ಉತ್ತರ ಕನ್ನಡ | ಸಂತ್ರಸ್ತ ಬಾಲಕನ ಹೆಸರು ಬಹಿರಂಗ; 10 ಮಂದಿ ಪತ್ರಕರ್ತರಿಗೆ ಜಾಮೀನು ನಿರಾಕರಣೆ

Date:

ಅಪ್ರಾಪ್ತ ಬಾಲಕ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ವರದಿ ಮಾಡುವಾಗ ಬಾಲಕನ ಹೆಸರು ಮತ್ತು ತಾಯಿ ಹಾಗೂ ಅಜ್ಜಿಯ ಹೆಸರು ಸೇರಿದಂತೆ ಬಾಲಕನ ಮಾಹಿತಿಯನ್ನು ಬಹಿರಂಗ ಪಡಿಸಿದ ಪತ್ರಕರ್ತರು, ವರದಿಗಾರರು ಹಾಗೂ ಆರೋಪಿಯೊಬ್ಬರ ಪತ್ನಿಗೆ ಜಾಮೀನು ನೀಡಲು (ಪೋಕ್ಸೊ ವಿಶೇಷ ನ್ಯಾಯಾಲಯ) ನಿರಾಕರಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಆರೋಪಿ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ. ಪ್ರಕರಣದ ವರದಿ ಮಾಡಿದ್ದ ಪತ್ರಕರ್ತರು, ಸಂತ್ರಸ್ತ ಬಾಲಕ ವೈಯಕ್ತಿಕ ವಿವರಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದರು. ಇದು ಪೋಕ್ಸೊ ಕಾಯಿದೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು 10 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಆರೋಪಿಗಳಾದ ಶ್ರೀನಿವಾಸ ಮಾಸ್ತಪ್ಪ ನಾಯ್ಕ್, ವಿಷ್ಣು ಮಂಜಯ್ಯ ದೇವಾಡಿಗ, ವೆಂಕಟೇಶ್ ಸಂತಮ್ಮ ದೇವಾಡಿಗ, ಸ್ವಾತಿ ಗಣಪತಿ ನಾಯ್ಕ್ W/O ಶೈಲೇಶ್ ದೇವಾಡಿಗ, ಗಣಪತಿ ನಾರಾಯಣ ನಾಯ್ಕ್, ದಿನೇಶ್ ಮಂಜುನಾಥ್ ನಾಯ್ಕ್, ಭವಾನಿ ಶಂಕರ್ ವೆಂಕಟ್ರಮಣ ನಾಯ್ಕ್, ಕುಮಾರ್ ಈರಪ್ಪ ನಾಯ್ಕ್, ಜೀವಾತ್ತಮ್ ವಿಠ್ಠಲ್ ಪೈ, ಅರ್ಜುನ್ ಮಲ್ಯ ವಿರುದ್ದ ಭಟ್ಕಳ ಪೊಲೀಸರು ಪೋಕ್ಸೊ ಕಾಯ್ದೆಯ ಕಲಂ 23ರ ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಸಂತೆ ಮೈದಾನದಲ್ಲಿ ಮೂಲಸೌಕರ್ಯ ಮರೀಚಿಕೆ; ವ್ಯಾಪಾರಿಗಳ ಅಳಲು

ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯವು ಅವರುಗಳ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಆರೋಪಿತರು ನಿರೀಕ್ಷಣಾ ಜಾಮೀನು ಕೋರಿದ್ದರು. ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಗ್ರಾಮ ವಾಸ್ತವ್ಯ

ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್‌ ಗ್ರಾಮ ವಾಸ್ತವ್ಯ...

ಕಲಬುರಗಿ | ಹೈ-ಕ ಭಾಗದ ಸಾಹಿತಿಗಳೆಂಬ ಹಣೆಪಟ್ಟಿ ಏಕೆ: ಡಾ. ಚಿದಾನಂದ ಸಾಲಿ

ದಲಿತ ಸಾಹಿತಿಗಳು ಅಂತ ಇರುವ ಹಾಗೆ, ಬ್ರಾಹ್ಮಣ ಕತೆಗಾರರು ಎಂಬ ಹೆಸರು...

ಮದ್ಯದಂಗಡಿ ಬೇಡ – ನೀರು, ಆರೋಗ್ಯ, ಆಹಾರ ಕೊಡಿ; ಸ್ಲಂ ಜನಾಂದೋಲನ ಒತ್ತಾಯ

ನಾಗರೀಕ ಸಮಾಜಕ್ಕೆ ಬೇಕಿರುವುದು ನೀರು, ನೈರ್ಮಲ್ಯ, ಆರೋಗ್ಯ ಮತ್ತು ಆಹಾರವೇ ಹೊರತು,...

ರಾಯಚೂರು | 9 ವರ್ಷಗಳಿಂದ ಅಂಗನವಾಡಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ರೋಡಲ ಬಂಡಾ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ...