕೊಡಗು ಜಿಲ್ಲೆ ಮಡಿಕೇರಿ, ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಹುದುಗೂರು ಗ್ರಾಮದಲ್ಲಿ ಮನೆಯ ಗೇಟ್‌ ಮುರಿದು ಒಳನುಗ್ಗಿದ ಘಟನೆ ನಡೆದಿದೆ.

ಬೆಂಡೆಬೆಟ್ಟ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಹಾರಂಗಿ ನದಿಯನ್ನು ದಾಟಿದ್ದ ಎರಡು ಕಾಡಾನೆಗಳು ರೈತ ಶಿವಕುಮಾರ್ ಅವರ ಮನೆಯ ಮುಂಭಾಗದ ಕಬ್ಬಿಣದ ಗೇಟನ್ನು ಮುರಿದಿವೆ. ಬಳಿಕ ಮನೆಯ ಹತ್ತಿರದ ಜಮೀನಿಗೆ ಪ್ರವೇಶಿಸಿ ಹುಲುಸಾಗಿ ಬೆಳೆದಿದ್ದ ಅಡಿಕೆ ಮತ್ತು ಬಾಳೆ ಗಿಡಗಳನ್ನು ತುಳಿದುಹಾಕಿವೆ.

ಕಾಡಾನೆಗಳು ಹುದುಗೂರು ಮೀಸಲು ಅರಣ್ಯ ಮತ್ತು ಹಾರಂಗಿ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದು, ಸಂಜೆ 6 ಗಂಟೆಯ ಬಳಿಕ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

ಈ ಸುದ್ದಿಒ ಓದಿದ್ದೀರಾ? ಚಾಮರಾಜನಗರ | ಹೆಚ್ಚಿದ ಆನೆ ಹಾವಳಿ; ತಡೆಗೆ ಅರಣ್ಯ ಇಲಾಖೆ ಸಿದ್ಧತೆ

“ಕಾಡಾನೆಗಳು ಗ್ರಾಮದಲ್ಲೆಲ್ಲ ದಾಂಧಲೆ ನಡೆಸುತ್ತಿವೆ. ಬೀಡುಬಿಟ್ಟಿರುವ ಆನೆಗಳನ್ನು ಆನೆಕಾಡು ಮೀಸಲು ಅರಣ್ಯ ಪ್ರದೇಶಕ್ಕೆ ಓಡಿಸಬೇಕು” ಎಂದು ಸ್ಥಳೀಯರು, ಹುದಗೂರು ವಲಯ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ : ಸಚಿವ ಎನ್ ಚೆಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಪರಿಹರಿಸಿ, ಜಿಲ್ಲೆಯ...

ರಾಮನಗರ | ಕಾಡಾನೆ ದಾಳಿಗೆ ಸಾವು; ಕುಟುಂಬಕ್ಕೆ ಸಚಿವರಿಂದ ಪರಿಹಾರದ ಚೆಕ್‌ ವಿತರಣೆ

ರಾಮನಗರ ಜಿಲ್ಲೆ ಕನಕಪುರ ಬಳಿಯ ಮುತ್ತುರಾಯನ ದೊಡ್ಡಿ ಗ್ರಾಮಕ್ಕೆ ಅರಣ್ಯ ಜೀವಿಶಾಸ್ತ್ರ...

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

1500 ಕಾರ್ಮಿಕರಿಗೆ ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ನೆರವು ಕಾರ್ಮಿಕರ ನೆರವಿಗೆ...

ತೆಂಗಿನ ಕಾಂಡ ಸೋರುವ ರೋಗ; ಪ್ರಕೃತಿಯನ್ನು ಅನುಸರಿಸುವುದೊಂದೇ ಪರಿಹಾರ

ರಸ ಗೊಬ್ಬರ, ಕೀಟನಾಶಕಗಳ ಕಂಪನಿಗಳು, ವೈವಿಧ್ಯಮಯವಾದ ರೋಗನಾಶಕಗಳು ರೈತರ ವಿಭಿನ್ನ ಕೃಷಿ...