ಡಿಕೆ ಸಹೋದರರ ಜೊತೆಗೆ ನನ್ನ ಸಂಬಂಧ ಚೆನ್ನಾಗಿದೆ, ಯಾರೂ ನನಗೆ ವಾರ್ನ್‌ ಮಾಡಿಲ್ಲ: ಎಂ ಬಿ ಪಾಟೀಲ್

Date:

  • ಸಂಸದ ಡಿ ಕೆ ಸುರೇಶ್‌ ಅವರು ಪ್ರೀತಿಯಿಂದಲೇ ಮಾತನಾಡಿಸಿದ್ದಾರೆ
  • ವಾರ್ನಿಂಗ್ ಮಾಡಿರುವ ಸುದ್ದಿ ಸುಳ್ಳು ಎಂದ ಎಂ ಬಿ ಪಾಟೀಲ

ಶಾಸಕಾಂಗ ಪಕ್ಷದ ಸಭೆ ಮುಗಿಸಿ ಬರುತ್ತಿದ್ದಾಗ ವಿಧಾನಸೌಧದಲ್ಲಿ ಎಂ ಬಿ ಪಾಟೀಲ​ ಅವರೇ ಅಂತಾ ಸಂಸದ ಡಿಕೆ ಸುರೇಶ್ ಪ್ರೀತಿಯಿಂದಲೇ ಕರೆದರು. ಡಿಕೆ ಸುರೇಶ್‌ ಮತ್ತು ಡಿ ಕೆ ಶಿವಕುಮಾರ್‌ ಯಾರು ನನಗೆ ವಾರ್ನ್‌ ಮಾಡಿಲ್ಲ. ನನ್ನ ಮತ್ತು ಅವರ ಸಂಬಂಧ ಚೆನ್ನಾಗಿದೆ. ಸುಮ್ಮನೇ ಸುಳ್ಳು ಸುದ್ದಿ ಹರಡಬೇಡಿ ಎಂದು ನೂತನ ಸಚಿವ ಎಂ ಬಿ ಪಾಟೀಲ್ ಹೇಳಿದರು.

ಸಂಸದ ಡಿ ಕೆ ಸುರೇಶ್‌ ಅವರು ಎಂ ಬಿ ಪಾಟೀಲ ಅವರಿಗೆ ವಾರ್ನ್‌ ಮಾಡಿದ್ದಾರೆ ಎನ್ನುವ ಸುದ್ದಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಪ್ರತಿಕ್ರಿಯಿಸಿ, “ನಾನು ಆರು ಬಾರಿ ಶಾಸಕನಾಗಿರುವೆ. ಗೃಹಸಚಿವನಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆ-ತಾಯಿನೇ ಒಂದೂ ದಿನ ನನಗೆ ವಾರ್ನ್ ಮಾಡಿಲ್ಲ. ವಾರ್ನಿಂಗ್ ಎಂಬ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ. ನಾನು ಅವರಿಗೆ ವಾರ್ನಿಂಗ್ ಮಾಡಿಲ್ಲ, ಅವರು ನನಗೆ ವಾರ್ನಿಂಗ್ ಮಾಡಿಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ?: ಷರತ್ತು ಇಲ್ಲದೆ ಗ್ಯಾರಂಟಿ ಯೋಜನೆ ಜಾರಿ ಮಾಡಿ, ಇಲ್ಲದಿದ್ದರೆ ವಿರೋಧಿ ಅಭಿಯಾನ: ಎಚ್‌ಡಿಕೆ ಎಚ್ಚರಿಕೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬುಧವಾರ ಬೆಳಗ್ಗೆ ಎದುರಿಗೆ ಸಿಕ್ಕ ಎಂ ಬಿ ಪಾಟೀಲ ಅವರಿಗೆ ನೇರವಾಗಿ ಡಿ ಕೆ ಸುರೇಶ್‌ ಅವರು ವಾರ್ನಿಂಗ್ ಮಾಡಿದರು ಎನ್ನುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ವೇಳೆ ಡಿಕೆ ಸುರೇಶ್​ ಅವರು ಎಂಬಿ ಪಾಟೀಲ್ ಅವರಿಗೆ ಗುರಾಯಿಸಿಕೊಂಡು “ಸ್ವಲ್ಪ ಬಿಗಿಯಾಗಿರಲಿ” ಎಂದು ಬಹಿರಂಗವಾಗಿಯೇ ಎಲ್ಲರ ಮುಂದೆ ವಾರ್ನ್ ಮಾಡಿದ್ದರು ಎಂದು ಸುದ್ದಿಯಾಗಿತ್ತು.

ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂ ಬಿ ಪಾಟೀಲ್, “ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗಲಿದ್ದಾರೆ” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಡಿ ಕೆ ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂದು ಎದುರಿಗೆ ಭೇಟಿಯಾದಾಗ ವಾರ್ನ್ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ಅಂಥದ್ದೇನು ನಡೆದಿಲ್ಲ, ನಮ್ಮ ಸಂಬಂಧ ಚೆನ್ನಾಗಿದೆ ಎಂದು ತಿಳಿಗೊಳಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್‌| ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಲೋಕಸಭೆ ಚುನಾವಣೆಗೆ ಸ್ಪರ್ಧೆ

ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂನ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್,...

ಕರಗ ಮಹೋತ್ಸವ: ಮೆರವಣಿಗೆ ವೇಳೆ ಯುವಕರ ನಡುವೆ ಗಲಾಟೆ; ಓರ್ವ ಸಾವು

ಕಳೆದ ಒಂದು ವಾರದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಮಹೋತ್ಸವದ...

Fact Check | ಸುಳ್ಳು ಹೇಳಿದ ಪ್ರಧಾನಿ ಮೋದಿ; ಆಂಧ್ರದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಟ್ಟಿಲ್ಲ

''ಆಂಧ್ರಪ್ರದೇಶದಲ್ಲಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿಮೆ...

ರಾಯಚೂರು | ಕಾಂಗ್ರೆಸ್ ಸರ್ಕಾರ ಮಹಿಳೆಯರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ: ಶರಣಮ್ಮ ಕಾಮರೆಡ್ಡಿಬಸ

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಮಹಿಳೆಯರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ...