ಮೀಸಲಾತಿ ವಿಚಾರ | ಕರ್ನಾಟಕದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರಕರ್ತ, ಚಿತ್ರನಿರ್ದೇಶಕ ಡಾ ಬಸವರಾಜ್ ಇಟ್ನಾಳ ಪತ್ರ

Date:

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಸ್ಲಿಮರಿಗೆ ಹಿಂದುಳಿದ ವರ್ಗದ 2ಬಿಯಲ್ಲಿ ನೀಡಲಾಗಿದ್ದ 4% ಮೀಸಲಾತಿ ಇನ್ಮುಂದೆ ಲಿಂಗಾಯತ ಮತ್ತು ಒಕ್ಕಲಿಗರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಮೀಸಲಾತಿ ಕುರಿತು ಪತ್ರಕರ್ತ, ಚಿತ್ರನಿರ್ದೇಶಕ ಡಾ ಬಸವರಾಜ್ ಇಟ್ನಾಳ ಅವರು ದಿನಾಂಕ 23 ಮಾರ್ಚ್ 2023ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಮನವಿ ಪತ್ರವನ್ನು ಬರೆದಿದ್ದು, ಕೆಲವು ಅಂಶಗಳನ್ನು ನಿವೇದಿಸಿಕೊಂಡಿದ್ದಾರೆ.

ಉಚ್ಚ ನ್ಯಾಯಾಲಯಕ್ಕೆ ಅವರು ಬರೆದ ಪತ್ರದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕ ವಿಧಾನ ಸಭೆಗೆ ನಡೆದ ಕಳೆದ ಚುನಾವಣಾ ಸಮಯದಲ್ಲಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಬಿಂಬಿಸಲು ಹೋಗಿ ಲಿಂಗಾಯತರನ್ನು ಹಿಂದೂ ವಿರೋಧಿ, ವೀರಶೈವ ವಿರೋಧಿ ಎಂಬ ಕಲ್ಪನೆ ಮೂಡಿಸಿ ವಿಶ್ವಗುರು ಬಸವಣ್ಣನ ಅನುಯಾಯಿಗಳಾದ ಲಿಂಗಾಯತರನ್ನು ಸಂಕುಚಿತಗೊಳಿಸಲಾಯಿತು. ಅಷ್ಟೇ ಅಲ್ಲ, ಲಿಂಗಾಯತವನ್ನು ಒಂದು ಅಲ್ಪಸಂಖ್ಯಾತ ಧರ್ಮವಾಗಿಸಿ ಈ ದೇಶದ ಅಲ್ಪಸಂಖ್ಯಾತರ ಮೀಸಲಾತಿ ಪಾಲು ಬೇಡುವ ಸ್ಥಿತಿಗೆ ತರಲಾಯಿತು. ಒಂದು ಮಟ್ಟದಲ್ಲಿ ಅದು ವೀರಶೈವ ವಿರೋಧಿ ಚಳುವಳಿ ಆಗಿದ್ದರೆ, ಇನ್ನೊಂದು ಮಟ್ಟದಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯಲ್ಲಿ ಲಿಂಗಾಯತರನ್ನು ಪೈಪೋಟಿಗೆ ಇಳಿಸುವ ಕ್ಷುದ್ರ ಹುನ್ನಾರ ಆಗಿತ್ತು. ಈ ವಿಭಜನಾ ತಂತ್ರಕ್ಕೆ ಶಿಕ್ಷೆಯಾಗಿ ಅಂದಿನ ಆಡಳಿತ ಪಕ್ಷ ಸೋತು, ಅಂದು ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರುಗಳೇ ತಪ್ಪೊಪ್ಪಿಗೆ ಮತ್ತು ಕ್ಷಮಾಪಣೆ ಕೇಳುವಂತಾಗಿತ್ತು. ಅದು ಈಗ ಇತಿಹಾಸ.

ಮತ್ತೆ ಈಗ ಚುನಾವಣಾ ಸಮಯಕ್ಕೆ ಸರಿಯಾಗಿ ಮುಖ್ಯಮಂತ್ರಿ ಬೊಮ್ಮಾಯಿಯವರು ಲಿಂಗಾಯತರನ್ನು ಮತ್ತೊಮ್ಮೆ ಕೇವಲವಾಗಿಸುವ, ಲಿಂಗಾಯತರನ್ನು ಮುಸ್ಲಿಮರ ಎಡೆಯನ್ನು ಕಸಿದು ತಿನ್ನುವ ಮಟ್ಟದ ಅವಿವೇಕಿಗಳು ಎಂಬ ಅರ್ಥ ಬರುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಒಕ್ಕಲಿಗರಾಗಲಿ, ಲಿಂಗಾಯತರಾಗಲಿ ಕೊಡುವ ಸಂಸ್ಕ್ರತಿಯ ಸಮುದಾಯಗಳು. ಇನ್ನೊಬ್ಬರ ಹಕ್ಕಿನ ಪಾಲನ್ನು ಕಸಿದುಕೊಳ್ಳುವ ಸಮುದಾಯಗಳಲ್ಲ. ಎಲ್ಲ ಲಿಂಗಾಯತ ಸಂಸ್ಥೆಗಳು ನಡೆಸುವ ಎಲ್ಲ ಶಿಕ್ಷಣ ಸಂಸ್ಥೆಗಳ ಒಟ್ಟಾರೆ ಸಂಸ್ಥೆಗಳು, ಅವುಗಳು ಮಾಡುವ ದಾಸೋಹದ ಒಟ್ಟಾರೆ ಸಾಮರ್ಥ್ಯ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಗೇ ಪೈಪೋಟಿ ಕೊಡುವಂತಿವೆ. ಅಂತಹುದ್ದರಲ್ಲಿ ಮುಸ್ಲಿಮರ ಮೀಸಲು ಹಕ್ಕನ್ನು ಕಸಿದು ಬದುಕುವ ಅಗತ್ಯವಾಗಲೀ, ಅಂತಹ ಸಂಸ್ಕಾರವಾಗಲಿ ಲಿಂಗಾಯತರಿಗೆ ಇಲ್ಲ. ಇದು ಲಿಂಗಾಯತರನ್ನು ಮುಸ್ಲಿಂ ವೈರಿಗಳಾಗಿಸುವ ಒಂದು ಖೂಳ ರಾಜಕೀಯ ತಂತ್ರ ಮಾತ್ರ.

ಈ ಹಿನ್ನೆಲೆಯಲ್ಲಿ ನೋಡಿದಾಗ ಅನಿಸುವುದು ಯಾವ ರಾಜಕಾರಣಿಗೂ ಯಾವ ರಾಜಕೀಯ ಪಕ್ಷಕ್ಕೂ ಲಿಂಗಾಯತರ ಘನತೆಯ ಬಗ್ಗೆ ಅಣ್ಣ ಬಸವಣ್ಣನ ನಿಸ್ಪ್ರಹ ಕಾಳಜಿಗಳ ಬಗ್ಗೆ ಯಾವ ಅರಿವೂ ಇಲ್ಲ. ಯಾವ ರಾಜಕಾರಣಿಯೂ ಯಾವ ಪಕ್ಷವೂ ಇಲ್ಲಿ ಬಸವಣ್ಣನ ಕಲ್ಯಾಣ ರಾಜ್ಯವನ್ನು ತರಲಾರದು. ಸದ್ಯಕ್ಕೆ ಉಳಿದಿರುವುದು ನ್ಯಾಯಾಂಗದ ಮೇಲೆ ಭರವಸೆ. ಬಸವ ಪರಂಪರೆಯನ್ನು ರಾಜಕೀಯ ಜೂಜಾಟದಿಂದ ಕಾಪಾಡಬಲ್ಲ ಶಕ್ತಿ ಇರುವುದು ನ್ಯಾಯಾಂಗದಲ್ಲಿ ಮಾತ್ರ.

  1. ಯಾವ ರಾಜಕಾರಣಿ, ಯಾವುದೇ ರಾಜಕೀಯ ಪಕ್ಷ ಹಾಗೂ ಸದರಿ ಪಕ್ಷಗಳೇ ನಡೆಸುವ ಸರ್ಕಾರಗಳು ಲಿಂಗಾಯತ ಮತ ಕೇಂದ್ರಿತ ರಾಜಕೀಯ ತೀರ್ಮಾನಗಳನ್ನು ಮಾತ್ರ ತೆಗೆದುಕೊಳ್ಳಲು ಮಾತ್ರ ಸಾಧ್ಯ. ಬಸವಣ್ಣನ ಧಾರ್ಮಿಕ ಪರಂಪರೆ ಉಳಿಯುವಂತ ತೀರ್ಮಾನಗಳನ್ನು ತೆಗೆದುಕೊಳ್ಳಲಾರರು. ಆದ್ದರಿಂದ ನ್ಯಾಯಾಂಗವೇ ಇದನ್ನು ಬಗೆಹರಿಸಬೇಕಾಗಿದೆ.
  2. ಹನ್ನೆರಡನೇ ಶತಮಾನದ ಬಸವ ಚಳುವಳಿಯಲ್ಲಿ ಬ್ರಾಹ್ಮಣರೂ ಇದ್ದರು. ಶೂದ್ರರೂ ಇದ್ದರು. ವೀರಶೈವ ಪರಂಪರೆಯವರೂ ಇದ್ದರು, ಲಿಂಗಾಯತ ಪರಂಪರೆಯವರೂ ಇದ್ದರು. ಮಹಿಳೆಯರೂ ಇದ್ದರು. ವ್ಯಾಪಾರಿಗಳೂ ಇದ್ದರು. ಚಿಂತಕರೂ ಇದ್ದರು. ಜನ ಸಾಮಾನ್ಯರೂ ಇದ್ದರು. ಆದರೆ ಎಲ್ಲರೂ ಎಲ್ಲ ಭೇದಗಳನ್ನು ಬಿಟ್ಟಿದ್ದರು. ಎಲ್ಲರೂ ಸಮನಾಗಿ ಎಲ್ಲ ಭೇದಗಳನ್ನು ತೊರೆಯುವುದೇ ಬಸವ ಪರಂಪರೆಯ ಮುಖ್ಯ ಲಕ್ಷಣ. ಹೀಗಾಗಿ ಇದು ಲಿಂಗಾಯತ ಧರ್ಮ ಅಥವಾ ವೀರಶೈವ ಧರ್ಮ ಮಾತ್ರ ಆಗಲು ಸಾಧ್ಯವಿಲ್ಲ.
  3. ಹಿಂದೂ ಮತ್ತು ಅಹಿಂದು ಎಂಬ ಬಗ್ಗೆ ಅಪಾರ ತಪ್ಪುಗ್ರಹಿಕೆಗಳಿವೆ. ಹಿಂದೂ ಎಂಬುದು ಧರ್ಮ ಎಂಬ ಯಾವ ದಾಖಲೆಗಳೂ ಇಲ್ಲ. ಅದೊಂದು ನಾಗರಿಕತೆ ಎಂಬ ಬಗ್ಗೆ ಯಾವ ತಕರಾರೂ ಇಲ್ಲದ ದಾಖಲೆಗಳಿವೆ. ಹಿಂದೂ ನಾಗರಿಕತೆಯಲ್ಲಿ ಸನಾತನ ಧರ್ಮ, ಬೌದ್ಧ, ಜೈನ, ಸಿಖ್ ಧರ್ಮಗಳು ಹುಟ್ಟಿವೆ. ಸನಾತನ ಧರ್ಮವೇ ಹಿಂದೂ ಧರ್ಮ ಎಂಬ ತಪ್ಪು ಗ್ರಹಿಕೆಯನ್ನು ಹರಡಲಾಗಿದೆ. ಆದ್ದರಿಂದ ಸನಾತನ ಅಲ್ಲದ್ದು ಹಿಂದೂ ಕೂಡ ಅಲ್ಲ ಎಂಬ ಹುಸಿ ವಿವಾದ ಹುಟ್ಟಿವೆ.
  4. ಏಸು ಕ್ರೈಸ್ತನ ಬೋಧನೆಗಳ ಆಧಾರದಲ್ಲಿ ಹುಟ್ಟಿದ್ದು ಕ್ರೈಸ್ತ ಧರ್ಮ. ಬುದ್ಧನ ಬೋಧನೆಯ ಆಧಾರಿತ ಧರ್ಮ ಬೌದ್ಧ ಧರ್ಮ. ಮಹಾವೀರ ಜೈನ ಬೋಧಿಸಿದ ಧರ್ಮ ಜೈನ ಧರ್ಮ. ಸಾಮಾನ್ಯವಾಗಿ ಆಯಾ ಧರ್ಮದ ಗುರುವಿನ ಹೆಸರು ಧರ್ಮದ ಹೆಸರಲ್ಲಿ ಇರುತ್ತದೆ. ಆದ್ದರಿಂದ ಬಸವಣ್ಣನ ಧರ್ಮವನ್ನು ಬಸವ ಧರ್ಮವೆಂದೇ ಕರೆಯಬೇಕಾಗುತ್ತದೆ.
  5. ಕ್ರೈಸ್ತರಲ್ಲಿ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಎಂಬ ಎರಡು ಪಂಥಗಳಿವೆ. ಬೌದ್ಧರಲ್ಲಿ ಮಹಾಯಾನ ಮತ್ತು ಹೀನಾಯಾನ ಪಂಥಗಳಿವೆ. ಹಾಗೆಯೇ ಜೈನರಲ್ಲಿ ಶ್ವೇತಾಂಬರ ಮತ್ತು ದಿಗಂಬರ ಎಂಬ ಎರಡು ಪಂಥಗಳಿವೆ. ಅಷ್ಟೇ ಅಲ್ಲ, ಮುಸ್ಲಿಂ ಧರ್ಮದಲ್ಲಿ ಕೂಡ ಶಿಯಾ ಮತ್ತು ಸುನ್ನಿ ಎಂಬ ಪಂಥಗಳಿವೆ. ಹಾಗೆಯೇ, ಬಸವ ಧರ್ಮ ಲಿಂಗಾಯತ ಮತ್ತು ವೀರಶೈವ ಎಂಬೆರಡು ಪ್ರಮುಖ ಪಂಥಗಳನ್ನು ಹೊಂದಿರಲು ಸಾಧ್ಯ. ಕೇವಲ ಲಿಂಗಾಯತವಾಗಲಿ, ವೀರಶೈವವಾಗಲಿ ಇಡೀ ಧರ್ಮ ಎಂದು ಹೇಳಲು ಸಾಧ್ಯವಾಗದು.
  6. ಹಿಂದೂ ನಾಗರಿಕತೆಯ ಹೊಸ ಧರ್ಮವಾಗಿ ಬಸವ ಧರ್ಮವನ್ನು, ಲಿಂಗಾಯತ ಮತ್ತು ವೀರಶೈವ ಪಂಥಗಳನ್ನು ಒಳಗೊಂಡಂತೆ, ಘೋಷಿಸಬಹುದೇ ಎಂಬ ಕುರಿತು ಮಾನ್ಯ ಉಚ್ಚ ನ್ಯಾಯಾಲಯ ತನ್ನ ಸುಪರ್ದಿನಲ್ಲಿಯೇ ಒಂದು ತಜ್ಞ ಸಮಿತಿಯನ್ನು ರಚಿಸಿ, ಸೂಕ್ತ ನಿರ್ಧಾರ ತಗೆದುಕೊಳ್ಳಬೇಕು. ಹಾಗೆಯೇ ಜನಗಣತಿಯ ಎಲ್ಲ ದಾಖಲೆಗಳಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸದಂತೆ ಕ್ರಮ ತೆಗೆದುಕೊಳ್ಳಬಹುದೇ. ಸನಾತನ ಧರ್ಮದ ಅನುಯಾಯಿಗಳು ಸನಾತನ ಧರ್ಮವೆಂದೇ ನಮೂದಿಸಿಕೊಳ್ಳುವ ಅವಕಾಶ ಕೊಟ್ಟು, ಹಿಂದೂ ಎಂಬುದು ಧರ್ಮ ಸೂಚಕ ಪದವಾಗಿ ಬಳಸದಂತೆ ಕ್ರಮ ತೆಗೆದುಕೊಳ್ಳಬಹುದೇ ಎಂಬುದನ್ನೂ ಕೂಡ ತಜ್ಞ ಸಮಿತಿ ಹೇಳಲಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶ | ದೇಶದ ಹಿರಿಯ ಎಸ್‌ಪಿ ಸಂಸದ ಶಫೀಕುರ್ ರೆಹಮಾನ್ ಬರ್ಕ್ ನಿಧನ

