ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕ ಬೈಸಿಕಲ್ ವ್ಯವಸ್ಥೆಯಾದ ‘ಟ್ರಿಣ್-ಟ್ರಿಣ್’ ಯೋಜನೆ ಮತ್ತೊಂದು ಹಂತ ಮೇಲೇರಲಿದೆ. ಈಗಿರುವ ಬೈಸಿಕಲ್‌ಗಳ ಜೊತೆಗೆ ಎಲೆಕ್ಟ್ರಿಕಲ್ ಬೈಸಿಕಲ್‌ಗಳನ್ನೂ ಒದಗಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಮುಂದಾಗಿದೆ. ಶೀಘ್ರದಲ್ಲೇ ಬ್ಯಾಟರಿ ಚಾಲಿತ ಪೆಡಲ್ ಸಹಾಯಕ ಬೈಸಿಕಲ್‌ಗಳ ಪ್ರಯೋಗ ನಗರದಲ್ಲಿ ಆರಂಭವಾಗಲಿದೆ.
2017ರ ಜೂನ್ 4ರಂದು ಟ್ರಿಣ್-ಟ್ರಿಣ್ ಯೋಚನೆಗೆ ಚಾಲನೆ ನೀಡಲಾಗಿತ್ತು. ನಗರದಲ್ಲಿ 430 ಬೈಸಿಕಲ್‌ಗಳಿದ್ದು, ಇದೂವರೆಗೂ 17,000 ಮಂದಿ ಯೋಜನೆಯ ಚಂದಾದಾರರಾಗಿ ಬೈಸಿಕಲ್‌ಗಳನ್ನು ಬಳಸುತ್ತಿದ್ದಾರೆ. ಪ್ರಸ್ತುತ, 52 ಬೈಸಿಕಲ್ ನಿಲ್ದಾಣಗಳಿವೆ.
“ಬ್ಯಾಟರಿ ಚಾಲಿತ ಪೆಡಲ್ ಸಹಾಯಕ ಬೈಸಿಕಲ್‌ಗಳ ಪ್ರಯೋಗವನ್ನು ಮುಂದಿನ ವಾರ ಪ್ರಾರಂಭಿಸಲಾಗುವುದು. ನಾವು ಸುಮಾರು 500 ಬ್ಯಾಟರಿ ಚಾಲಿತ ಬೈಸಿಕಲ್‌ಗಳನ್ನು ಮೊದಲ ಹಂತದಲ್ಲಿಯೇ ರಸ್ತೆಗಳಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಯಶಸ್ವಿಯನ್ನು ಗಮನದಲ್ಲಿಟ್ಟುಕೊಂಡು 1,000ಕ್ಕೆ ಏರಿಸಲಾಗುತ್ತದೆ” ಎಂದು ಡಿಯುಎಲ್‌ಟಿ ಆಯುಕ್ತೆ ವಿ ಮಂಜುಳಾ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಮೈಸೂರು | ತಮ್ಮ ಮೊದಲ ಮತವನ್ನೇ ಮಾರಿಕೊಂಡ ಯುವಜನರು!
“ಆದರೆ, ಮುಂದಿನ ವಾರವೇ ಹೊಸ ಬೈಸಿಕಲ್‌ಗಳು ಸಾರ್ವಜನಿಕರ ಬಳಕೆಗೆ ದೊರೆಯುವುದಿಲ್ಲ. ನಗರದ ಜನರಿಗೆ ಅವುಗಳನ್ನು ಒದಗಿಸುವುದಕ್ಕೂ ಮೊದಲು, ಒಂದು ತಿಂಗಳ ಕಾಲ ಅಧಿಕಾರಿಗಳು ತಮ್ಮದೇ ಆದ ಪರಿಶೀಲನೆ ನಡೆಸುತ್ತಾರೆ” ಎಂದು ಅವರು ಹೇಳಿದ್ದಾರೆ.