ರಾಯಚೂರು | ಮಾನ್ವಿ ಜಲಸಂಪನ್ಮೂಲ ಕಚೇರಿಯಲ್ಲಿ 22 ಎಂಜಿನಿಯರ್ ಹುದ್ದೆ ಖಾಲಿ

Date:

ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿರುವ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗ ಕಚೇರಿಗಳಲ್ಲಿ 22 ಎಂಜಿನಿಯರ್ ಹುದ್ದೆಗಳು ಖಾಲಿ ಉಳಿದಿವೆ. ಈವರೆಗೆ ಆ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಪರಿಣಾಮ ತಾಲೂಕಿನಲ್ಲಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಭದ್ರ ಜಲಾಶಯದಿಂದ ತಂಗಭದ್ರ ಎಡದಂಡೆ ನಾಲಾ ಯೋಜನೆ ಮೂಲಕ ಮಾನ್ವಿ ಮತ್ತು ಸಿರವಾರವರೆಗೆ ಕೃಷಿ ಭೂಮಿಗಳಿಗೆ ನಾಲೆಗಳ ಮೂಲಕ ನೀರು ಹರಿಸಲಾಗುತ್ತದೆ. ನಾಲಾ ಯೋಜನೆಯ ಕೊನೆಯ ಭಾಗವು (70-104 ಕಿ.ಮೀ) ಜಲಸಂಪನ್ಮೂಲ ಇಲಾಖೆಯ ಸಿರವಾರ ಮುಖ್ಯ ವಿಭಾಗಕ್ಕೆ ಒಳಪಡುತ್ತದೆ. ಈ ವಿಭಾಗವು ಸಿರವಾರ ಮತ್ತು ಮಾನ್ವಿ ತಾಲೂಕಿನ 20 ವಿತರಣಾ ನಾಲೆಗಳಿಗೆ ನೀರು ಹರಿಸುವುದನ್ನು ನಿರ್ವಹಿಸುವ ಜವಬ್ದಾರಿ ಹೊಂದಿದೆ.

ಆದರೆ, ಮಾನ್ವಿ ಉಪ ವಿಭಾಗದ ಕಚೇರಿಯಲ್ಲಿ 22 ಎಂಜಿನಿಯರ್‌ ಹುದ್ದೆಗಳು ಖಾಲಿ ಇರುವುದರಿಂದ ತಾಲೂಕಿನ ಕೃಷಿ ಭೂಮಿಗೆ ನೀರು ಸಿಗದಂತಾಗಿದೆ. ಹಲವು ನಾಲೆಗಳು ಬತ್ತಿ ಹೋಗಿವೆ. ಜೊತೆಗೆ, ಸಿರವಾರ ಕಚೇರಿಯಲ್ಲಿಯೂ ಐದು ಎಂಜಿನಿಯರ್‌ ಹುದ್ದೆಗಳು ಖಾಲಿ ಇವೆ.

ಈ ಸುದ್ದಿ ಓದಿದ್ದೀರಾ?: ಸಿಎಂ ಸಿದ್ದರಾಮಯ್ಯಗೆ ‘ದಲಿತ ರತ್ನ’ ಪ್ರಶಸ್ತಿ

ತುಂಗಭದ್ರ ನಾಲಾ ಯೋಜನೆಯ ವ್ಯಾಪ್ತಿಯಲ್ಲಿ ನಾಲೆಗಳ ಆರಂಭದ ಭಾಗದಲ್ಲಿ ಹಲವಾರು ಪ್ರದೇಶಗಳು ಅನಧಿಕೃತವಾಗಿ ನೀರಾವರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿವೆ. ಹೀಗಾಗಿ, ನಾಲೆಯ ಕೊನೆಯ ಭಾಗಕ್ಕೆ ನೀರು ಹರಿದುಬರುತ್ತಿಲ್ಲ. ಮಾನ್ವಿ ತಾಲೂಕಿನ ನಾಲೆಗಳು ನೀರು ಕಂಡು ವರ್ಷಗಳೇ ಕಳೆದಿವೆ. ಸರ್ಕಾರ ಮತ್ತು ಸ್ಥಳೀಯ ಶಾಸಕರು ಸಮರ್ಪಕ ನೀರಿನ ಹರಿವಿಗೆ ಕ್ರಮ ಕೈಗೊಳ್ಳಬೇಕು. ಖಾಲಿ ಇರುವ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಬೇಕು” ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಶಿವಾಜಿ ಕುರಿತು ಅವಹೇಳನಕಾರಿ ಪೋಸ್ಟ್; ಯುವಕನ ಬಂಧನ

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಶಿವಾಜಿ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಯುವಕನನ್ನು...

ಚಿತ್ರದುರ್ಗ | ಶೋಷಿತ ಸಮುದಾಯಗಳ ಪ್ರಗತಿಯ ಹರಿಕಾರ ಬಿ ಕೃಷ್ಣಪ್ಪ

ದಲಿತ, ಶೋಷಿತ ಸಮುದಾಯಗಳ ಪ್ರಗತಿಗಾಗಿ ಶ್ರಮಿಸಿದ ಪ್ರೊ.ಬಿ ಕೃಷ್ಣಪ್ಪ ಅವರು ಸ್ಮರಣೀಯ...

ಟ್ರಸ್ಟ್‌ಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ಬಲ ತುಂಬುವೆ : ಸಚಿವ ಶಿವರಾಜ್ ತಂಗಡಗಿ

ವಿವಿಧ ಟ್ರಸ್ಟ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಸಚಿವರು ಕನ್ನಡ ಮತ್ತು ಸಂಸ್ಕೃತಿ...

ಇದು ನನ್ನ ಕೊನೆ ಚುನಾವಣೆ; ಸಕ್ರಿಯ ರಾಜಕಾರಣದಲ್ಲಿದ್ದು ಸೇವೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವರುಣಾ ಕ್ಷೇತ್ರದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ ರಾಜ್ಯದ ಜನ ಬಿಜೆಪಿಯ...