ಕುಸ್ತಿ ಸಂಘದ ವಿಷಯದಲ್ಲಿ ಪ್ರಧಾನಮಂತ್ರಿಗಳ ಅನಿವಾರ್ಯತೆ, ಅಸಹಾಯಕತೆ ಏನಿದೆ?

Date:

ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಇದು ಮೊದಲ ಆರೋಪವೇನೂ ಅಲ್ಲ. ಆರು ಬಾರಿ ಲೋಕಸಭೆಯ ಸದಸ್ಯನಾಗಿರುವ ಬೃಜ್‍ಭೂಷಣ್‍ನ ಚುನಾವಣಾ ಅಫಿಡವಿಟ್ ಆತನ ಅಪರಾಧದ ದಾಖಲೆಯ ಕಥೆ ಬಿಚ್ಚಿಡುತ್ತದೆ

ಮೊದಲು ರೈತರು ಕೇಳುತ್ತಿದ್ದ ಪ್ರಶ್ನೆಯನ್ನು ಈಗ ಕುಸ್ತಿಪಟುಗಳು ಕೇಳುತ್ತಿದ್ದಾರೆ: ಪ್ರಧಾನಿಗಳು ಸುಮ್ಮಿನಿರುವುದಾದರೂ ಯಾತಕ್ಕೆ? ಅಪರಾಧದ ದಾಖಲೆ ಹೊಂದಿರುವ ಮತ್ತು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನಾಯಕರ ವಿರುದ್ಧ ಕ್ರಮ ಏಕೆ ಕೈಗೊಳ್ಳುವುದಿಲ್ಲ? ಅಷ್ಟಕ್ಕೂ ಪ್ರಧಾನಮಂತ್ರಿಯವರ ಅನಿವಾರ್ಯತೆ, ಅಸಹಾಯಕತೆ ಏನಿದೆ?

ಮಹಿಳಾ ಕುಸ್ತಿಪಟುಗಳು ಹೊರಿಸಿದ ಆರೋಪಗಳು ಸಾಮಾನ್ಯ ಆರೋಪಗಳಲ್ಲ. ಯಾವುದೇ ಸಂವೇದನಶೀಲ ವ್ಯಕ್ತಿ ಹೃದಯ ಕಂಪಿಸಬೇಕು, ಯಾವುದೇ ದೇಶಭಕ್ತನ ತಲೆಬಾಗಬೇಕು, ಅಂತಹ ಆರೋಪಗಳಿವೆ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಇಂದಿನಿಂದಲ್ಲ, ಸುಮಾರು 10 ವರ್ಷಗಳಿಂದ ನಡೆಯುತ್ತಿದೆ. ಕೇವಲ ಒಬ್ಬ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವಿಲ್ಲ, ಕುಸ್ತಿ ಫೆಡರೇಷನ್‍ನ ಅನೇಕ ಕೋಚ್‍ಗಳೂ ಶಾಮೀಲಾಗಿದ್ದಾರೆ ಎಂದು ಆರೋಪಗಳಿವೆ. ಈ ದೌರ್ಜನ್ಯದ ಬಲಿಪಶು ಆಗಿದವರಲ್ಲಿ ಅಪ್ರಾಪ್ತ ಬಾಲಕಿಯರೂ ಇದ್ದಾರೆ ಎಂದು ಆರೋಪವಿದೆ. ಈ ಆರೋಪ ಹೊರಿಸಿದವರು ಕೇವಲ ಒಬ್ಬ ಮಹಿಳೆ ಅಲ್ಲ, ಅನೇಕ ಮಹಿಳೆಯರು ಈ ಆರೋಪ ಮಾಡಿದ್ದಾರೆ. ಆರೋಪದ ಗಂಭೀರತೆಯನ್ನು ಖುದ್ದು ಸುಪ್ರೀಂ ಕೋರ್ಟ್ ಸ್ವೀಕರಿಸಿದೆ. ಬೃಜ್ ಭೂಷಣ್ ಶರಣ್ ಸಿಂಗ್ ಬಗ್ಗೆ ಎರಡು ವರ್ಷಗಳ ಹಿಂದೆಯೇ ನೇರವಾಗಿ ಪ್ರಧಾನಮಂತ್ರಿಗೆ ಸಾಕ್ಷಿ ಮಲಿಕ್ ದೂರನ್ನು ನೀಡಿದ್ದರು ಎಂಬ ಆರೋಪವೂ ಇದೆ.

ಧರಣಿನಿರತ ಕುಸ್ತಿಪಟುಗಳು

ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಇದು ಮೊದಲ ಆರೋಪವೇನೂ ಅಲ್ಲ. ಆರು ಬಾರಿ ಲೋಕಸಭೆಯ ಸದಸ್ಯನಾಗಿರುವ ಬೃಜ್‍ಭೂಷಣ್‍ನ ಚುನಾವಣಾ ಅಫಿಡವಿಟ್ ಆತನ ಅಪರಾಧದ ದಾಖಲೆಯ ಕಥೆ ಬಿಚ್ಚಿಡುತ್ತದೆ. ಕಳೆದ ಲೋಕಸಭೆ ಚುನಾವಣೆಗಳಲ್ಲಿ ಅವನ ಅಫಿಡವಿಟ್‍ನಲ್ಲಿ ಸೆಕ್ಷನ್ 307 (ಕೊಲೆ ಯತ್ನ) ಸೇರಿದಂತೆ ನಾಲ್ಕು ಅಪರಾಧದ ವಿಷಯಗಳ ಉಲ್ಲೇಖವಿದೆ. ಇನ್ನೊಂದು ಕೊಲೆಯ ಒಂದು ಪ್ರಕರಣದಲ್ಲಿ ಆತನನ್ನು ಸಾಕ್ಷ್ಯದ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಸಂಸದ ಮಹಾಶಯರು ಖುದ್ದು ತಮ್ಮ ಅಪರಾಧಗಳನ್ನು ಸ್ವೀಕರಿಸುತ್ತಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಳೆದ ವರ್ಷ ಲಲ್ಲನ್‍ಟಾಪ್‍ಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಅವನು ಖುದ್ದಾಗಿ ಹೇಳಿದ್ದು: ‘ನನ್ನ ಜೀವನದಲ್ಲಿ ನನ್ನ ಕೈಯಿಂದ ಒಂದು ಕೊಲೆಯಾಗಿದೆ, ಜನರು ಏನೇ ಹೇಳಲಿ, ನಾನು ಒಂದು ಕೊಲೆ ಮಾಡಿದ್ದೇನೆ.’ ಆದರೆ ಆ ಕೊಲೆಯ ಪ್ರಕರಣದಲ್ಲಿ ಈತನ ಮೇಲೆ ಪ್ರಕರಣವೇ ನಡೆದಿಲ್ಲ, ಇದರ ಯಾವ ದಾಖಲೆಯೂ ಇಲ್ಲ. 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೋಂಡಾದಿಂದ ಅವನ ಸ್ಥಾನದಲ್ಲಿ ಘನಶ್ಯಾಮ್ ಶುಕ್ಲರನ್ನು ಅಭ್ಯರ್ಥಿಯನ್ನಾಗಿ ಮಾಡಿದಾಗ ಮತದಾನದ ದಿನದಂದು ಒಂದು ದುರ್ಘಟನೆಯಲ್ಲಿ ಶುಕ್ಲ ಅವರು ನಿಧನರಾದರು. ಈ ಸಾವಿನ ಹಿಂದೆ ಬೃಜ್ ಭೂಷಣ್‍ನ ಕೈವಾಡ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದು ಬೇರೆ ಯಾರೂ ಅಲ್ಲ, ಖುದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಈ ವಿಷಯವನ್ನು ಬಹಿರಂಗಪಡಿಸಿದ್ದು ಬೇರೆ ಯಾರೂ ಅಲ್ಲ ಖುದ್ದು ಬೃಜ್‍ಭೂಷಣ್ ‘ದಿ ಸ್ಕ್ರಾಲ್’ಗೆ ನೀಡಿದ ಒಂದು ಸಂದರ್ಶನದಲ್ಲಿ ಹೇಳಿದ್ದು.

ಪ್ರಶ್ನೆ ಏನೆಂದರೆ, ಇಂತಹ ವ್ಯಕ್ತಿಗೆ ಪ್ರಧಾನಮಂತ್ರಿಗಳ ರಕ್ಷಣೆ ಹೇಗೆ ಪ್ರಾಪ್ತಿಯಾಯಿತು? ಪ್ರಶ್ನೆಯ ಆಳಕ್ಕೆ ಹೋದರೆ, ನಿಮಗೆ ಸಿಗುವುದೇನೆಂದರೆ, ಬ್ರಜ್‍ಭೂಷಣ್ ಒಂದು ಅಪವಾದವಲ್ಲ ಎಂಬ ಕಟುವಾಸ್ತವ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪಗಳಿರುವ ಬಿಜೆಪಿಯ ನಾಯಕರ ಒಂದು ದೀರ್ಘ ಪಟ್ಟಿಯನ್ನೇ ಮಾಡಬಹುದು, ಆದರೆ ಬಿಜೆಪಿ ಅಥವಾ ಪ್ರಧಾನಮಂತ್ರಿ ಮೂಲಕ ಯಾವುದೇ ಗಂಭೀರ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದೂ ಸತ್ಯ.

ಈ ಪಟ್ಟಿಯಲ್ಲಿ ಕುಲದೀಪ್ ಸಿಂಗ್‌ ಸೆಂಗಾರ್‌ ಚಿನ್ಮಯಾನಂದ ಸ್ವಾಮಿ ಸಾಕ್ಷಿ ಮಹಾರಾಜ್, ಎಂ ಜೆ ಅಕ್ಬರ್, ಉಮೇಶ್ ಅಗ್ರವಾಲ್, ಬರ್ನಾರ್ಡ್ ಮರಾಕ್ ಹಾಗೂ ಸಂದೀಪ್ ಸಿಂಗ್ ಅವರುಗಳ ಹೆಸರು ಇರಬಹುದು. ಅತ್ತ ತಥಾಕಥಿತ ಬಾಬಾ ರಾಮ ರಹೀಮ್ ಮತ್ತು ಆಸಾರಾಮ್ ನಂತವರು ಬಿಜೆಪಿಗೆ ನಿಕಟವಾಗಿದ್ದರು ಎಂಬ ಕಟುಸತ್ಯ ಎಲ್ಲರಿಗೂ ತಿಳಿದಿದ್ದೇ ಇದೆ.

ನೆನಪಿಸಿಕೊಂಡರೆ, ನಮ್ಮ ಪ್ರಧಾನಮಂತ್ರಿಯ ಅವಧಿಯಲ್ಲಿ ಹಾಥರಸ್, ಕಠುವಾ ಅಥವಾ ಬಿಲ್ಕಿಸ್ ಬಾನೋರಂತಹ ಮಹಿಳೆಯರ ವಿರುದ್ಧ ಬಲಾತ್ಕಾರ ಅಥವಾ ಶೋಷಣೆಯ ಪ್ರಮುಖ ಘಟನೆಗಳ ಬಗ್ಗೆಯೂ ಪ್ರಧಾನಮಂತ್ರಿಗಳು ವಿಚಿತ್ರವಾದ ಮೌನವಹಿಸಿದ್ದಾರೆ.

