ವಿಜಯನಗರ ಸುತ್ತಮುತ್ತ ಬುಧವಾರ ಸಂಜೆ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಪ್ರಬಲ ಬಿರುಗಾಳಿ ಸಹಿತವಾಗಿ ಮಳೆ ಬಂದಿದ್ದರಿಂದ ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟಾಗಿದೆ. ದಾಳಿಂಬೆ, ನಿಂಬೆ ಗಿಡಗಳು ಬುಡಸಮೇತ ನೆಲಕ್ಕುರುಳಿವೆ. ಜೊತೆಗೆ ದ್ರಾಕ್ಷಿ ತೋಟ, ಬಾಳೆ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿ ಉಂಟಾಗಿದೆ.
ಹೊಲದಲ್ಲಿ ನಿರ್ಮಿಸಿದ್ದ ಶೆಡ್‌ಗಳ ಛಾವಣಿ ಗಾಳಿಗೆ ಹಾರಿ ಹೋಗಿದೆ. ಕೆಲವೆಡೆ ವಿದ್ಯುತ್ ಕಂಬಗಳ ಧರೆಗುಳಿದಿವೆ. ಕೃಷಿ ಹೊಂಡದಲ್ಲಿ ನೀರು ಭರ್ತಿಯಾಗಿ ಹೊಂಡದ ಕಟ್ಟೆ ಒಡೆದು ಹಾನಿಯಾಗಿದೆ.

ವಿಜಯಪುರ ತಾಲೂಕಿನ ಆಹೇರಿ, ಜಂಬಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಎಕರೆಗೆ ಒಂದರಿಂದ ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ದಾಳಿಂಬೆ ಮತ್ತು ನಿಂಬೆ ಗಿಡಗಳು ಫಸಲು ನೀಡುವ ಹಂತದಲ್ಲಿ ನೆಲಕ್ಕುರುಳಿರುವುದು ಬೆಳೆಗಾರರಿಗೆ ಸಾಕಷ್ಟು ನಷ್ಟ ಉಂಟುಮಾಡಿದೆ.
ಬಿರುಗಾಳಿ ಮಳೆಯಿಂದ ಹಾನಿ ಉಂಟಾಗಿರುವ ದಾಳಿಂಬೆ, ದ್ರಾಕ್ಷಿ ಹಾಗೂ ನಿಂಬೆ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದ್ವೇಷ ರಾಜಕಾರಣಕ್ಕೆ ಕಾನೂನಿನ ಮೂಲಕವೇ ಉತ್ತರಿಸುವೆ: ಅಶ್ವತ್ಥ ನಾರಾಯಣ