ಎಷ್ಟು ಗಂಟೆಯೊಳಗಡೆ ಅನರ್ಹತೆ ಹಿಂಪಡೆಯಲಿದ್ದಾರೆ ಎಂದು ಕಾದು ನೋಡಬೇಕಿದೆ : ಮಲ್ಲಿಕಾರ್ಜುನ ಖರ್ಗೆ

Date:

  • ‘ದೂರದ ಗುಜರಾತ್‌ನಿಂದ ಆದೇಶ ಬಂದಾಗ ಕೇವಲ 24 ಗಂಟೆಯಲ್ಲಿ ಎಲ್ಲವೂ ಮುಗಿದಿತ್ತು’ ಎಂದ ಎಐಸಿಸಿ ಅಧ್ಯಕ್ಷ
  • ನನ್ನ ಕೆಲಸ ಏನು ಎಂಬುದರ ಬಗ್ಗೆ ನನ್ನಲ್ಲಿ ಸ್ಪಷ್ಟತೆ ಇದೆ : ರಾಹುಲ್ ಗಾಂಧಿ

‘ಗುಜರಾತ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದ್ದ ಕೇವಲ 24 ಗಂಟೆಯೊಳಗೆ ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ಅನರ್ಹತೆಗೊಳಿಸಲಾಗಿತ್ತು. ಈಗ ಸುಪ್ರೀಂ ಆದೇಶದ ಬಳಿಕ ಎಷ್ಟು ಗಂಟೆಯೊಳಗಡೆ ಅನರ್ಹತೆ ಹಿಂಪಡೆಯಲಿದ್ದಾರೆ’ ಎಂದು ಕಾದು ನೋಡಬೇಕಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾರ್ಮಿಕವಾಗಿ ಹೇಳಿದರು.

ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿಯವರಿಗೆ ಗುಜರಾತ್ ಹೈಕೋರ್ಟ್‌ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶದಲ್ಲಿ ತಡೆ ನೀಡಿದ ಬಳಿಕ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್ ಮುಖಂಡರೊಂದಿಗೆ ಸುದ್ದಿಗೋಷ್ಠಿ ವೇಳೆ ಅವರು ಮಾತನಾಡಿದರು.

‘ಗುಜರಾತ್ ದೆಹಲಿಯಿಂದ ಸುಮಾರು 500-600 ಕಿಮೀ ದೂರದಲ್ಲಿದೆ. ಅಲ್ಲಿಯ ಆದೇಶ ಬಂದ ಬಳಿಕ, ಕೇವಲ 24 ಗಂಟೆಯೊಳಗೆ ಅನರ್ಹತೆ, ಲೋಕಸಭೆಯಿಂದ ಹೊರಹಾಕುವುದು ಎಲ್ಲವೂ ನಡೆಯಿತು. ಈಗ ಸುಪ್ರೀಂ ಕೋರ್ಟು ಮತ್ತು ನಮ್ಮ ಲೋಕಸಭೆಗೆ ಕೆಲವೇ ಕಿ ಮೀ ಅಂತರವಿದೆ. ಹಾಗಾಗಿ, ಎಷ್ಟು ಗಂಟೆಯೊಳಗಡೆ ಅನರ್ಹತೆ ಹಿಂಪಡೆಯಲಿದ್ದಾರೆ ಎಂದು ಕಾದು ನೋಡಬೇಕಿದೆ. ಇಷ್ಟರವರೆಗೆ ಕಾದು ನೋಡಿದ ನಮಗೆ, ಇದು ಕೂಡ ಏನೂ ದೊಡ್ಡದಲ್ಲ. ಇವತ್ತು ರಾತ್ರಿಯೇ ಅನರ್ಹತೆ ಹಿಂಪಡೆಯಲಿ ಎಂಬುದು ನಮ್ಮ ಬಯಕೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ಇಂದು ಬಹಳ ಸಂತೋಷದ ದಿನ. ಪ್ರಜಾಪ್ರಭುತ್ವ ಗೆದ್ದಿದೆ, ಸಂವಿಧಾನ ಗೆದ್ದಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 4 ಸಾವಿರ ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದರು. ಈ ಜಯ ಎಲ್ಲ ಜನರ ಪ್ರಾರ್ಥನೆಯ ಫಲ. ಆದರೆ ಈ ಆದೇಶ ಬಂದ ಬಳಿಕ ಬಿಜೆಪಿಯವರಿಗೆ ನಿರಾಶೆಯಾಗಿರಬಹುದು’ ಎಂದು ಖರ್ಗೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿದ್ದ ರಾಹುಲ್ ಗಾಂಧಿ ಹೆಚ್ಚು ಮಾತನಾಡದೆ, ‘ಇಂದಲ್ಲ ನಾಳೆ, ಅಥವಾ ನಾಡಿದ್ದು ಜಯ ಸಿಕ್ಕೇ ಸಿಗುತ್ತದೆ. ನನ್ನ ದಾರಿ ಯಾವುದು, ನನ್ನ ಕೆಲಸ ಏನು ಎಂಬುದರ ಬಗ್ಗೆ ನನ್ನಲ್ಲಿ ಸ್ಪಷ್ಟತೆ ಇದೆ. ತುಂಬಾ ಮಂದಿ ಸಹಾಯ ಮಾಡಿದ್ದಾರೆ. ಜನರು ಪ್ರೀತಿ, ಸಹಕಾರ ತೋರಿದ್ದಾರೆ. ಅವರ ಪ್ರೀತಿಗೆ ಧನ್ಯವಾದ ಸಲ್ಲಿಸುತ್ತೇನೆ. ‘ ಎಂದಷ್ಟೇ ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯ ಪ್ರದೇಶ | ಕೆಲಸ ಕಳೆದುಕೊಳ್ಳುವ ಭಯ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ...

ಮಾಲೆಗಾಂವ್‌ ಪ್ರಕರಣ | ವಿಚಾರಣೆಗೆ ಬಾರದಿದ್ದರೆ ಕ್ರಮ; ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್‌ಗೆ ಕೋರ್ಟ್‌ ಎಚ್ಚರಿಕೆ

"ಒಂದೋ ವಿಚಾರಣೆಗೆ ಹಾಜರಾಗಿ, ಇಲ್ಲವೇ ಸೂಕ್ತ ಕ್ರಮ ಎದುರಿಸಲು ಸಿದ್ಧರಾಗಿ"...ಹೀಗಂತ ಹೇಳಿದ್ದು...

ಬದುಕಿನ ಹಾಡು ಮುಗಿಸಿದ ದೇಶದ ಖ್ಯಾತ ಗಝಲ್ ಗಾಯಕ ಪಂಕಜ್ ಉಧಾಸ್

ದೇಶದ ಹಿರಿಯ ಗಝಲ್ ಗಾಯಕ, ಪದ್ಮಶ್ರೀ ಪಂಕಜ್ ಉಧಾಸ್ ಅವರು ನಿಧನರಾಗಿದ್ದಾರೆ."ದೀರ್ಘಕಾಲದ...

ಹೊಸದಾಗಿ GTDC ಗಳ ಸ್ಥಾಪನೆ: ಸಿ ಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಹೊಸ ಹೊಸ ಉದ್ಯೋಗ ಸೃಷ್ಟಿ ಮತ್ತು ತರಬೇತಿಗಾಗಿ ಈಗಿರುವ GTDC ಗಳ...