ಈ ಪ್ರಶ್ನೆ ಹೊಸದಲ್ಲ. ಕೇಂದ್ರೀಯ ಗೃಹ ರಾಜ್ಯ ಸಚಿವ ಅಜಯ್ ಮಿಶ್ರ ಟೇನಿಯ ಬಗ್ಗೆಯೂ ರೈತರೂ ಇದೇ ಪ್ರಶ್ನೆಯನ್ನು ಕೇಳಿದ್ದರು. ಹಾಡುಹಗಲೇ ರೈತರ ಕೊಲೆಯ ಆರೋಪಿಯ ತಂದೆ ಹಾಗೂ ಆ ಹತ್ಯಾಕಾಂಡದ ಪಿತೂರಿಯ ಪ್ರಮುಖ ಆರೋಪಿ ಅಜಯ್ ಮಿಶ್ರ ಟೇನಿ ಇಂದಿಗೂ ಮಂತ್ರಿಂಡಳದಲ್ಲಿ ಏಕೆ ಇದ್ದಾರೆ? ಇಂದು ಅದೇ ಪ್ರಶ್ನೆ ಬೃಜ್‍ಭೂಷಣ್ ಸಿಂಗ್ ಬಗ್ಗೆ ಎತ್ತಲಾಗಿದೆ. ಬೇಟಿ ಬಚಾವೊ ಎಂಬ ಘೋಷಣೆ ನೀಡಿದ ಪ್ರಧಾನಮಂತ್ರಿ ಅಪ್ರಾಪ್ತ ಬಾಲಕಿಯ ಮೇಲ ಆದ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಮೇಲೂ ಬೃಜ್ ಭೂಷಣ್‍ಗೆ ಅಭಯಹಸ್ತ ಏಕೆ ನೀಡಲಾಗಿದೆ? ಈ ಆಟಗಾರರನ್ನು ಭಾರತದ ಹೆಮ್ಮೆ ಎನ್ನುವ ಮೋದಿಜಿ ಬೃಜ್‍ಭೂಷಣ್ ಶರಣ್ ಸಿಂಗ್‍ನನ್ನು ಕುಸ್ತಿ ಸಂಘದ ಅಧ್ಯಕ್ಷದ ಪದದಿಂದ ತೆಗೆದುಹಾಕುವ ಸಾಮಾನ್ಯ ಕ್ರಮ ಕೈಗೊಳ್ಳಲು ಹಿಂಜರಿಕೆ ಏಕೆ? ಈ ವರ್ಷ ಜನವರಿಯಲ್ಲಿ ಈ ಹಗರಣ ಸಾರ್ವಜನಿಕ ಆದ ಮೇಲೂ ಹಾಗೂ ಆಟಗಾರರಿಗೆ ಸೂಕ್ತ ಕ್ರಮ ಆಶ್ವಾಸನೆ ನೀಡಿದ ಮೇಲೂ ಯಾವುದೇ ಕ್ರಮ ಯಾಕೆ ಕೈಗೊಳ್ಳಲಾಗಲಿಲ್ಲ?

ಇದನ್ನು ಓದಿ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ವಿರುದ್ಧ ಅರೆಸ್ಟ್‌ ವಾರಂಟ್‌

ಈ ಪ್ರಶ್ನೆಗೆ ಎರಡು ಉತ್ತರಗಳು ಸಾಧ್ಯ. ಒಂದೋ ರಾಜಕೀಯ ಅನಿವಾರ್ಯತೆಯ ವಿಷಯವಿದೆ ಅಥವಾ ನೈತಿಕ ದೌರ್ಬಲ್ಯದ ವಿಷಯ. ಲೈಂಗಿಕ ದೌರ್ಜನ್ಯದ ಈ ಎಲ್ಲ ಆರೋಪಿಗಳು ತಮ್ಮ ತಮ್ಮ ಪ್ರದೇಶದ ಪ್ರಬಲ ನಾಯಕರಾಗಿದ್ದಾರೆ ಹಾಗೂ ಕೆಲವು ಜಾತಿಗಳ ಮತಗಳ ಗುತ್ತಿಗೆದಾರರಾಗಿದ್ದಾರೆ. ಈ ನಾಯಕರ ವಿರುದ್ಧ ಕೈಮ ಕೈಗೊಳ್ಳುವ ಅರ್ಥ, ಬಿಜೆಪಿಯ ವೋಟ್ ಬ್ಯಾಂಕ್‍ನಲ್ಲಿ ಕಳೆದುಕೊಳ್ಳುವ ಅಪಾಯವಿದೆ. ಒಂದು ವೇಳೆ ಇದೇ ಕಾರಣವಾಗಿದ್ದರೆ, ಇನ್ನೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ: ದೇಶದ ‘ಎಲ್ಲಕ್ಕಿಂತ ಜನಪ್ರಿಯ ಮತ್ತು ಪ್ರಬಲ’ ನಾಯಕ ಕೆಲವು ಸ್ಥಳೀಯ ಪ್ರಭಾವಶಾಲಿ ನಾಯಕರ ಎದುರಿಗೆ ಇಷ್ಟೊಂದು ದೈನೇಸಿಯಾಗಿದ್ದಾರೆಯೇ? ಅಷ್ಟಕ್ಕೂ ಬೃಜ್ ಭೂಷಣ್ ತಾನು ಬಾಯಿ ಬಿಚ್ಚಿದರೆ ಸುನಾಮಿ ಬಂದುಬಿಡುತ್ತೆ ಎಂದು ಯಾವ ಆಧಾರದ ಮೇಲೆ ಬೆದರಿಕೆ ಹಾಕುತ್ತಾನೆ? ಅನೇಕ ದೊಡ್ಡ ದೊಡ್ಡ ನಾಯಕರನ್ನು ಅಂಚಿಗೆ ತಳ್ಳಿದ ನರೇಂದ್ರ ಮೋದಿ, ಈ ಪುಟಗೋಸಿ ನಾಯಕನ ಎದುರಿಗೆ ಯಾಕೆ ಅಸಹಾಯಕರಾಗಿದ್ದಾರೆ? ಹಾಗೂ ಒಂದು ವೇಳೆ ಅಸಹಾಯಕರಾಗಿದ್ದಲ್ಲಿ, ಯಾವ ಬಾಯಿಂದ ರಾಷ್ಟ್ರದ ಹೆಮ್ಮೆ ಮತ್ತು ಬೇಟಿ ಬಚಾವೊ ಮಾತುಗಳನ್ನಾಡುತ್ತಾರೆ?

