ಯಾದಗಿರಿ | ಬಿಸಿಲಿನ ತಾಪ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಎಸ್‌ಯುಸಿಐ ಒತ್ತಾಯ

Date:

ಯಾದಗಿರಿ ಜಿಲ್ಲೆಯಲ್ಲಿ ಏರುತ್ತಿರುವ ಬಿಸಿಲಿನ ತಾಪಮಾನವನ್ನು ನಿಗ್ರಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದ(ಕಮ್ಯುನಿಸ್ಟ್) ಮುಖಂಡ ಸೋಮಶೇಖರ್ ಒತ್ತಾಯಿಸಿದರು.

ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ 40ರಿಂದ 44 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಮುಂದಿನ ಹಲವಾರು ದಿನಗಳ ಕಾಲ ಇದೇ ಸ್ಥಿತಿ ಅಥವಾ ಇನ್ನೂ ಹೆಚ್ಚಿನ ತಾಪಮಾನ ಉಂಟಾಗುತ್ತದೆ ಎಂದು ಕೇಂದ್ರ ಡಿಡಿಎಂಎಸ್‌ನಿಂದ ನಿರಂತರವಾಗಿ ನಾಗರಿಕರಿಗೆ ಸಂದೇಶ ಕಳುಹಿಸಲಾಗುತ್ತಿದೆ.

ಹವಾಮಾನ ವರದಿ ಜಿಲ್ಲೆಯ ಜನರನ್ನು ತಲ್ಲಣಗೊಳಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದಾಗಿ ದುಡಿಯುವ ಜನರು, ಅಶಕ್ತರು, ರೋಗಿಗಳು, ವೃದ್ಧರು, ಮಕ್ಕಳು, ಗರ್ಭಿಣಿ ಬಾಣಂತಿಯರು ಸೇರಿದಂತೆ ಬಹುತೇಕ ಸಾಮಾನ್ಯ ಜನರ ಆರೋಗ್ಯ ಹದಗೆಡಲು ಇದೂ ಕೂಡ ಕಾರಣವಾಗುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಿಗೆ ಹಾಗೂ ಸಂತೆಗಳಿಗೆ ಬರುವ ನಾಗರಿಕರು ಸೇರಿದಂತೆ ಜನಸಾಮಾನ್ಯರ ಆರೋಗ್ಯ ಕಾಪಾಡುವ ಕುರಿತು ಜಿಲ್ಲಾಡಳಿತ ಈ ಕೆಳಗಿನಂತೆ ಸೂಕ್ತವಾದ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಎಸ್‌ಯುಸಿಐ(ಸಿ) ಒತ್ತಾಯಿಸಿದೆ.

ನಗರದ ಗಾಂಧಿ ಚೌಕ್‌, ಸುಭಾಷ್ ಚೌಕ್‌, ಹಳೆ ಬಸ್ ನಿಲ್ದಾಣ ಮತ್ತು ಅದರ ಮುಂಭಾಗದಲ್ಲಿ, ಹೊಸ ಬಸ್ ನಿಲ್ದಾಣದಲ್ಲಿ ಮತ್ತು ಅದರ ಮುಂಭಾಗದಲ್ಲಿ, ರೈಲು ನಿಲ್ದಾಣದಲ್ಲಿ ಮತ್ತು ಅದರ ಮುಂಭಾಗದಲ್ಲಿ, ಹೊಸಳ್ಳಿ ಕ್ರಾಸ್, ಬಸವೇಶ್ವರ ಚೌಕ್,  ಜಿಲ್ಲಾಡಳಿತ ಭವನದ (ಮಿನಿ ವಿಧಾನ ಸೌಧ) ಮುಂಭಾಗ ಮತ್ತು ಆ ಕಟ್ಟಡದಲ್ಲಿ ಇರುವ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಇಲಾಖೆಗಳ ಕಚೇರಿಗಳಲ್ಲಿ ತಂಪಾದ ಶುದ್ಧವಾದ ಕುಡಿಯುವ ನೀರಿನ ಅರಟ್ಟಿಗೆ ವ್ಯವಸ್ಥೆ ಮಾಡಬೇಕು. ಅದೇ ರೀತಿ ಶಹಾಪುರ, ಸುರಪುರ, ಗುರುಮಠಕಲ್, ವಡಗೇರಿ ಮತ್ತು ಹುಣಸಗಿ ಸೇರಿದಂತೆ ಜನ ಸೇರುವ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.

“ಕೆಲಸ ಕಾರ್ಯಗಳಿಗೆ ಜನರು ಬಂದು ಸೇರುವ ನಗರದ ಹಲವು ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ ಮಾಡಬೇಕು. ರಸ್ತೆಗಳು ಕಾದು ಕೆಂಡವಾಗಿದ್ದು ತಾಪಮಾನ ಹೆಚ್ಚಿಸುತ್ತಿವೆ. ಆದ್ದರಿಂದ ಜನರು ಕಾಲು ನಡಿಗೆಯಲ್ಲಿ ತಿರುಗಾಡುವ ಸುಭಾಷ್ ಚೌಕ್ ರಸ್ತೆಗಳು, ಹಳೆ ಬಸ್ ನಿಲ್ದಾಣದ ಮುಂಭಾಗದ ರಸ್ತೆ, ರೈಲು ನಿಲ್ದಾಣ ರಸ್ತೆ, ಗಾಂಧಿ ಚೌಕ್ ರಸ್ತೆ, ಬಸವೇಶ್ವರ ಚೌಕ್, ತಹಶೀಲ್ದಾರ್ ಕಚೇರಿ- ಕೋರ್ಟ್ ಮುಂಭಾಗ ರಸ್ತೆಗಳಿಗೆ ಪ್ರತಿ ದಿನ ಮದ್ಯಾಹ್ನ ಮತ್ತು ಸಂಜೆ ಎರಡು ಹೊತ್ತು ನೀರು ಸಿಂಪಡಿಸಿ ಬಿಸಿಲಿನ ತಾಪಮಾನ ಕಡಿಮೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

