ನನ್ನ ಸ್ಪರ್ಧಾ ಕ್ಷೇತ್ರದ ಬಗ್ಗೆ ನಮ್ಮ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ: ಸಚಿವ ವಿ ಸೋಮಣ್ಣ

Date:

  • ಕಾಂಗ್ರೆಸ್‌ ಸೇರುವ ವಿಚಾರ ನನ್ನ ತಲೆಯಲ್ಲೇ ಇಲ್ಲ
  • 224 ಕ್ಷೇತ್ರಗಳಲ್ಲಿ ನನಗೆ ಆಪ್ತವಾದ ಹಲವು ಕ್ಷೇತ್ರಗಳಿವೆ

ನನ್ನ ಚುನಾವಣಾ ಸ್ಪರ್ಧಾ ಕ್ಷೇತ್ರದ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ಸೋಮವಾರ ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ 224 ಕ್ಷೇತ್ರಗಳಲ್ಲಿ ಆಪ್ತವಾದ ಹಲವು ಕ್ಷೇತ್ರಗಳಿವೆ. ಅವುಗಳ ಬಗ್ಗೆ ನಾನು ಸಾಕಷ್ಟು ತಿಳಿದುಕೊಂಡಿದ್ದೇನೆ. ಅದರಂತೆ ಚಾಮರಾಜನಗರ ಜಿಲ್ಲೆಯೂ ನನ್ನ ಮೆಚ್ಚಿನ ಜಿಲ್ಲೆ. ಹಾಗಂದ ಮಾತ್ರಕ್ಕೆ ನಾನು ಇಲ್ಲಿಂದ ಸ್ಪರ್ಧಿಸುತ್ತೇನೆ ಎಂದುಕೊಳ್ಳಬೇಕಿಲ್ಲ ಎಂದು ಸೋಮಣ್ಣ ಹೇಳಿದರು.

ಹಾಗೆಯೇ ಜಿಲ್ಲೆಯೊಂದರಿಂದ ಸ್ಪರ್ಧಿಸುವ ಇಚ್ಛೆಯನ್ನು ನಾನು ಹೊಂದಿಲ್ಲ, ಸೋಮಣ್ಣ ಎಲ್ಲಿಂದ ಕಣಕ್ಕಿಳಿಯಬೇಕು ಎನ್ನುವುದನ್ನು ನಮ್ಮ ಪಕ್ಷದ ಪ್ರಮುಖರು ನಿರ್ಧರಿಸುತ್ತಾರೆ ಎಂದು ಅವರು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ಸೇರುವ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ನಾನು ಡೈರೆಕ್ಟ್ ರಾಜಕಾರಣಿ, ಏನೇ ಇದ್ದರೂ ನೇರವಾಗಿ ಹೇಳುತ್ತೇನೆ. ಕಾಂಗ್ರೆಸ್ ಗೆ ಸೇರುವ ವಿಷಯ ನನ್ನ ತಲೆಯಲ್ಲೇ ಇಲ್ಲ. ಅವೆಲ್ಲ ಈಗ ಮುಗಿದ ಅಧ್ಯಾಯ ಎಂದು ಸ್ಪಷ್ಟಪಡಿಸಿದರು.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್ ಸರಕಾರದ ದ್ವೇಷದ ರಾಜಕಾರಣ: ಕಾರ್ಯಕರ್ತರ ನೆರವಿಗಾಗಿ ಸಹಾಯವಾಣಿ ಆರಂಭಿಸಿದ ಬಿಜೆಪಿ

24 ಗಂಟೆ ಕಾರ್ಯಾಚರಣೆ ನಡೆಸಲಿರುವ ಬಿಜೆಪಿ ಸಹಾಯವಾಣಿ ಸಹಾಯವಾಣಿ ಕಾರ್ಯಾಚರಣೆಗೆ 100 ಜನ...

3 ತಿಂಗಳೊಳಗೆ ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಣೆ : ರಾಮಲಿಂಗಾರೆಡ್ಡಿ

ಭಾನುವಾರ ಅಧಿಕೃತ ಚಾಲನೆ ಪಡೆದುಕೊಳ್ಳಲಿರುವ ಶಕ್ತಿ ಯೋಜನೆ ನಾಳೆ ಸಾಂಕೇತಿಕವಾಗಿ ಕೆಲವರಿಗೆ ಸ್ಮಾರ್ಟ್...

ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲಗಳಿಲ್ಲ: ಸಿಎಂ ಸಿದ್ದರಾಮಯ್ಯ

ಸರ್ಕಾರದ ಘೋಷಿತ ಗ್ಯಾರಂಟಿಗಳು ಹಂತಹಂತವಾಗಿ ಜಾರಿಯಾಗಲಿವೆ ಪ್ರಣಾಳಿಕೆಯ ಘೋಷಣೆಯಂತೆ ನಾವು ಗ್ಯಾರಂಟಿ ಅನುಷ್ಠಾನ...

ರಾಜ್ಯ ಶಿಕ್ಷಣ ನೀತಿ | ತಜ್ಞರ ಜತೆ ಸಮಾಲೋಚಿಸಿ ಗೊಂದಲವಿಲ್ಲದಂತೆ ಜಾರಿಮಾಡುತ್ತೇವೆ: ಸಚಿವ ಸುಧಾಕರ್‌

ಉದ್ಯೋಗ ಮತ್ತು ನೇಮಕಾತಿ ಅಭಿಯಾನ ಉದ್ಘಾಟಿಸಿ ಉನ್ನತ ಶಿಕ್ಷಣ ಸಚಿವ ಹೇಳಿಕೆ 'ಎಸ್‌ಇಪಿ...