ಅಧಿಕಾರದ ದುರಾಸೆ ಇರುವುದು ಕಾಂಗ್ರೆಸ್‌ಗೆ ಹೊರತು ಜೆಡಿಎಸ್‌ಗಲ್ಲ : ನಿಸರ್ಗ ನಾರಾಯಣಸ್ವಾಮಿ

Date:

  • ʼಬಿಜೆಪಿಗೆ ಅಧಿಕಾರ ಸಿಗುವಂತೆ ಮಾಡಿದ್ದು ಕಾಂಗ್ರೆಸ್‌ʼ
  • ʼಚುನಾವಣಾ ಸಮಯದಲ್ಲಿ ಸಾಮರಸ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆʼ

ಜೆಡಿಎಸ್ ಬಿಜೆಪಿಯ ಬಿ ಟೀಮ್‌ ಎಂದು ಕರೆಯುವ ಕೆ ಎಚ್ ಮುನಿಯಪ್ಪ ಅವರಿಗೆ ಮತ್ತು ಅವರ ಕಾಂಗ್ರೆಸ್‌ಗೆ ಅಧಿಕಾರದ ದುರಾಸೆ ಇದೆಯೇ ಹೊರತು ಜೆಡಿಎಸ್‌ಗೆ ಇಲ್ಲ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸಣ್ಣ ಅಮಾನಿಕೆರೆ ಈದ್ಗಾ ಮೈದಾನದಲ್ಲಿದ ಈದ್ ಉಲ್‌ ಫಿತರ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದರು.

“75 ವರ್ಷಗಳ ಕಾಲ ಆಡಳಿತ ನಡೆಸಿ, ಅವರ ತಪ್ಪುಗಳಿಂದಲೇ ಬಿಜೆಪಿಗೆ ಅಧಿಕಾರ ಸಿಗುವಂತೆ ಮಾಡಿದ್ದು ಕಾಂಗ್ರೆಸ್‌. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ತಪ್ಪಿಸಲು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು, ಇದೀಗ ಬಂದು ನಾವು ಬಿ ಟೀಮ್‌ ಎನ್ನುವುದು ರಾಜಕೀಯ ಲಾಲಸೆ ಅಲ್ಲದೇ ಇನ್ನೇನು?” ಎಂದು ವಾಗ್ದಾಳಿ ನಡೆಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಹಾಸನ | 7 ವಿಧಾನಸಭಾ ಕ್ಷೇತ್ರದ 86 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ: ಜಿಲ್ಲಾಧಿಕಾರಿ

“ದೇವನಹಳ್ಳಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ವಿರುದ್ಧವಾಗಿ ಯಾವುದೇ ಅಂಶವು ಸಿಗದ ಕಾರಣ ಚುನಾವಣಾ ಸಮಯದಲ್ಲಿ ಸಾಮರಸ್ಯಕ್ಕೆ ತೊಂದರೆಯಾಗುವಂತೆ ಮಾತನಾಡುತ್ತಿದ್ದಾರೆ. ಜೆಡಿಎಸ್‌ನೊಂದಿಗೆ ಅಲ್ಪಸಂಖ್ಯಾತರು ಹೊಂದಿರುವ ಬಾಂಧವ್ಯ ಹಾಳು ಮಾಡುವುದೇ ಅವರ ಉದ್ದೇಶ ಅವರ ಮಾತಿಗೆ ಹೆಚ್ಚು ಗಮನ ಹರಿಸಬೇಡಿ” ಎಂದು ವಿನಂತಿಸಿಕೊಂಡರು.‌

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಇಬ್ಬರ ದುರ್ಮರಣ

ಮುಂದೆ ಹೋಗುತ್ತಿದ್ದದ  ಲಾರಿಗೆ ಹಿಂದಿನಿಂದ ಸರಕು ವಾಹನ ಢಿಕ್ಕಿ ಹೊಡೆದಿದ್ದು, ಇಬ್ಬರು...

ಬೀದರ್‌ | ಹುಬ್ಬಳಿಯ ನೇಹಾ ಹಿರೇಮಠ ಹತ್ಯೆ ಖಂಡನೀಯ : ಸದ್ಭಾಬನಾ ಮಂಚ್

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಕೊಲೆಯನ್ನು ಯಾವ ಸಭ್ಯ...

ಚಿತ್ರದುರ್ಗ | ಅಕ್ರಮ ಮದ್ಯ ಮಾರಾಟ ನಿಲ್ಲಿಸದಿದ್ದರೆ ಚುನಾವಣೆ ಬಹಿಷ್ಕಾರ; ಗ್ರಾಮಸ್ಥರ ಎಚ್ಚರಿಕೆ

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಬೆಳಗೆರೆ ಪಂಚಾಯಿತಿಯ ಭಾಗದ ಎಲ್ಲ ಗ್ರಾಮಗಳ...