ದೇಶ

ಕಾವೇರಿ ನೀರು ವಿವಾದ: ಪ್ರಧಾನಿ ಮಧ್ಯಸ್ಥಿಕೆಗೆ ಮಾಜಿ ಪ್ರಧಾನಿ ದೇವೇಗೌಡ ಪತ್ರ

ರಾಜ್ಯದಲ್ಲಿ ತೀವ್ರ ಬರ ಆವರಿಸಿರುವ ನಡುವೆಯೂ ತಮಿಳುನಾಡಿಗೆ ಕರ್ನಾಟಕದ ಜಲಾಶಯಗಳಿಂದ ಕಾವೇರಿ ನೀರು ಹರಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ...

Fact Check | ಹೊಸ ಸಂಸತ್ ಭವನಕ್ಕೆ ಯುಪಿಎ ಸರ್ಕಾರ 3,000 ಕೋಟಿ ರೂ. ಅನುಮೋದಿಸಿತ್ತೆ?

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಯುಪಿಎ ಸರ್ಕಾರ 2012ರಲ್ಲಿ ಯೋಜನೆ ರೂಪಿಸಿತ್ತು. 3,000 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಆದರೆ, ಮೋದಿ ಸರ್ಕಾರ ಕೇವಲ 970 ಕೋಟಿ ರೂ.ಗಳಲ್ಲಿ...

ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗೆ ಶಿಕ್ಷೆಯಾದರೆ ಅದು ಗುಣಮಟ್ಟದ ಶಿಕ್ಷಣವಲ್ಲ: ಸುಪ್ರೀಂ ಬೇಸರ

ಉತ್ತರ ಪ್ರದೇಶದ ಮುಜಫರ್‌ ನಗರ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ನಡೆದುಕೊಂಡ ರೀತಿಗೆ ಸುಪ್ರೀಂ ಕೋರ್ಟ್ ಸೋಮವಾರ(ಸೆಪ್ಟೆಂಬರ್‌ 25) ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ...

ಕುಸ್ತಿಪಟುಗಳಿಗೆ ಕಿರುಕುಳ | ಬ್ರಿಜ್‌ ಭೂಷಣ್‌ರನ್ನು ಮೋದಿ ಯಾಕೆ ರಕ್ಷಿಸುತ್ತಿದ್ದಾರೆ?

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ, ಬಿಜೆಪಿ ಸಂಸದ, ರೆಸ್ಲಿಂಗ್ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ....

ಹವಾಮಾನ ವೈಪರೀತ್ಯ ತಡೆಗೆ ವಿಶ್ವಾಸಾರ್ಹ ತಂತ್ರಗಳು ಅಗತ್ಯ: ಮೊಂಟೆಕ್ ಸಿಂಗ್‌

“ಹವಾಮಾನ ವೈಪರೀತ್ಯ ತಡೆಗೆ ವಿಶ್ವಾಸಾರ್ಹ ತಂತ್ರಗಳನ್ನು ಹೊಂದಬೇಕಾಗಿದೆ” ಎಂದು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ, ಅರ್ಥಶಾಸ್ತ್ರಜ್ಞ ಮಾಂಟೆಕ್ ಸಿಂಗ್ ಅಹ್ಲೂವಾಲಿಯಾ ಹೇಳಿದರು. ದೇಶವು ಅಳವಡಿಸಿಕೊಂಡಿರುವ ಉದಾರೀಕರಣ ನೀತಿಯ ರೂವಾರಿಗಳಲ್ಲಿ ಒಬ್ಬರಾದ ಮೊಂಟೆಕ್ ಸಿಂಗ್, ತಮ್ಮ...

ಕರ್ನಾಟಕದ ಗೆಲುವಿನ ಪಯಣ ಪಂಚ ರಾಜ್ಯಗಳಿಗೂ ವಿಸ್ತರಿಸಲಿದೆ: ರಾಹುಲ್‌ ಗಾಂಧಿ  

ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಿಜೋರಾಂನಲ್ಲಿ ನಡೆಯುವ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೂ ಅಚ್ಚರಿ ಕಾದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದರು. ನವದೆಹಲಿಯಲ್ಲಿ...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲು ಮಸೂದೆಗೆ ತಿದ್ದುಪಡಿ: ಮಲ್ಲಿಕಾರ್ಜುನ ಖರ್ಗೆ

2024ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ತರುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಪಕ್ಷದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “2024 ರಲ್ಲಿ ನಮ್ಮ ಸರ್ಕಾರ...

