ಜೂನಿಯರ್‌ಗಳಿಗೆ ಮನಬಂದಂತೆ ಬಡಿಗೆಯಿಂದ ಥಳಿಸಿದ ಎನ್‌ಸಿಸಿ ಸೀನಿಯರ್ : ವಿಡಿಯೋ ವೈರಲ್

Date:

  • ಮುಂಬೈ ಸಮೀಪದ ಥಾಣೆಯ ಬಂದೋಡ್ಕರ್ ಕಾಲೇಜಿನಲ್ಲಿ ನಡೆದ ಘಟನೆ
  • ‘ಇಂತಹ ವರ್ತನೆಯನ್ನು ನಾವು ಸಹಿಸುವುದಿಲ್ಲ’ ಎಂದ ಕಾಲೇಜಿನ ಪ್ರಾಂಶುಪಾಲೆ

ಶಾಲಾ-ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಯ ಭಾಗವಾಗಿರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್‌(ಎನ್‌ಸಿಸಿ)ನ ಸೀನಿಯರ್ ವಿದ್ಯಾರ್ಥಿಯೊಬ್ಬ ಜೂನಿಯರ್‌ಗಳಿಗೆ ಮನಬಂದಂತೆ ಬಡಿಗೆಯಿಂದ ಥಳಿಸಿ, ಶಿಕ್ಷೆ ನೀಡಿದ ಘಟನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಮುಂಬೈ ಸಮೀಪದ ಥಾಣೆಯ ಬಂದೋಡ್ಕರ್ ಕಾಲೇಜಿನಲ್ಲಿನ ಎನ್‌ಸಿಸಿ ತರಬೇತಿಯ ವೇಳೆ ಈ ಬೆಳವಣಿಗೆ ನಡೆದಿದ್ದು, ಘಟನೆಯನ್ನು ದೂರದ ಕಿಟಕಿ ಬಳಿ ನಿಂತು ನೋಡುತ್ತಿದ್ದ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಮಳೆ ಬರುತ್ತಿದ್ದರೂ ನೆಲದಲ್ಲಿ ತಲೆ ಕೆಳಗಾಗಿಸಿ ಮಲಗಿಸಿದ್ದ ಸುಮಾರು ಏಳರಿಂದ ಎಂಟು ಮಂದಿ ವಿದ್ಯಾರ್ಥಿಗಳ ಕುಂಡೆಗೆ ಮನಬಂದಂತೆ ಥಳಿಸಿದ್ದಾನೆ. ಒಬ್ಬೊಬ್ಬ ವಿದ್ಯಾರ್ಥಿಗೂ ಸುಮಾರು ನಾಲ್ಕೈದು ಬಾರಿ ಬಡಿಗೆಯಿಂದ ಥಳಿಸಲಾಗಿದೆ. ಓರ್ವ ವಿದ್ಯಾರ್ಥಿ ನಿರಂತರ ಹೊಡೆತದ ನೋವು ಸಹಿಸಲಾರದೆ, ಹೊಡೆಯದಂತೆ ಕೈ ಅಡ್ಡ ಇಟ್ಟು ಅಂಗಲಾಚುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಡಿಯೋದಲ್ಲಿ ಕೋಲು ಹಿಡಿದು ಥಳಿಸಿರುವ ವ್ಯಕ್ತಿಯನ್ನು ಹಿರಿಯ ಎನ್‌ಸಿಸಿ ಕೆಡೆಟ್ ಎಂದು ಗುರುತಿಸಲಾಗಿದೆ. ಡ್ರಿಲ್ ನಡೆಸಲು ವಿಫಲರಾದ ಹಿನ್ನೆಲೆಯಲ್ಲಿ ಈ ರೀತಿಯಾಗಿ ನಡೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಇದನ್ನು ಓದಿದ್ದೀರಾ?

ವಿಡಿಯೋ ವೈರಲ್ ಆದ ಬಳಿಕ ಪ್ರತಿಕ್ರಿಯೆ ನೀಡಿರುವ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ನಾಯ್ಕ್, ‘ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಂತಹ ವರ್ತನೆಯನ್ನು ನಾವು ಸಹಿಸುವುದಿಲ್ಲ. ತಪ್ಪಿತಸ್ಥ ಹಿರಿಯ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

‘ಸುಮಾರು 40 ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಎನ್ ಸಿಸಿ ತರಬೇತಿ ನಡೆಯುತ್ತಿದೆ. ಎನ್‌ಸಿಸಿಯ ಜವಾಬ್ದಾರಿ ಇರುವ ಶಿಕ್ಷಕರ ಅನುಪಸ್ಥಿತಿಯ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿ ಮಾಡಿರುವ ಕೃತ್ಯ ಕೇವಲ ಮಾನಸಿಕ ಅಸ್ವಸ್ಥರು ಮಾತ್ರ ಮಾಡಲು ಸಾಧ್ಯ’ ಎಂದು ಪ್ರಾಂಶುಪಾಲೆ ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯ ಪ್ರಕರಣ | ಮರುತನಿಖೆ ಕೋರಿದ್ದ ಅರ್ಜಿ: ಸರ್ಕಾರ, ಸಿಬಿಐಗೆ ಹೈಕೋರ್ಟ್‌ ನೋಟಿಸ್‌

ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ/ಕೊಲೆ ಪ್ರಕರಣದ ಮರು ತನಿಖೆಗೆ...

ಪಶ್ಚಿಮ ಬಂಗಾಳ | ಸಿಖ್ ಐಪಿಎಸ್ ಅಧಿಕಾರಿಯನ್ನು ‘ಖಲಿಸ್ತಾನಿ’ ಎಂದ ಬಿಜೆಪಿಗರು; ಒಂದಾದ ಸಿಖ್ಖರು

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ವಿವಾದಿತ ಸಂದೇಶಖಲಿ ಪ್ರದೇಶಕ್ಕೆ...

ಚಂಡೀಗಢ ಮೇಯರ್ ಚುನಾವಣಾ ಅಕ್ರಮ: ಆಪ್ ಅಭ್ಯರ್ಥಿಯೇ ವಿಜಯಿ; ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ದೇಶಾದ್ಯಂತ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿ ನಡೆಸಿದ...

ಮತಪತ್ರದಲ್ಲಿ ನೀವು ಟಿಕ್ ಹಾಕಿದ್ದೇಕೆ? ಚಂಡೀಗಢ ಮೇಯರ್ ಚುನಾವಣಾಧಿಕಾರಿಯ ಬೆವರಿಳಿಸಿದ ಸುಪ್ರೀಂ; ವಿಡಿಯೋ ವೈರಲ್

ದೇಶಾದ್ಯಂತ ವ್ಯಾಪಕ ಚರ್ಚೆಗೀಡಾಗಿರುವ ಚಂಡೀಗಢ ಮೇಯರ್ ಚುನಾವಣೆಯಲ್ಲಿನ ಅಕ್ರಮದ ವಿಚಾರಣೆಯ ವೇಳೆ...