“ಯಾದಗಿರಿ ನಗರವೂ ಸೇರಿದಂತೆ ಜಿಲ್ಲೆಯ ಇತರ ನಗರ ಪಟ್ಟಣ ಹಾಗೂ ಗ್ರಾಮಗಳಲ್ಲಿ ಪದೇ ಪದೇ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಈ ಕುರಿತು ಕೂಡಲೇ ಕ್ರಮವಹಿಸಿ ಸಂಬಂಧಪಟ್ಟ ಇಲಾಖೆಯಿಂದ ನಿರಂತರ ವಿದ್ಯುತ್ ಸರಬರಾಜು ಮಾಡಿದರೆ, ಬಿಸಿಲಿನ ತಾಪಮಾನ ಕಡಿಮೆ ಮಾಡಿಕೊಳ್ಳಲು ನಾಗರಿಕರು ತಾವೇ ಸ್ವಯಂ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಿಕೊಡಿ” ಎಂದು ಒತ್ತಾಯಿಸಿದ್ದಾರೆ.

“ಜಿಲ್ಲಾ ಆಸ್ಪತ್ರೆ,  ತಾಲೂಕು ಆಸ್ಪತ್ರೆ ಮತ್ತು ಪಿಎಚ್‌ಸಿಗಳಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಸಹಿತ ಅಗತ್ಯ ತುರ್ತು ಚಿಕಿತ್ಸೆ ಮತ್ತು ಸಮರ್ಪಕ ಔಷಧಿಗಳು ದೊರೆಯುವಂತೆ ಮಾಡಬೇಕು. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ, ಜಿಲ್ಲಾಡಳಿತ, ನಗರಸಭೆಗಳು ಬಿಸಿಲಿನ ತಾಪಮಾನ ನಿಗ್ರಹಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ಮತ್ತು ನಾಗರಿಕರು ಸ್ವಯಂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ನಗರದಲ್ಲಿ ದ್ವನಿವರ್ಧಕ ಮೂಲಕ ಮಾಹಿತಿಗಳನ್ನು ನೀಡಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೆಆರ್‌ಎಸ್ ನೀರಿನ ಮಟ್ಟ‌ ಕುಸಿತ; 74 ಅಡಿಗೆ ಇಳಿದರೆ ಬೆಳೆಗೆ ನೀರಿಲ್ಲ

ಬಿಸಿಲಿನ ತಾಪಮಾನ ಹೆಚ್ಚು ಇದ್ದರೂ ಯಾದಗಿರಿ ನಗರ ಸೇರಿದಂತೆ ಶಹಾಪುರ ಮತ್ತಿತರ ನಗರಗಳ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಹಾಕಿ ವಾಹನ ನಿಲ್ಲಿಸುವುದನ್ನು ಕೂಡಲೇ ನಿಲ್ಲಿಸಬೇಕು. ಸಿಗ್ನಲ್ ಹಾಕಿ ವಾಹನ ನಿಲ್ಲಿಸುವುದೇ ಆದರೆ ಎಲ್ಲಾ ಸಿಗ್ನಲ್ ಸ್ಥಳಗಳಲ್ಲಿ ನಿಲ್ಲುವ ವಾಹನಗಳು ಮತ್ತು ವಾಹನ ಸವಾರರಿಗೆ ಸಮರ್ಪಕವಾಗಿ ನೆರಳಿನ ವ್ಯವಸ್ಥೆ ಮಾಡಬೇಕು.

“ಬಸ್‌ಗಳು ಬಿಸಿಲಿನಿಂದ ಕಾದು ಕೆಂಡವಾಗುತ್ತಿದ್ದು, ಬಸ್ ಪ್ರಯಾಣ ಯಾತನಾಮಯವಾಗುತ್ತಿದೆ. ಆದ್ದರಿಂದ ಪ್ರತಿ ದಿನ ಬಸ್‌ಗಳಿಗೆ ನೀರು ಸಿಂಪಡಿಸಿ ತಂಪಾಗಿರಿಸಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿದರು.

“ಜಿಲ್ಲೆಯಲ್ಲಿ ಏರುತ್ತಿರುವ ಬಿಸಿಲಿನ ತಾಪಮಾನ, ಅದರಿಂದ ಉಂಟಾಗುವ ಆರೋಗ್ಯ‌ ಸಮಸ್ಯೆಗಳು ಹಾಗೂ ನಾಗರಿಕರ ಮೇಲಾಗುವ ಇತರ ಗಂಭೀರ ಪರಿಣಾಮಗಳನ್ನು ನಿರ್ವಹಿಸಲು ಸಂಬಂಧಪಟ್ಟ ಇಲಾಖೆಗಳು ಕೆಲವು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ: ವಿನಯ್ ಕುಮಾರ್

ಪಾಳೇಗಾರಿಕೆ, ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನನ್ನದು. ಸಚಿವ ಎಸ್ ಎಸ್...

ಕಲಬುರಗಿ | ನನ್ನನ್ನು ಎನ್‌ಕೌಂಟರ್ ಮಾಡುವ ಜೀವ ಬೆದರಿಕೆ ಪತ್ರ ಬಂದಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬಿಜೆಪಿಯವರು ಗಲಭೆ ಸೃಷ್ಟಿಸಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದ್ರೂ...