ಹಾಸನ | ಸಂರಕ್ಷಿತ ಅರಣ್ಯದಲ್ಲಿ ಸಫಾರಿ; ವಾಹನ ವಶ, ರೆಸಾರ್ಟ್‌ ಓನರ್‌ ವಿರುದ್ಧ ದೂರು ದಾಖಲು

Date:

  • ಹಿಂದೆಯೂ ಸಂರಕ್ಷಿತ ಅರಣ್ಯದಲ್ಲಿ ಅಕ್ರಮ ರಸ್ತೆ ನಿರ್ಮಿಸಿದ ರೆಸಾರ್ಟ್‌ ಮಾಲೀಕ
  • ಆರ್‌ಎಫ್‌ಒ ಶಿಲ್ಪಾ ನೇತೃತ್ವದಲ್ಲಿ ದಾಳಿ; ಜೀಪ್‌ ಬಿಟ್ಟು ಓಡಿ ಹೋದ ಚಾಲಕ

ಮೂರುಕಣ್ಣು ಗುಡ್ಡ ರಕ್ಷಿತ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಸಫಾರಿ ಮಾಡುತಿದ್ದ ಜೀಪು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ, ಸ್ವೂನ್ ವ್ಯಾಲಿ ರೇಸಾರ್ಟ್‌ ಮಾಲೀಕನ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳ್ ಹೊಬಳಿ ಮೂರುಕಣ್ಣು ಗುಡ್ಡ ಸಂರಕ್ಷಿತ ಅರಣ್ಯ ಸೆಕ್ಷನ್ 4 ಅರಣ್ಯ ಪ್ರದೇಶದ ಅಚ್ಚನಹಳ್ಲಿ ಗ್ರಾಮದ ಸರ್ವೆ ನಂ 93 ರಲ್ಲಿ ಸ್ಟೊನ್ ವ್ಯಾಲಿ ರೆಸಾರ್ಟ್‌ ಇದೆ. ಇಲ್ಲಿಗೆ ಆಗಮಿಸಿದ್ದ ಪ್ರವಾಸಿಗರು ರೆಸಾರ್ಟ್‌ನ ವಾಹನದಲ್ಲಿ ಆಕ್ರಮವಾಗಿ ರಕ್ಷಿತಾ ಅರಣ್ಯ ಪ್ರವೇಶಿಸಿ ಮೊಜು ಮಸ್ತಿ ಮಾಡುತಿದ್ದರು. ಮಾಹಿತಿ ಆಧರಿಸಿ ಸಕಲೇಶಪುರ ಆರ್‌ಎಫ್‌ಒ ಶಿಲ್ವಾ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತರಳಿದಾಗ ಚಾಲಕ ಜೀಪನ್ನು ಬಿಟ್ಟು ಪರಾರಿಯಾಗಿದ್ದಾನೆ.

ನಂತರ ಅರಣ್ಯ ಪ್ರದೇಶದ ಒಳಗಿದ್ದ ಜೀಪನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಹಣ ಮಾಡುವ ಉದ್ದೇಶಕ್ಕೆ ಪ್ರವಾಸಿಗರನ್ನು ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ವಾಹನದಲ್ಲಿ ಸಫಾರಿ ಕರೆದುಕೊಂಡು ಹೊಗುತಿದ್ದರಿಂದ ಸ್ಟೋನ್ ವ್ಯಾಲಿ ರೆಸಾರ್ಟ್‌ ಮಾಲೀಕ ಸುಭಾಷ್ ಸ್ಟಿಫನ್ ಮತ್ತು ಜೀಪು ಚಾಲಕನ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ1960 ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಸೆಕ್ಷನ್‌ 24, 62, 104 ಇನ್ನಿತರ ಪ್ರಕರಣ ದಾಖಲಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೂರು ಕಣ್ಣು ಗುಡ್ಡದಲ್ಲಿ ರೆಸಾರ್ಟ್‌ ಮಾಲೀಕರು ಈ ಹಿಂದೆಯೂ ಆಕ್ರಮವಾಗಿ ರಸ್ತೆ ನಿರ್ಮಿಸಿದ್ದರು. ಅರಣ್ಯ ಇಲಾಖೆಯವರು ಈ ಪ್ರದೇಶದಲ್ಲಿ ಯಾವುದೆ ಆಕ್ರಮ ಕಾಮಗಾರಿ ಮಾಡದಂತೆ ನೋಟಿಸ್ ನೀಡಿ ಪ್ರಕರಣ ದಾಖಲಿಸಿ ಈ ಆಕ್ರಮ ರಸ್ತೆಯನ್ನು ಬಂದ್ ಮಾಡಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಕೊಡಗು | ಮಾಜಿ ಸಚಿವ ಜೀವಿಜಯ ಕಾಂಗ್ರೆಸ್‌ಗೆ ರಾಜೀನಾಮೆ

ಪದೇಪದೆ ರೆಸಾರ್ಟ್‌ ಮಾಲೀಕರು ರಜೆ ಸಂಧರ್ಭದಲ್ಲಿ ಹಣ ಗಳಿಕೆಯ ಉದ್ದೇಶಕ್ಕೆ ಪ್ರವಾಸಿಗರನ್ನು ರಕ್ಷಿತಾ ಅರಣ್ಯ ಪ್ರದೇಶದೊಳಗೆ ಸಫಾರಿಗೆ ಕರೆದುಕೊಂಡು ಹೊಗುವುದು ಹೆಚ್ಚುತಿದ್ದರಿಂದ ಉಪಅರಣ್ಯ ಸಂರಕ್ಷಣಾ ಅಧಿಕಾರಿ ಸುರೆಶ್‌ ಅವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ದಾಳಿ ಸಂಧರ್ಭದಲ್ಲಿ ಆರ್‌ಎಫ್‌ಒ ಶಿಲ್ಪಾ, ಅರಣ್ಯ ಸಿಬ್ಬಂದಿಗಳಾದ ಮಾಹದೇವ್, ಹನುಮಂತು, ಲೋತಕೆಶ್ ಯೊಗೇಶ್ ರಮೇಶ್ ಸುನಿಲ್ ಹಾಗೂ ಚಾಲಕ ಚಿದಾನಂದ ಮುಂತಾದವರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ: ವಿನಯ್ ಕುಮಾರ್

ಪಾಳೇಗಾರಿಕೆ, ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನನ್ನದು. ಸಚಿವ ಎಸ್ ಎಸ್...

ಕಲಬುರಗಿ | ನನ್ನನ್ನು ಎನ್‌ಕೌಂಟರ್ ಮಾಡುವ ಜೀವ ಬೆದರಿಕೆ ಪತ್ರ ಬಂದಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬಿಜೆಪಿಯವರು ಗಲಭೆ ಸೃಷ್ಟಿಸಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದ್ರೂ...