ಧಾರವಾಡ | ಅವಳಿ ನಗರಗಳಲ್ಲಿ ಅನಧಿಕೃತ ಬ್ಯಾನರ್‌ ತೆರವು ಅಭಿಯಾನ

Date:

ಗೋಡೆಗಳು, ಕಾಂಪೌಂಡ್‌ಗಳು ಮತ್ತು ಇತರ ಪ್ರಮುಖ ಸ್ಥಳಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿರುವ ಅಕ್ರಮ ರಾಜಕೀಯ ಪೋಸ್ಟರ್‌ಗಳನ್ನು ತೆಗೆದುಹಾಕುವ ಅಭಿಯಾನವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಚುರುಕುಗೊಳಿಸಿದೆ. ಜಿಲ್ಲಾ ಚುನಾವಣಾ ಅಧಿಕಾರಿಯ ನಿರ್ದೇಶನದ ಮೇರೆಗೆ ಅವಳಿ ನಗರದ ಎಲ್ಲ ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷದ ನಾಯಕರು ಅನುಮತಿಯಿಲ್ಲದೆ ಬ್ಯಾನರ್‌ಗಳನ್ನು ಹಾಕುತ್ತಿದ್ದಾರೆ. ಎಚ್‌ಡಿಎಂಸಿ ಎಲ್ಲ 12 ವಲಯ ಸಹಾಯಕ ಆಯುಕ್ತರಿಗೆ ಆಯಾ ವಲಯಗಳಲ್ಲಿ ಇಂತಹ ಅಕ್ರಮ ಫ್ಲೆಕ್ಸ್‌ಗಳನ್ನು ನಿಗ್ರಹಿಸಲು ನಿರ್ದೇಶನ ನೀಡಿದೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ, ಎಲ್ಲ ಪಕ್ಷದ ನಾಯಕರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲು ನಗರಗಳಿಗೆ ಬರುತ್ತಿರುವುದರಿಂದ ಫ್ಲೆಕ್ಸ್‌ಗಳು ಹೆಚ್ಚುತ್ತಿವೆ. ಅಲ್ಲದೆ ಟಿಕೆಟ್ ಆಕಾಂಕ್ಷಿಗಳು ತಮಗೆ ಬೇಕಾದ ಕಡೆ ಫ್ಲೆಕ್ಸ್‌ಗಳನ್ನು ಹಾಕುತ್ತಿದ್ದಾರೆ. ಹೀಗಾಗಿ, ರಾಜಕೀಯ ನಾಯಕರ ಚಿತ್ರವಿರುವ ಬಂಟಿಂಗ್ಸ್, ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ಸಂಖ್ಯೆ ನಗರದಾದ್ಯಂತ ಹೆಚ್ಚುತ್ತಿವೆ.

ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 700 ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ 600 ಬ್ಯಾನರ್‌ಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.

“ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರ ನಿರ್ದೇಶನದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅನಧಿಕೃತ ಬ್ಯಾನರ್, ಫ್ಲೆಕ್ಸ್ ಇತ್ಯಾದಿಗಳನ್ನು ತೆರವುಗೊಳಿಸಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ಅಭಿಯಾನವನ್ನು ಆರಂಭಿಸಲಾಗಿದೆ” ಎಂದು ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ತಿಳಿಸಿದ್ದಾರೆ.

“ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅನಧಿಕೃತ ಬ್ಯಾನರ್‌ಗಳು, ಬಂಟಿಂಗ್‌ಗಳು, ಫ್ಲೆಕ್ಸ್‌ಗಳು, ಗೋಡೆಚಿತ್ರಕಲೆ ಮತ್ತು ಪೋಸ್ಟರ್‌ಗಳನ್ನು 24 ಗಂಟೆಗಳಲ್ಲಿ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ” ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಉಪ ಆಯುಕ್ತ (ಕಂದಾಯ) ಆನಂದ್ ಕಲ್ಲೋಳಿಕರ್ ಹೇಳಿದ್ದಾರೆ.

ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಎಚ್‌ಡಿಎಂಸಿ ಮಾರ್ಚ್ 16ರಂದು ಅಭಿಯಾನವನ್ನು ಆರಂಭಿಸಿದ್ದು, ಈವರೆಗೆ ಅವಳಿ ನಗರಗಳಲ್ಲಿ 3,000 ಕ್ಕೂ ಹೆಚ್ಚು ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಮತ್ತು ಇತರ ಪ್ರದರ್ಶನಗಳನ್ನು ತೆರವುಗೊಳಿಸಿದ್ದೇವೆ. ಬ್ಯಾನರ್‌ಗಳನ್ನು ಹಾಕಬೇಕಾದರೆ  ಜನರು ಅನುಮತಿ ಪಡೆಯುವಂತೆ ಸಮಿತಿಯನ್ನು ರಚಿಸಲಾಗಿದೆ” ಎಂದು ಹೇಳಿದರು.  

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ಮಕ್ಕಳ ಸುರಕ್ಷತೆ, ಭದ್ರತೆ ಬಗ್ಗೆ ಸರ್ಕಾರ ಖಾತರಿ ನೀಡಲಿ: ಕುಮಾರಸ್ವಾಮಿ ಆಗ್ರಹ

ಶಾಲೆಗಳಿಗೆ ಅನಾಮಧೇಯ ವ್ಯಕ್ತಿಗಳು ಬಾಂಬ್ ಬೆದರಿಕೆ ಒಡ್ಡಿರುವುದು ಕಳವಳಕಾರಿ. ಮಕ್ಕಳು, ಪೋಷಕರು...

ಯುವ ವಕೀಲನ ಮೇಲೆ ಪೊಲೀಸ್ ದೌರ್ಜನ್ಯ | ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್‌

ಚಿಕ್ಕಮಗಳೂರಿನಲ್ಲಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಯುವ ವಕೀಲನೋರ್ವನನ್ನು ಠಾಣೆಯಲ್ಲಿ...

ಆಲಮೇಲ | ಸಾಮಾನ್ಯರಿಗೆ ಅರ್ಥವಾಗುವ ಭಾಷೆಯ ಸಾಹಿತ್ಯ ಕನಕದಾಸರದ್ದು: ಹಾವಣ್ಣ

'ತಮ್ಮದೇ ಆದಂತ ಸಾಹಿತ್ಯದ ವಚನಗಳ ಮೂಲಕ ಜಾತಿ, ಮತ, ಕುಲಗಳ ಭೇದಭಾವವನ್ನು...

ದಾವಣಗೆರೆ | ಸಾಮಾಜಿಕ ಕಾರ್ಯಕರ್ತರ ಹೆಸರಲ್ಲಿ ಬೆದರಿಕೆ ಹಾಕಿದವರ ಬಂಧಿಸುವಂತೆ ಒತ್ತಾಯ

ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ನಮ್ಮ ಶಾಲೆಯ ವಿರುದ್ಧ...