ದೇಶದ ಹಿರಿಯ ಸಂಸದರಾಗಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫೀಕುರ್...

ಬಾಬಾ ರಾಮ್‌ದೇವ್‌ ಮಾಲೀಕತ್ವದ ಪತಂಜಲಿಯ ಜಾಹೀರಾತಿಗೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ? ಸುಪ್ರೀಂ ಕೋರ್ಟ್‌ ಗರಂ ಸುಪ್ರೀಂ...

ಮಧ್ಯ ಪ್ರದೇಶ | ಕೆಲಸ ಕಳೆದುಕೊಳ್ಳುವ ಭಯ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ...

ಮಾಲೆಗಾಂವ್‌ ಪ್ರಕರಣ | ವಿಚಾರಣೆಗೆ ಬಾರದಿದ್ದರೆ ಕ್ರಮ; ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್‌ಗೆ ಕೋರ್ಟ್‌ ಎಚ್ಚರಿಕೆ

"ಒಂದೋ ವಿಚಾರಣೆಗೆ ಹಾಜರಾಗಿ, ಇಲ್ಲವೇ ಸೂಕ್ತ ಕ್ರಮ ಎದುರಿಸಲು ಸಿದ್ಧರಾಗಿ"...ಹೀಗಂತ ಹೇಳಿದ್ದು...