ಉತ್ತರ ಕನ್ನಡ | 13 ವರ್ಷಗಳಿಂದ ರಾಶಿ ಬಿದ್ದಿದ್ದ ಕಬ್ಬಿಣದ ಅದಿರು ಚೀನಾಗೆ ರಫ್ತು

Date:

ಕಾರವಾರ ಬಂದರಿನಲ್ಲಿ ರಾಶಿ ಹಾಕಿದ್ದ ಕಬ್ಬಿಣದ ಅದಿರು ಹದಿಮೂರು ವರ್ಷಗಳ ನಂತರ ಚೀನಾದತ್ತ ಸಾಗುತ್ತಿದೆ. 2010ರಲ್ಲಿ ಅಕ್ರಮವಾಗಿ ಅದಿರು ಸಾಗಾಟ ನಡೆಸುತ್ತಿದೆ ಎಂಬ ಆರೋಪದ ಮೇಲೆ ಬಂದರಿನ ಮೇಲೆ ದಾಳಿ ಮಾಡಿದ್ದ, ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅದಿರನ್ನು ಜಪ್ತಿ ಮಾಡಿದ್ದರು.

ಜಪ್ತಿ ಮಾಡಿದ್ದ 50,000 ಮೆಟ್ರಿಕ್ ಟನ್‌ ಅದಿರನ್ನು 18 ರಾಶಿಗಳಲ್ಲಿಡಲಾಗಿತ್ತು. ಆ ಅದಿರನ್ನು ಸುಪ್ರೀಂ ಕೋರ್ಟ್‌ ನಿರ್ದೇಶದ ಮೇಲೆ ಹರಾಜು ಹಾಕಲಾಗಿತ್ತು. ಹರಾಜು ಪ್ರಕ್ರಿಯೆಲ್ಲಿ16 ರಾಶಿಗಳು ಅಂದರೆ 37,320 ಮೆಟ್ರಿಕ್ ಟನ್ ಅದಿರನ್ನ ಮಂಗಳೂರಿನ ಗ್ಲೋರಿ ಶಿಪ್ಪಿಂಗ್ ಸಂಸ್ಥೆ ಪಡೆದುಕೊಂಡಿದೆ. ಆ ಅದಿರನ್ನು ಚೀನಾಗೆ ರಫ್ತು ಮಾಡುತ್ತಿದೆ.

ಉಳಿದ 2 ರಾಶಿ ಅಂದರೆ 12,680 ಮೆಟ್ರಿಕ್ ಟನ್ ಅದಿರನ್ನು ವೇದಾಂತ ಸೆಸೆಗೋವಾ ಕಂಪನಿ ಖರೀದಿಸಿದೆ. ಆದರೆ, ಕಂಪನಿಯು ಇನ್ನೂ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಆ ಎರಡು ರಾಶಿಗಳು ಬಂದರಿನಲ್ಲಿಯೇ ಉಳಿಯಲಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹರಾಜಿಗೆ 13 ವರ್ಷಗಳೇಕೆ?

ಕಾರವಾರ ಬಂದರಿನಲ್ಲಿ 2010ರವರೆಗೂ ಕಬ್ಬಿಣದ ಅದಿರು ರಫ್ತು ಮಾಡಲಾಗುತ್ತಿತ್ತು. ಆದರೆ, ಅಕ್ರಮವಾಗಿಯೂ ಅದಿರು ರಫ್ತಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ದೂರಿನ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಅದಿರನ್ನು ವಶಪಡಿಸಿಕೊಂಡಿದ್ದರು.

ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೋರ್ಟ್‌, ಕರ್ನಾಟಕದ ಅದಿರನ್ನು ಯಾವುದೇ ಕಾರಣಕ್ಕೂ ರಫ್ತು ಮಾಡಿಸುವಂತಿಲ್ಲವೆಂದು ಆದೇಶ ನೀಡಿತ್ತು. ಆದರೆ, ಬಂದರಿನಲ್ಲಿ ಅದಿರು ಹಾಳಾಗುತ್ತಿದೆ. ಗಾಳಿ-ಮಳೆಯಿಂದ ರಾಶಿ ಕರಗುತ್ತಿದೆ ಎಂದು ಆದೇಶವನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳು ನ್ಯಾಯಾಲಯದಲ್ಲಿ ಕೋರಿದ್ದರು.

ಬಳಿಕ, 2020ರಲ್ಲಿ ತನ್ನ ಆದೇಶವನ್ನು ಹಿಂಪಡೆದ ಸುಪ್ರೀಂ ಕೋರ್ಟ್‌, ಹರಾಜು ಪ್ರಕ್ರಿಯೆ ನಡೆಸಲು ಅನುಮತಿ ನೀಡಿತ್ತು. ಉತ್ತರ ಕನ್ನಡ ಜಿಲ್ಲಾ ಟಾಸ್ಕಫೋಸ್೯ ಅದಿರನ್ನ ಹರಾಜು ಪ್ರಕ್ರಿಯೆಗೆ ಬಿಡ್‌ ಕರೆದಿತ್ತು. ಹಲವಾರು ಗೊಂದಲಗಳ ಬಳಿಕ ಅಂತಿಮವಾಗಿ ಹರಾಜು ಪ್ರಕ್ರಿಯೆ ಮುಗಿದಿದ್ದು, 13 ವರ್ಷಗಳಿಂದ ರಾಶಿ ಉಳಿದಿದ್ದ ಅದಿರು, ರಫ್ತಾಗಲು ಸಿದ್ದವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪೇರಿ ಕಿತ್ತ ಬಿಜೆಪಿ ರಾಜ್ಯ ಸಂಯೋಜಕ

ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಗೃಹ ಲಕ್ಷ್ಮಿ, ಶಕ್ತಿ ಯೋಜನೆ ಕೊಟ್ಟಿದ್ದಾರೆಯೇ...

ಲೋಕಸಭಾ ಚುನಾವಣೆ | ಬೆಂಗಳೂರಲ್ಲಿ ಏ.24 ರಿಂದ 26 ರವರೆಗೆ ಸೆಕ್ಷನ್ 144 ಜಾರಿ

ಲೋಕಸಭಾ ಚುನಾವಣೆ ಹಿನ್ನೆಲೆ, ಏಪ್ರಿಲ್ 24ರ ಸಂಜೆ 6ರಿಂದ ಏಪ್ರಿಲ್ 26ರವರ...

ದಾವಣಗೆರೆ | ಭಾರೀ ಗಾಳಿ ಮಳೆ; ಸಿಡಿಲ ಹೊಡೆತಕ್ಕೆ 25 ಮೇಕೆಗಳು ಬಲಿ

ದಾವಣಗೆರೆ ಜಿಲ್ಲೆಯ ಹಲವೆಡೆ ಗುರುವಾರ ಸಂಜೆ ಭಾರೀ ಗಾಳಿಯೊಂದಿಗೆ ಗುಡುಗು ಸಿಡಿಲಿನ...

ಚಿತ್ರದುರ್ಗ | ಲೋಕಸಭಾ ಚುನಾವಣೆ; ಮಾದಿಗ ಮೀಸಲಾತಿ ಹೋರಾಟ ಸಮಿತಿ ಬಿಜೆಪಿಗೆ ಬೆಂಬಲ

ಮಾದಿಗ ಜನಾಂಗಕ್ಕೆ ಅಗತ್ಯವಾಗಿ ಬೇಕಾಗಿರುವ ಒಳಮೀಸಲಾತಿಯನ್ನು ಕೇವಲ ನರೇಂದ್ರ ಮೋದಿ ನೇತೃತ್ವದ...