ಬೆಂಗಳೂರು ಗ್ರಾಮಾಂತರ | ನೆಲಮಂಗಲದಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ

Date:

  • ರಾತ್ರೋರಾತ್ರಿ ನಗರದಾದ್ಯಂತ ಪೋಸ್ಟರ್ ಅಂಟಿಸಲಾಗಿದೆ
  • ಶೇ.40 – ಶೇ.50 ತಂಡಗಳ ನಡುವೆ ಫೈನಲ್ ಪಂದ್ಯ ಎಂಬ ಪೋಸ್ಟರ್

ಬಿಜೆಪಿ ವಿರುದ್ಧ ಕಾಂಗ್ರೆಸ್ ಇತ್ತೀಚೆಗೆ ನಡೆಸಿದ ಪೇ-ಸಿಎಂ ಪೋಸ್ಟರ್ ಅಭಿಯಾನ ದೊಡ್ಡ ಸದ್ದು ಮಾಡಿತ್ತು. ಅದರ ಮಾದರಿಯಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಹಲವೆಡೆ ರಾತ್ರೋ ರಾತ್ರಿ ಬಿಜೆಪಿ ವಿರುದ್ಧದ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಬಿಜೆಪಿ ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಗುರಿಯಾಗಿಟ್ಟುಕೊಂಡು ‘ಭ್ರಷ್ಟ ಬಿಜೆಪಿ ಕಪ್’ ಪಂದ್ಯಾವಳಿ ಎಂಬ ಪೋಸ್ಟರ್‌ನ್ನು ರಾತ್ರಿ ವೇಳೆಯಲ್ಲಿ ಅಂಟಿಸಲಾಗಿದೆ.

ಪೋಸ್ಟರ್‌ನಲ್ಲಿ ‘ಭ್ರಷ್ಟ ಬಿಜೆಪಿ ಕಪ್; ಟೀಮ್ 40% ಮತ್ತು ಟೀಮ್ 50% ನಡುವೆ ಫೈನಲ್ ಪಂದ್ಯದ ಹಣಾಹಣಿ ಮರೆಯದೇ ವೀಕ್ಷಿಸಿ’ ಎಂದು ಬರೆಯಲಾಗಿದೆ. ಈ ಪೋಸ್ಟರ್‌ಗಳನ್ನು ಯಾರು ಅಂಟಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನೆಲಮಂಗಲ ನಗರದ ಉಪನೊಂದಣಾಧಿಕಾರಿ ಕಚೇರಿ ಸೇರಿದಂತೆ ಹಲವೆಡೆ ಭಿತ್ತಿ ಪತ್ರ ಅಂಟಿಸಲಾಗಿದೆ.

ಟೀಮ್ 40% ಮತ್ತು ಟೀಮ್ 50% ಪರ್ಸೆಂಟ್ ಎಂದು ಎರಡು ತಂಡಗಳನ್ನು ಉಲ್ಲೇಖ ಮಾಡಲಾಗಿದ್ದು, ಟೀಮ್ 40% ನಲ್ಲಿ ಬಿ.ಎಲ್ ಸಂತೋಷ್ ಹಾಗೂ ಟೀಮ್ 50% ನಲ್ಲಿ ಬಿಎಸ್‌ ಯಡಿಯೂರಪ್ಪ ಮತ್ತು ತಂಡ ಎಂದು ಬರೆಯಲಾಗಿದೆ.

40% ತಂಡದಲ್ಲಿ ಬಿ.ಎಲ್ ಸಂತೋಷ್, ಅಶ್ವಥ ನಾರಾಯಣ್, ಬಿ.ಸಿ ನಾಗೇಶ್, ಬಿ.ಸಿ ಪಾಟೀಲ್, ಈಶ್ವರಪ್ಪ, ಎಸ್.ಟಿ ಸೋಮಶೇಖರ್, ಯತ್ನಾಳ್, ಸಿ.ಟಿ ರವಿ, ಮುನಿರತ್ನ, ವಿ ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ ಅವರ ಫೋಟೊ ಹಾಕಲಾಗಿದೆ.
ಇನ್ನೂ 50% ತಂಡದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುನಿಸ್ವಾಮಿ, ಪ್ರತಾಪ್ ಸಿಂಹ, ಕೆ.ಸಿ ನಾರಾಯಣಗೌಡ, ಆರ್ ಅಶೋಕ್, ವಿಜಯೇಂದ್ರ, ನಿರ್ಮಲಾ ಸೀತಾರಾಮನ್, ಶೋಭಾ ಕರಂದಾಜ್ಲೆ, ರೇಣುಕಾಚಾರ್ಯ, ಎಂಟಿಬಿ ನಾಗರಾಜ್, ಎಸ್.ಆರ್ ವಿಶ್ವನಾಥ್ ಅವರ ಫೋಟೊ ಹಾಕಲಾಗಿದೆ.

ಈ ಸುದ್ದಿಓದಿದ್ದೀರಾ? ಚಾಮರಾಜನಗರ | ಕಲ್ಲುಕ್ವಾರಿ ದುರಂತ ಪ್ರಕರಣ; ವರ್ಷದ ಬಳಿಕ...

ಫೈನಲ್ ಪಂದ್ಯ ನೋಡಲು ಪೋಸ್ಟರ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಮುದ್ರಿಸಲಾಗಿದೆ. ಸ್ಕ್ಯಾನ್ ಮಾಡಿದರೆ, ಸರ್ಕಾರದ ಹಗರಣಗಳು ಎನ್ನಲಾದ ವೆಬ್ಸೈಟ್ ತೆರೆದುಕೊಳ್ಳಲಿದೆ. ಪಿಎಸ್ಐ ಅಕ್ರಮ, ಬಿಟ್ ಕಾಯಿನ್ ಹಗರಣ, ರೌಡಿ ಮೋರ್ಚಾ ಸೇರಿದಂತೆ ಬಿಜೆಪಿ ನೇತೃತ್ವದ ಸರ್ಕಾರದ ಹಲವು ವೈಪಲ್ಯಗಳು ವೆಬ್ಸೈಟ್ ನಲ್ಲಿ ಇದ್ದು, ಆ ಮುಖಾಂತರ ಬಿಜೆಪಿ ವಿರುದ್ಧ ಕ್ಯಾಂಪೇನ್ ಮಾಡಲಾಗುತ್ತಿದೆ.

ಬಿತ್ತಿ ಪತ್ರದ ಹಿಂಬದಿ ಅಭಿಯಾನದ ನಾಲ್ಕು ಮುಖ್ಯ ಉದ್ದೇಶಗಳನ್ನು ಉಲ್ಲೇಖೆ ಮಾಡಲಾಗಿದೆ. ಬಿಜೆಪಿ ಕೋಮುವಾದಿ ಪಕ್ಷವನ್ನು ಸೋಲಿಸುವುದು ಪ್ರಮುಖ ಉದ್ದೇಶ, ಶಿಕ್ಷಣ ವಿರೋಧಿ ಕಾರ್ಯಗಳ ಪಟ್ಟಿ, ಸಂವಿಧಾನ ವಿರೋಧಿ ನಡೆಗಳ ಪಟ್ಟಿ, ರೈತ ವಿರೋಧ ಕಾರ್ಯಗಳ ಪಟ್ಟಿಯನ್ನು ಹಾಕಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಕಲುಷಿತ ನೀರು ಸೇವನೆ; ಮತ್ತೊಂದು ಗ್ರಾಮದಲ್ಲಿ 8 ಮಂದಿ ಅಸ್ವಸ್ಥ

ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದೇವದುರ್ಗದ...

ಶಾಲೆ ಆರಂಭದ ದಿನ | ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ಸಿಹಿ ತಿನಿಸು ಕಡ್ಡಾಯ

ಹೊಸ ಶೈಕ್ಷಣಿಕ ವರ್ಷದಲ್ಲಿ 224 ದಿನ ಕಾರ್ಯನಿರ್ವಹಿಸಲಿರುವ ಶಾಲೆಗಳು ಜೂನ್ 1ರಿಂದ ಶಿಕ್ಷಕರು...

ಪನಿಶ್ಮೆಂಟ್‌ಗೆ ಆಸ್ಪದ ಕೊಡಬೇಡಿ, ಒಳ್ಳೆ ಕೆಲಸ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಎಚ್ಚರಿಕೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ 'ಪನಿಶ್ಮೆಂಟ್ ಮಾಡೋದು ದೊಡ್ಡ...

ಟಿ.ನರಸೀಪುರ ಬಳಿ ಭೀಕರ ಅಪಘಾತ | 10 ಮಂದಿ ಸಾವು; ಹಲವರಿಗೆ ಗಂಭೀರ ಗಾಯ

ಮೈಸೂರು ಜಿಲ್ಲೆ ಕುರುಬೂರು ಗ್ರಾಮದ ಪಿಂಜರ ಪೋಲ್ ಎಂಬಲ್ಲಿ ಕೊಳ್ಳೇಗಾಲ- ಟಿ.ನರಸೀಪುರ...