ಯಾದಗಿರಿ | ಲಘುವಾಹನ ನಿಲುಗಡೆಗೆ ಸ್ಥಳ ನೀಡುವಂತೆ ಒತ್ತಾಯ

Date:

ಯಾದಗಿರಿ ಜಿಲ್ಲೆಯಾಗಿ 13 ವರ್ಷಗಳಿ ಕಳೆದರೂ ಈವರೆಗೆ ಸಾಕಷ್ಟು ಹೋರಾಟ ನಡೆಸಿ, ಮನವಿ ಸಲ್ಲಿಸಿದ್ದರೂ, ಪತ್ರಿಕೆ ಟಿವಿ ಮಾಧ್ಯಮದಲ್ಲಿ ಸುದ್ದಿಯಾದರೂ ಕೂಡ ಈವರೆಗೆ ಲಘುವಾಹನ ಚಾಲಕರಿಗೆ ಒಂದು ಟ್ಯಾಕ್ಸಿ ಸ್ಟ್ಯಾಂಡ್ ಒದಗಿಸಲು ಸಾಧ್ಯವಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ್‌ ಕೆ ಮುದ್ನಾಳ್‌ ಆರೋಪಿಸಿದರು.

ಯಾದಗಿರಿ ನಗರದ ಲಘು ವಾಹನ ನಿಲುಗಡೆ ಸ್ಥಳ ಒದಗಿಸಿಕೊಡುವಂತೆ ಗಿರಿನಾಡು ಕಾರು ಚಾಲಕರ ಸಂಘದ ಕಾರ್ಯಕರ್ತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರರಿಗೆ ಮತ್ತು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

“ಲಘು ವಾಹನ ಚಾಲಕರು ಇಂದಿಗೂ ರಸ್ತೆ ಬದಿಯಲ್ಲಿಯೇ ನಿಂತು ತಮ್ಮ ವ್ಯವಹಾರ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ತೆರಿಗೆ ಕಟ್ಟುವಲ್ಲಿ ಚಾಲಕರು ಮತ್ತು ಮಾಲೀಕರು ಮೊದಲ ಸ್ಥಾನದಲ್ಲಿದ್ದಾರೆ. ಏಕೆಂದರೆ ತೆರಿಗೆ ಪಾವತಿಸಿದ ನಂತರವೇ ವಾಹನವನ್ನು ರಸ್ತೆಗೆ ಇಳಿಸಲಾಗುತ್ತದೆ. ಇನ್ಷೂರೆನ್ಸ್ ಪಾವತಿ ಮಾಡಿದ ಮೇಲೆಯೇ ವಾಹನ ಬಳಕೆ ಆರಂಭವಾಗುತ್ತದೆ. ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಮುಂಗಡವಾಗಿಯೇ ತೆರಿಗೆ ಪಾವತಿಸುವ ಇಂತಹ ವಾಹನ ಮಾಲೀಕರು ಮತ್ತು ಚಾಲಕರು ಸೌಲಭ್ಯದಿಂದ ವಂಚಿತರಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾದಗಿರಿ ಜಿಲ್ಲೆಯಾದಾಗಿನಿಂದ ಹೊರಗಿನವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅವರ ನಿರ್ಲಕ್ಷ್ಯದಿಂದ ಜಿಲ್ಲೆಯ ಅಭಿವೃದ್ಧಿಯಾಗಿಲ್ಲ. ಈಗ ಸ್ವತಃ ಜಿಲ್ಲೆಯವರೇ ಸಚಿವರಾಗಿದ್ದೀರಿ. ಆದ್ದರಿಂದ ಜಿಲ್ಲೆಯ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಸಚಿವರಿಗೆ ಮನವಿ ಮಾಡಿದರು.

