ಮಂಗಳೂರು | ಅಕ್ರಮ ಮರಳುಗಾರಿಕೆ, ಕಳಪೆ ಕಾಮಗಾರಿ ಆರೋಪ; ತನಿಖೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

Date:

  • ಸಿಪಿಐ(ಎಂ) ಮುಖಂಡ ಶೇಖರ ಪ್ರತಿಭಟನೆ
  • 5ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಸಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ಬೆಳ್ತಂಗಡಿಯ ಮಿನಿ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದೆ.

ಮಾಧ್ಯಮದವರ ಜೊತೆ ಶೇಖರ ಲಾಯಿಲ ಮಾತನಾಡಿ, “ಬೆಳ್ತಂಗಡಿ ತಾಲೂಕಿನಲ್ಲಿ ಕೇವಲ 5 ಜನರಿಗೆ ಮಾತ್ರ ನದಿಯಿಂದ ಮರಳು ತೆಗೆಯಲು ಪರವಾನಿಗೆ ನೀಡಲಾಗಿದೆ. ಆದರೆ, ತಾಲೂಕಿನ ಎಲ್ಲ ನದಿಗಳಲ್ಲಿ, ತೊರೆಗಳಲ್ಲಿ ಹಲವಾರು ಜನರು ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಮರಳುಗಾರಿಕೆಯು ತಾಲೂಕಿನಾದ್ಯಂತ ಕೋಟ್ಯಾಂತರ ರೂಪಾಯಿ ವ್ಯವಹಾರವಾಗಿ ಬೆಳೆದಿದೆ. ತಾಲೂಕಿನಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಪ್ರವಾಹದ ಬಳಿಕ ನಡೆಸಿದ ಕಾಮಗಾರಿಗಳು ಕಳಪೆಯಾಗಿ ನೀರುಪಾಲಾಗಿದೆ. ರಸ್ತೆ ಸೇರಿದಂತೆ ಹಲವು ಕಾಮಗಾರಿಗಳು ಕಳಪೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿಯೂ ಭಾರೀ ಅಕ್ರಮ ನಡೆದಿದೆ. ನಕಲಿ ಕಂಪನಿಗಳಿಗೆ ಗುತ್ತಿಗೆ ನೀಡಿದೆ” ಎಂದು ಆರೋಪಿಸಿದರು.

“ನಾನು ಧರಣಿ ಕುಳಿತು 5 ದಿನ ಕಳೆದರೂ ಕೂಡ ತಾಲೂಕು ಹಾಗೂ ಜಿಲ್ಲಾಡಳಿತ, ಬೆಳ್ತಂಗಡಿ ತಹಶೀಲ್ದಾರ್, ಪೊಲೀಸ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾರೊಬ್ಬರೂ ಇತ್ತ ಸುಳಿದಿಲ್ಲ. ಇದನ್ನು ಗಮನಿಸಿದರೆ, ಮರಳು ದಂಧೆಕೋರರ ಜೊತೆ ಇವರೆಲ್ಲರೂ ನೇರ ಶಾಮಿಲಾಗಿದ್ದಾರೆ ಎಂಬುದು ಖಾತ್ರಿಯಾಗುತ್ತದೆ” ಎಂದು ಆರೋಪಿಸಿದರು.

“ಈ ಎಲ್ಲ ವಿಚಾರಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇದರ ಬಗ್ಗೆ ಸ್ಪಷ್ಟ ಭರವಸೆ ಸಿಗುವವರೆಗೆ ನನ್ನ ಪ್ರತಿಭಟನೆ ಮುಂದುವರೆಯಲಿದ್ದು, ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ಮುಂದುವರಿಸಲಾಗುವುದು” ಎಂದು ಮಾಹಿತಿ ನೀಡಿದರು.

ಈ ದಿನ ಡೆಸ್ಕ್‌
Website | + posts

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಜನಪ್ರಿಯ

ಈ ರೀತಿಯ ಹೆಚ್ಚು
Related

ಬೆಂಗಳೂರು | ಸಚಿವ ನಾರಾಯಣಗೌಡ ಭಾವಚಿತ್ರವಿರುವ ಬ್ಯಾಗ್‌ಗಳು ವಶ; ಎಫ್‌ಐಆರ್‌ ದಾಖಲು

ಸಚಿವ ಕೆ.ಸಿ ನಾರಾಯಣಗೌಡ ಭಾವಚಿತ್ರ ಮತ್ತು ಬಿಜೆಪಿ ಚಿಹ್ನೆ ಇರುವ ಬ್ಯಾಗ್‌ಗಳು...

ಎಸ್‌ಸಿ/ಎಸ್‌ಟಿ ಗುತ್ತಿಗೆ ಮೀಸಲು ಮೊತ್ತ ₹50 ಲಕ್ಷ ದಿಂದ ₹1 ಕೋಟಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

2023ರ ಫೆಬ್ರವರಿ 17ರಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಸಿಎಂ ₹1 ಕೋಟಿ ಮೊತ್ತದ...

ಬೀದರ್‌ | 30 ಕ್ಷೇತ್ರಗಳಲ್ಲಿ ಆರ್‌ಪಿಐ ಅಭ್ಯರ್ಥಿಗಳು ಸ್ಪರ್ಧೆ: ಮಹೇಶ ಗೋರನಾಳಕರ್

ಆರ್‌ಪಿಐ ಡಾ.ಬಿ ಆರ್ ಅಂಬೇಡ್ಕರ್ ಸ್ಥಾಪನೆ ಮಾಡಿದ ಪಕ್ಷ 'ಆರ್‌ಪಿಐಗೆ ಪಕ್ಷಕ್ಕೆ ಬೆಂಬಲ...

ಬೆಂಗಳೂರು | 1.1 ಲಕ್ಷ ದಾಟಿದ ಯುವ ಮತದಾರರ ಸಂಖ್ಯೆ

ಬೆಂಗಳೂರಿನಲ್ಲಿ ಈ ಹಿಂದೆ ಯುವ ಮತದಾರರ ಸಂಖ್ಯೆ 54,000 ಇತ್ತು ಮತದಾನದ...