ಧಾರವಾಡ | ಈ ಚುನಾವಣೆ ಬಿಜೆಪಿ ವಿರುದ್ಧದ ಲಿಂಗಾಯತ ಹೋರಾಟ: ಗಂಗಾಧರ ದೊಡವಾಡ

Date:

  • ಹುಬ್ಬಳ್ಳಿ ಸೆಂಟ್ರಲ್ ಲಿಂಗಾಯತ ಪ್ರಮುಖರ ಸಭೆ
  • ಜಗದೀಶ ಶೆಟ್ಟರ್ ಗೆಲುವು ಈಗಾಗಲೇ ನಿರ್ಧಾರವಾಗಿದೆ

ಲಿಂಗಾಯತ ಮುಖಂಡರನ್ನು ಮೂಲೆಗುಂಪು ಮಾಡುವ ಬಿಜೆಪಿಯ ತಂತ್ರವನ್ನು ನಾವು ಎದುರಿಸಿ ನಿಲ್ಲುತ್ತೇವೆ. ಈ ಬಾರಿಯ ಚುನಾವಣೆಯನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ ಹೇಳಿದರು.

ರಾಷ್ಟ್ರೀಯ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ಅಧ್ಯಕ್ಷ ಶರಣಪ್ಪ ಕೊಟಗಿ ನೇತೃತ್ವದಲ್ಲಿ ನಡೆದ ಹುಬ್ಬಳ್ಳಿ ಸೆಂಟ್ರಲ್ ಲಿಂಗಾಯತ ಪ್ರಮುಖರ ಸಭೆಯಲ್ಲಿ ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ ಪ್ರತಿಜ್ಞೆ ಮಾಡಿದರು.

ಈ ಬಾರಿಯ ಚುನಾವಣೆಯು ಬಿಜೆಪಿ ವಿರುದ್ಧ ಲಿಂಗಾಯತ ಹೋರಾಟವಾಗಿದೆ. ಜಗದೀಶ ಶೆಟ್ಟರ್ ಗೆಲುವು ಈಗಾಗಲೇ ನಿರ್ಧಾರವಾಗಿದೆ. ಶೆಟ್ಟರ ಅವರನ್ನು ಸೋಲಿಸಲು ಆರ್‌ಎಸ್‌ಎಸ್‌, ಬಿಜೆಪಿ ಎಲ್ಲ ಹಿಂದೂ ಸಂಘಟನೆಗಳು ಒಟ್ಟಾಗಿ ಬಂದರೂ ಲಿಂಗಾಯತ ಶಕ್ತಿಯ ಜೊತೆಗೆ ಸಾಮಾಜಿಕ ನ್ಯಾಯ, ಸಮುದಾಯ ಶಕ್ತಿಯ ಮುಂದೆ ಯಾವ ಆಟವೂ ನಡೆಯಲಾರದು ಎಂದು ಗುಡುಗಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮತದಾನದಿಂದ ವಂಚಿತರಾಗದಂತೆ ಕೂಲಿ ಕಾರ್ಮಿಕರಿಗೂ ವ್ಯವಸ್ಥೆ ಮಾಡಿ

ಸಭೆಯಲ್ಲಿ ಪ್ರೊ. ಎಸ್ ಕೆ ಆದಪ್ಪನವರ, ಪಾರಸಮಲ್ ಜೈನ, ವಿ ಜಿ ಪಾಟೀಲ, ಬಂಗಾರೇಶ ಹಿರೇಮಠ, ರಜತ್ ಉಳ್ಳಾಗಡ್ಡಿಮಠ, ಶಕ್ತಿ ದಾಂಡೇಲಿ, ಮೋಹನ ಹೊಸಮನಿ, ಈಶ್ವರ ಶಿರಸಂಗಿ ಅಭಿಮನ್ಯುರಡ್ಡಿ, ಲಿಂಗರಾಜ ಅಂಗಡಿ, ಎಂ ಎಚ್ ಚಳ್ಳಮರದ, ಮಲ್ಲಿಕಾರ್ಜುನ ಚನ್ನಶೆಟ್ಟಿ, ಪ್ರೊ ಕೆ ಎಸ್ ಕೌಜಲಗಿ, ಮೃತ್ಯುಂಜಯ ಕೊಟಗಿ, ಮಹೇಶ ದ್ಯಾವಪ್ಪನವರ, ಜಿ ವಿ ವಳಸಂಗ ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಸಚಿವ ಸಂತೋಷ್‌ ಲಾಡ್‌ಗೆ ವಿಜಯೇಂದ್ರ ಅಪಮಾನ; ಕ್ಷಮೆ ಯಾಚಿಸಲು ಆಗ್ರಹ

ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಕೀಳು ಮಟ್ಟದ ಪದ ಬಳಸಿ ಸಚಿವ...

ಲೋಕಸಭಾ ಚುನಾವಣೆ | ಊರಿಗೆ ಹೊರಟ ಮತದಾರರು; ಸುಲಿಗೆಗಿಳಿದ ಖಾಸಗಿ ಬಸ್‌ಗಳು

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26ರಂದು ಮತದಾನ...

ಗದಗ | ಮನರೇಗಾ ಕೆಲಸದ ನಂತರ ಕಾರ್ಮಿಕರಿಗೆ ಕಬಡ್ಡಿ, ಖೋಖೋ ಕ್ರೀಡೆ

ಗದಗ ಜಿಲ್ಲೆಯ ಮುಂಡರಗಿ ತಾಲೂಕು ಪಂಚಾಯತಿಯು ವಿಶಿಷ್ಟವಾಗಿ ಮನರೇಗಾ ಯೋಜನೆಗೆ ಸಾಂಸ್ಕೃತಿಕ,...

ವಿಜಯಪುರ | ಬಿಜೆಪಿ ಅಧರ್ಮ ಸಾರುತ್ತದೆ, ಕಾಂಗ್ರೆಸ್ ಧರ್ಮ ಬಿತ್ತುತ್ತಿದೆ: ಶಾಸಕ ಅಶೋಕ್ ಮನಗೂಳಿ

ಇದು ಧರ್ಮ, ಅಧರ್ಮದ ಮದ್ಯ ನಡೆಯುತ್ತಿರುವ ಚುನಾವಣೆ, ಬಿಜೆಪಿ ಅಧರ್ಮವನ್ನು ಸಾರುತ್ತದೆ,...