ಮಹಿಳಾ ಮೀಸಲಾತಿ ಮಸೂದೆ 2024, 2029, 2034ರಲ್ಲೂ ಜಾರಿಗೆ ಬರುವುದಿಲ್ಲ | ಸಿ ಎಂ ಸಿದ್ದರಾಮಯ್ಯ

"ಮೋದಿಯವರ ಮಹಿಳಾ ಮೀಸಲಾತಿ ಮಸೂದೆ 2024, 2029 ಹಾಗೂ 2034ರಲ್ಲೂ ಜಾರಿ ಬರುವುದಿಲ್ಲ. ಡೀಲಿಮಿಟೇಷನ್, ಜಾತಿ ಗಣತಿಯ ಕೊಕ್ಕೆ ಹಾಕಿದ್ದಲ್ಲದೇ, ಮಸೂದೆಯ ಆಯಸ್ಸು 15 ವರ್ಷ ಎಂದು ನಿಗದಿ ಮಾಡಿರುವುದು ಬಿಜೆಪಿಯ ಡೋಂಗಿತನ....

ಹೊಸ ಸಂಸತ್ ಕಟ್ಟಡವನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎನ್ನಬೇಕು: ಜೈರಾಮ್ ರಮೇಶ್

ಹೊಸ ಸಂಸತ್ ಭವನದ ರಚನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಮೋದಿ ಅವರು ಪ್ರಜಾಪ್ರಭುತ್ವ ಮತ್ತು ಚರ್ಚೆಗಳನ್ನು ಕೊಂಡಿದ್ದಾರೆ. 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ಅವಮಾನ ಮಾಡಿದ್ದಾರೆ ಎಂದು...

ಮಣಿಪುರದಲ್ಲಿ ಇಂಟರ್‌ನೆಟ್‌ ಪುನರಾರಂಭ: ಸಿಎಂ ಬಿರೇನ್ ಸಿಂಗ್

ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡ ನಂತರ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಶನಿವಾರದಿಂದ ಮತ್ತೆ ಆರಂಭಿಸುವುದಾಗಿ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ನಕಲಿ ಸುದ್ದಿ,...

‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ’: ಬಿಎಸ್‌ಪಿ ಸಂಸದ ದಾನಿಶ್ ಅಲಿ ಭೇಟಿ ಮಾಡಿದ ರಾಹುಲ್

ಲೋಕಸಭೆಯಲ್ಲಿ ಬಿಜೆಪಿ ಸಂಸದನಿಂದ ಭಯೋತ್ಪಾದಕ ಎಂದು ನಿಂದನೆಗೊಳಗಾದ ಉತ್ತರ ಪ್ರದೇಶದ ಅಮ್ರೊಹ ಕ್ಷೇತ್ರದ ಬಿಎಸ್‌ಪಿ ಸಂಸದ ದಾನಿಶ್ ಅಲಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಭೇಟಿ ಮಾಡಿದರು. ಅಲಿ...

ಚಂದ್ರಯಾನ 3: ವಿಕ್ರಮ್, ಪ್ರಗ್ಯಾನ್‌ನಿಂದ ಇನ್ನೂ ಯಾವುದೇ ಸಿಗ್ನಲ್ ಬಂದಿಲ್ಲ ಎಂದ ಇಸ್ರೋ

ಚಂದ್ರನ ದಕ್ಷಿಣ ಧ್ರುವದಲ್ಲಿ ನಿಂತಿರುವ ಚಂದ್ರಯಾನ 3 ಯೋಜನೆಯ ಭಾಗವಾದ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಗಳಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ. ವಿಕ್ರಮ್‌ ಲ್ಯಾಂಡರ್‌ ಹಾಗೂ...

ಜನಪ್ರಿಯ