ರಾಮನಗರ | ಕ್ರೆಡಿಟ್ ಕಾರ್ಡ್ ಏಜೆನ್ಸಿ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

Date:

  • ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಬಲಿಯಾದ ವ್ಯಕ್ತಿ
  • ಖಾಸಗಿ ಏಜೆನ್ಸಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮೃತನ ಪತ್ನಿ

ಇತ್ತೀಚಿನ ದಿನಗಳಲ್ಲಿ ಮೇಲೆ ಬಿದ್ದು ಸುಲಭವಾಗಿ ಸಾಲ ನೀಡುವ ಖಾಸಗಿ ಕಂಪನಿಗಳು, ಬಳಿಕ ಅಧಿಕ ಬಡ್ಡಿ ವಿಧಿಸಿ ಸಾಲದ ಸುಳಿಗೆ ಸಿಲುಕಿಸುತ್ತಿವೆ. ಅದರಿಂದ ಹೊರಬರಲಾರದೆ ಹಲವರು ಪ್ರಾಣ ಕಳೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟು ನಡೆಯುತ್ತಿವೆ. ಅಂತಹದ್ದೆ ಪ್ರಕರಣ ರಾಮನಗರ ಜಿಲ್ಲೆಯಲ್ಲಿ ವರದಿಯಾಗಿದೆ.

ಕ್ರೆಡಿಟ್ ಕಾರ್ಡ್ ಹಣ ವಸೂಲಿ ಮಾಡುವ ಏಜೆನ್ಸಿಯ ಕಿರುಕುಳದಿಂದ ಮನನೊಂದು ವ್ಯಕ್ತಿಯೊಬ್ಬರು ರಾಮನಗರ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಕನಕಪುರದ ಕೆಎನ್ಎಸ್ ವೃತ್ತದಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದ ಬಸವೇಶ್ವರ ನಗರದ ನಿವಾಸಿ ಸಂತೋಷ್ (41) ಆತ್ಮಹತ್ಯೆಗೆ ಬಲಿಯಾದ ವ್ಯಕ್ತಿ.

ಹಲವು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸಾಲ ಪಡೆದಿದ್ದ ಸಂತೋಷ್, ಹಣ ಮರುಪಾವತಿಸುವಲ್ಲಿ ವಿಫಲರಾಗಿದ್ದರು. ಹಣ ವಸೂಲಿ ಏಜೆನ್ಸಿಯವರು ಮನೆ ಬಳಿಗೆ ಬಂದು ಗಲಾಟೆ ಮಾಡಿದ್ದರು. ಶೀಘ್ರ ಹಣ ಪಾವತಿಸುವಂತೆ ಎಚ್ಚರಿಕೆ ನೀಡಿ ಹೋಗಿದ್ದರು ಎಂದು ಸಂತೋಷ್ ಡೆತ್‌ನೋಟ್‌ ಬರೆದಿದ್ದಾರೆ.

ನಾಳೆ ಮತ್ತೆ ನಿಮ್ಮ ಮನೆಗೆ ಬರುತ್ತೇವೆ, ಅಷ್ಟರಲ್ಲಿ ಸಾಲ ಪಡೆದ ಪೂರ್ಣ ಹಣವನ್ನು ಮರುಪಾವತಿ ಮಾಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರೆ ಮಾಡಿ ಎಚ್ಚರಿಕೆ ನೀಡಿದ್ದರು. ಇದರಿಂದ ಭಯಗೊಂಡಿದ್ದ ಸಂತೋಷ್ ಭಾನುವಾರ ಡೆತ್ ನೋಟು ಬರೆದಿಟ್ಟು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಂತೋಷ್ ಮನೆಗೆ ಬಂದಿದ್ದ ಹಣ ರಿಕವರಿ ಏಜೆನ್ಸಿ ಸಿಬ್ಬಂದಿ ಕೊಠಡಿ ಬಾಗಿಲು ಒಡೆದು ನೋಡಿದಾಗ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸಂತೋಷ್‌ ಮೃತದೇಹ ನೋಡಿದ ಸಾಲ ವಸೂಲಾತಿಗೆ ಬಂದವರು ಪರಾರಿಯಾಗಿದ್ದಾರೆ.

“ನನ್ನ ಗಂಡನ ಸಾವಿಗೆ ಸಾಲ ವಸೂಲಿ ಏಜೆನ್ಸಿ ಸಿಬ್ಬಂದಿಯೇ ಕಾರಣ. ಅವರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಸಂತೋಷ್ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಿಜೆಪಿಯ ದುರಾಡಳಿತದಿಂದ ಕಾಂಗ್ರೆಸ್‌ಗೆ ಅಧಿಕಾರ: ಚಾಮರಸ ಮಾಲಿ ಪಾಟೀಲ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಕಾರ್ಡ್ ನೀಡಿದ್ದರಿಂದ ರಾಜ್ಯ ವಿಧಾನಸಭೆಯಲ್ಲಿ‌...

ಬೆಳಗಾವಿ | ಮತ್ತೊಂದು ಭೀಕರ ಅಪಘಾತ

ಮೈಸೂರಿನ ಟಿ ನರಸೀಪುರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದರು....

ರಾಯಚೂರು | ಕಲುಷಿತ ನೀರು ಸೇವನೆ ಪ್ರಕರಣ: ಮೃತ ಬಾಲಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ

ರಾಯಚೂರು ಜಿಲ್ಲೆಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ಬಾಲಕನ...

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆಯಾಗದು: ಉಪಮುಖ್ಯಮಂತ್ರಿ ಡಿಕೆಶಿ

ನಾವು ಜಗಳವಾಡಿ ಕೋರ್ಟ್ ಕಚೇರಿ ಅಲೆದಿದ್ದು ಸಾಕು ಸೌಹಾರ್ದತೆಯಿಂದ ಮೇಕೆದಾಟು ಯೋಜನೆಗೆ ಸಹಕರಿಸಿ ಮೇಕೆದಾಟು...