ವಿಜಯಪುರ | ಬೈಕ್‌ ನಿಲ್ಲಿಸುವ ವಿಚಾರಕ್ಕೆ ಗಲಾಟೆ; ಮಾರಣಾಂತಿಕ ಹಲ್ಲೆ

Date:

ಮನೆಯ ಎದುರು ನಿಲ್ಲಿಸಿದ್ದ ಬೈಕ್‌ ತೆಗೆಯುವ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು, ವ್ಯಕ್ತಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ವಿಜಯಪುರದ ಟಕ್ಕೆಯಲ್ಲಿ ನಡೆದಿದೆ.

ಕಿರಣ ಗಜಕೋಶ ಹಲ್ಲೆಗೊಳಗಾದ ವ್ಯಕ್ತಿ. ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠ ಹಲ್ಲೆಗೈದಿದ್ದಾರೆ ಎಂದು ಕಿರಣ ಅವರ ಪತ್ನಿ ಆರೋಪಿಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ತೆಗೆಯುವಂತೆ ಮಾತನಾಡುತ್ತಿದ್ದಾಗ, ಮನೆಯ ಒಳಗಿನಿಂದ ಮಚ್ಚು ಸಮೇತ ಹೊರಗೆ ಬಂದ ವ್ಯಕ್ತಿ, ಏಕಾಏಕಿ ಕಿರಣ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡುವ ವಿಡಿಯೋ ಸಮೀಪದ ಸಿಸಿ ಟಿವಿ ಕ್ಯಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಗಾಂಧಿಚೌಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಓದಿದ್ದೀರಾ? ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ?: ಡಿಕೆ ಶಿವಕುಮಾರ್ ತರಾಟೆ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ಬಿರುಗಾಳಿಗೆ ಛಾವಣಿ ಸಮೇತ ತೂರಿ ಹೋದ ಮಗು; ಅಪಾಯದಿಂದ ಪಾರು

ಬೀದರ್ ತಾಲೂಕಿನ ಬುಧೇರಾ ಗ್ರಾಮದಲ್ಲಿ ಧನರಾಜ್ ತಮ್ಮ ಮಗುವನ್ನು ಮಲಗಿಸಲು ಮನೆಯ...

ಗದಗ | ಯೋಗ ದಿನಾಚರಣೆ ಯಶಸ್ವಿ ಆಯೋಜನೆಗೆ ಜಿಲ್ಲಾಧಿಕಾರಿ ಸೂಚನೆ

ಗದಗ ಜಿಲ್ಲೆಯಲ್ಲಿ ಆಚರಿಸಲಾಗುವ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲು...

ಆಗಸ್ಟ್‌ 1 ರಂದು ಗೃಹಜ್ಯೋತಿ, ಆಗಸ್ಟ್‌ 17-18 ರಂದು ಗೃಹಲಕ್ಷ್ಮಿ ಯೋಜನೆ ಜಾರಿ : ಸಿಎಂ ಸಿದ್ದರಾಮಯ್ಯ

ಯೋಜನೆಗಳ ಅನುಷ್ಠಾನ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ...

ವಿಜಯಪುರ | ಬೈಕ್‌ ಅಪಘಾತ; ಸಾಹಿತಿ ಸಾವು

ಬೈಕ್‌ ಅಪಘಾತದಿಂದ ಗಾಯಗೊಂಡಿದ್ದ ಸಾಹಿತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ...