- ವಿದೇಶಿ ವಾಣಿಜ್ಯ ಸಾಲದ ಮಿತಿ 1.5 ಬಿಲಿಯನ್ ಡಾಲರ್‌ಗೆ ಹೆಚ್ಚಳ
- ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತ 155.8 ಲಕ್ಷ ಕೋಟಿ ರೂ
ವಿದೇಶಿ ವಿನಿಮಯದ ದರದ ಅನ್ವಯ ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತ 7.03 ಲಕ್ಷ ಕೋಟಿ ರೂ. (ಶೇ.2.6) ಇರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ತಿಳಿಸಿದ್ದಾರೆ.
ಪ್ರಶ್ನೆಯೊಂದಿಗೆ ಸೋಮವಾರ ಉತ್ತರಿಸಿದ ಅವರು, “ಪ್ರಸಕ್ತ ಹಣಕಾಸು ಅಂತ್ಯಕ್ಕೆ (2023ರ ಮಾರ್ಚ್ 31) ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತವು 155.8 ಲಕ್ಷ ಕೋಟಿ ರೂ. (ದೇಶದ ಒಟ್ಟು ಆಂತರಿಕ ಉತ್ಪಾದನೆಯ ಶೇಕಡ 57.3) ಆಗುವುದೆಂದು ಅಂದಾಜು ಮಾಡಲಾಗಿದೆ. ಅಲ್ಲದೆ ಒಟ್ಟು ಸಾಲದಲ್ಲಿ ವಿದೇಶಿ ಸಾಲದ ಪ್ರಮಾಣವು ಶೇ. 4.5 ರಷ್ಟು ಇದೆ” ಎಂದು ಹೇಳಿದ್ದಾರೆ.
“ವಿದೇಶಿ ಹೂಡಿಕೆಯ ಮೂಲಗಳನ್ನು ವಿಸ್ತರಿಸಲು ಆರ್‌ಬಿಐನ ಸಲಹೆ ಮೇರೆಗೆ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ವಿನಿಮಯ ದರದಲ್ಲಿನ ಏರಿಳಿತ ಮತ್ತು ಜಾಗತಿಕ ಪರಿಣಾಮಗಳನ್ನು ನಿಭಾಯಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಪೂರ್ವಾನುಮತಿ ಇಲ್ಲದೆ ಪಡೆಯುವ ವಿದೇಶಿ ವಾಣಿಜ್ಯ ಸಾಲದ ಮಿತಿಯನ್ನು 1.5 ಬಿಲಿಯನ್ ಡಾಲರ್‌ಗೆ ಹೆಚ್ಚಿಸಲಾಗಿದೆ ಎಂದು ನಿರ್ಮಲ ಸೀತಾರಾಮನ್ ತಿಳಿಸಿದ್ದಾರೆ.