ಸಚಿವ ದರ್ಶನಾಪೂರ ಅವರು ಮಾತನಾಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಸೂಚಿಸಿದರು. ವಾಹನ ನಿಲುಗಡೆ ಸ್ಥಳದಲ್ಲಿ ಮೂಲ ಸೌಕರ್ಯಗಳಾದ ಕೊಳವೆಬಾವಿ, ಶೆಡ್ ನಿರ್ಮಾಣ, ಶೌಚಾಲಯ ವ್ಯವಸ್ಥೆ ಮಾಡಿಕೊಡಲು ಸೂಚಿಸುವುದಾಗಿ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ದಸರಾ ನಿಮಿತ್ತ 395 ಹೆಚ್ಚುವರಿ ಪೌರಕಾರ್ಮಿಕರ ನೇಮಕ: ಎಂಸಿಸಿ

ಈ ಸಂದರ್ಭದಲ್ಲಿ ಗಿರಿನಾಡು ಕಾರು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಬಸಣ್ಣಗೌಡ ಇಟಗಿ, ಉಪಾಧ್ಯಕ್ಷ ಶಿವ ಶರಣಪ್ಪ ನಾರಣಪೇಟ್, ಖಜಾಂಚಿ ಸಾಬಯ್ಯ ಗುತ್ತೇದಾರ್, ಸದಸ್ಯರುಗಳಾದ ಶರಣು ಜೋತ, ಅಶೋಕ್ ಸಜ್ಜನ್, ವೆಂಕಟರೆಡ್ಡಿ ನಾಯ್ಕಲ್, ರಸಿದ್ ಪಾಷಾ, ಬಾಬಾ ಸಲೀಂ, ಶೇಕ್, ಸಂತೋಷ್ ರಾಥೋಡ್, ಬಾಬಾ ಪಟೇಲ್, ಸಾಬೀರ್, ಬಂದಪ್ಪ ಅಕ್ಕಿ, ಸಿದ್ದು ಉಮೇಶ್, ಸದಾಶಿವ ವಿಶ್ವನಾಥ್ ನವೀನ್, ಅಕ್ರಂ, ಜಮಲ್, ರಫೀಕ್, ಮೈನುದ್ದಿನ್, ಶರಣು ಹೊಸಮನಿ, ಅಪ್ಸರ್, ಬೀರಪ್ಪ, ಮಹೇಶ್ ಹೊಸಮನಿ, ದಿಲೀಪ್, ಅಜಿತ್, ನೈಮ್, ಬನಶಂಕರ್, ವಿಶ್ವಸ್ವಾಮಿ, ವಿಜಯಕುಮಾರ್, ಕಾಡಪ್ಪ, ವೀರೇಶ್ ಗೌಡ, ಮೌಲ, ಗೌಸ್, ರಿಯಾಜ್, ದೇವರಾಜ್ ಕುಮನೂರ್, ಷಡಕ್ಷಯ ಸ್ವಾಮಿ, ಅಯ್ಯಣ್ಣ, ಮೈಬೂಬ್, ಭೀಮು ಪೂಜಾರಿ, ತಾಯಪ್ಪ ಕೊಹಿಲೂರ್ ಸೇರಿದಂತೆ ಇತರರು ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಮನರೇಗಾ ಕಾರ್ಮಿಕರಿಗೆ ವೇತನ ನೀಡುವಂತೆ ಆಗ್ರಹ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)ಯ ಫಲಾನುಭವಿಗಳಗೆ ಬಾಕಿ...

ಯಾದಗಿರಿ | ಪಂಪ್‌ಸೆಟ್‌ ವಸ್ತುಗಳ ಕಳವು; ಆರೋಪಿಗಳ ಪತ್ತೆಗೆ ಆಗ್ರಹ

ರೈತರ ಪಂಪ್‌ಸೆಟ್‌ಗಳ ಮೋಟರ್ ಸ್ಟಾರ್ಟರ್, ಕಾಪರ್ ವೈರ್, ಕೇಬಲ್ ಸೇರಿದಂತೆ ಹಲವು...

ಯಾದಗಿರಿ | ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಮಗು ಹತ್ಯೆ

ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಘಟನೆ ಬಾಟಲಿಯಲ್ಲಿ ವಿಷ ಬೆರಸಿದ...

ಯಾದಗಿರಿ | ಕೃಷಿ ಕೂಲಿಕಾರರಿಗೆ ಕನಿಷ್ಠ ವೇತನ ಜಾರಿ ಮಾಡುವಂತೆ ಆಗ್ರಹ

ಕೃಷಿ ಕೂಲಿಕಾರರು ನಿತ್ಯದ ದುಡಿಮೆಯನ್ನೇ ಅವಲಂಬಿಸಿ ಜೀವನ ಸಾಗಿಸಬೇಕು. ಇವರಿಗೆ ಈ...