ಇದನ್ನು ಓದಿ ಭಾನುವಾರ ಬೆಂಗಳೂರಲ್ಲಿ ದಿಗ್ಗಜರ ರೋಡ್ ಶೋ: ರಾಹುಲ್ – ಮೋದಿ ಮುಖಾಮುಖಿ

ಅಥವಾ ಮಹಿಳೆಯರ ವಿರುದ್ಧ ಆಗುವ ಈ ಅಪರಾಧಗಳನ್ನು ಪ್ರಧಾನಮಂತ್ರಿ ಹಗುರವಾಗಿ ಪರಿಗಣಿಸುತ್ತಾರೆಯೇ? ಅಥವಾ ಪ್ರಧಾನಮಂತ್ರಿಯೂ, ಹೆಚ್ಚಿನ ಮಹಿಳೆಯರೊಂದಿಗೆ ಆಗುವ ಕಿರುಕುಳವನ್ನು ನೋಡಿ ನಕ್ಕು ತಮಾಷೆ ಮಾಡುವ, ಕೌಟುಂಬಿಕ ಹಿಂಸೆಯ ವಾಸ್ತವವನ್ನು ನಿರಾಕರಿಸುವ ಮತ್ತು ಬಲಾತ್ಕಾರದಂತಹ ಘೋರ ಅಪರಾಧಗಳ ಬಗ್ಗೆ ‘ಇವೆಲ್ಲ ಮಾಮೂಲಿ’ ಎಂಬ ನಿಲುವನ್ನು ತೆಗೆದುಕೊಳ್ಳುವ ಪುರುಷರ ಮಾನಸಿಕತೆಯ ಬಲಿಪಶುಗಳಾಗಿದ್ದಾರೆಯೇ? ಪ್ರಧಾನಮಂತ್ರಿಗಳ ಮನಸ್ಸಿನಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ ಹಾಗೂ ಇದು ಸತ್ಯ ಅಲ್ಲ ಎಂದೇ ನಾವು ಆಶಿಸಬೇಕಿದೆ. ಆದರೆ, ಸಾಕ್ಷಿ ಮಲ್ಲಿಕ್‌ರ ಕಣ್ಣೀರು, ಬೃಜ್ ಭೂಷಣ್‍ನ ಠೀವಿ ಮತ್ತು ಪ್ರಧಾನಮಂತ್ರಿಯ ಮೌನವನ್ನು ನೋಡುವ ಕೋಟ್ಯಾಂತರ ಮಹಿಳೆಯರಿಗೆ ಹೀಗೇ ಅನ್ನಿಸಬಹುದಲ್ಲವೇ? ಎಲ್ಲಿಯವರೆಗೆ ಪ್ರಧಾನಮಂತ್ರಿ ತಮ್ಮ ಬಾಯಿ ಬಿಚ್ಚುವುದಿಲ್ಲವೋ, ಅಲ್ಲಿಯವರೆಗೆ ಈ ಪ್ರಶ್ನೆ ಎಲ್ಲರ ಕಣ್ಣುಮುಂದೆಯೇ ಇರಲಿದೆ.

ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್
+ posts

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...