45 ದಿನಗಳ ನಂತರ ಈಗೇಕೆ ನೋಟಿಸ್? ಕೇಂದ್ರದ ನಡೆಗೆ ಕಾಂಗ್ರೆಸ್ ಆಕ್ರೋಶ

Date:

  • ಶ್ರೀನಗರದಲ್ಲಿ ಜನವರಿ 30ರಂದು ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಮಾತು
  • ಮಾರ್ಚ್ 16ರಂದು ರಾಹುಲ್ ಅವರ ದೆಹಲಿ ನಿವಾಸಕ್ಕೆ ನೋಟಿಸ್ ನೀಡಿದ್ದ ದೆಹಲಿ ಪೊಲೀಸರು

ಭಾರತ್ ಜೋಡೋ ಯಾತ್ರೆ ವೇಳೆ ಜಮ್ಮು-ಕಾಶ್ಮೀರದ ಶ್ರೀನಗರದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ರಾಹುಲ್ ಗಾಂಧಿಯವರನ್ನು ವಿಚಾರಣೆ ನಡೆಸುತ್ತಿರುವ ದೆಹಲಿ ಪೊಲೀಸರ ನಡೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ಮಾಧ್ಯಮ ಘಟಕದ ಮುಖ್ಯಸ್ಥರಾದ ಜೈರಾಂ ರಮೇಶ್, “ಭಾರತ್ ಜೋಡೋ ಯಾತ್ರೆ ಮುಗಿದು 45 ದಿನಗಳಾಗಿವೆ. ದೆಹಲಿ ಪೊಲೀಸರು 45 ದಿನಗಳ ನಂತರ ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಅಷ್ಟೋಂದು ಕಾಳಜಿಯಿದ್ದರೆ ಘಟನೆ ನಡೆದು ಕೆಲ ದಿನಗಳಲ್ಲೇ ವಿಚಾರಿಸಬಹುದಿತ್ತಲ್ಲವೆ? ಇದಕ್ಕೆ ರಾಹುಲ್ ಗಾಂಧಿಯವರ ಕಾನೂನು ಘಟಕ ಕಾನೂನಿನ್ವಯ ಉತ್ತರ ನೀಡಲಿದೆ” ಎಂದು ತಿಳಿಸಿದರು.

“ಇದು ಅಮೃತಕಾಲವಲ್ಲ ಆಪತ್ಕಾಲ. ಮೋದಿಯವರ ಸರ್ವಾಧಿಕಾರ ಆಡಳಿತ. ಸಂಸತ್ತನ್ನು ನಡೆಸುವುದು ಸರ್ಕಾರದ ಜವಾಬ್ದಾರಿ. ಇದಕ್ಕೆ ನಾವು ಬೆಂಬಲ ನೀಡುತ್ತೇವೆ. ಆದರೆ ನಮಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ಸದನ ನಡೆಯಲು ಬಿಡದಿರುವುದು ಸರ್ಕಾರದ ಮುಖ್ಯ ಉದ್ದೇಶ” ಎಂದು ಟೀಕಿಸಿದರು.

ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳನ್ನು ಪರಿಗಣಿಸಿರುವ ದೆಹಲಿ ಪೊಲೀಸರು, ಈ ಸಂಬಂಧ ಪ್ರಶ್ನಾವಳಿಯನ್ನು ಸಿದ್ಧಪಡಿಸಿ ರಾಹುಲ್ ಗಾಂಧಿ ಅವರಿಗೆ ಮಾರ್ಚ್ 16ರಂದು ನೋಟಿಸ್ ನೀಡಿದ್ದರು. ಇಂದು ವಿಶೇಷ ಆಯುಕ್ತರ ನೇತೃತ್ವದಲ್ಲಿ ವಿಚಾರಣೆಗಾಗಿ ದೆಹಲಿಯಲ್ಲಿರುವ ರಾಹುಲ್ ನಿವಾಸಕ್ಕೆ ಆಗಮಿಸಿದ್ದರು.

“ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಬಾಲಕಿಯೊಬ್ಬಳು ನನಗೆ ವಿವರ ನೀಡಿದ್ದಳು. ಆಕೆ ಮೇಲೆ ಅತ್ಯಾಚಾರ ನಡೆದಿತ್ತು. ‘ಪೊಲೀಸರನ್ನು ಕರೆಯೋಣವೇ’ ಎಂದು ನಾನು ಆಕೆಯನ್ನು ಕೇಳಿದೆ. ‘ಪೊಲೀಸರನ್ನು ಕರೆಯಬೇಡಿ, ನನ್ನ ಮರ್ಯಾದೆ ಹೋಗುತ್ತದೆ’ ಎಂದು ಆಕೆ ಹೇಳಿದ್ದಳು” ಎಂಬುದಾಗಿ ರಾಹುಲ್ ಗಾಂಧಿ ಹೇಳಿದ್ದರು.

“ಶ್ರೀನಗರದಲ್ಲಿ ಜನವರಿ 30ರಂದು ಭಾರತ್ ಜೋಡೋ ಯಾತ್ರೆ ವೇಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹಲವು ಮಹಿಳೆಯರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ನಾವು ಈ ಕುರಿತು ರಾಹುಲ್ ಗಾಂಧಿ ಅವರ ಬಳಿ ಹೇಳಿಕೆ ಪಡೆಯಲು ಬಂದಿದ್ದೇವೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ನಾವು ಅವರಿಂದ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ” ಎಂದು ದೆಹಲಿಯ ವಿಶೇಷ ಆಯುಕ್ತ ಸಾಗರ್ ಪ್ರೀತ್ ಹೂಡ ತಿಳಿಸಿದ್ದಾರೆ.

Suprabha
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಜೋರಾಂ | ಝೆಡ್‌ಪಿಎಂಗೆ ಬಹುಮತ: ಇಂದಿರಾ ಭದ್ರತಾ ಉಸ್ತುವಾರಿಯಾಗಿದ್ದವ ನೂತನ ಸಿಎಂ !

ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು, ಒಟ್ಟು 40...

ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

ಸಾಮಾಜಿಕ ಹೋರಾಟಗಾರ ಸಿ ಎಸ್ ​ಸಿದ್ದರಾಜು ಅವರಿಂದ ದೂರು ಚುನಾವಣಾ...

2022 ರಲ್ಲಿ ದೇಶದಲ್ಲಿ 28,522 ಕೊಲೆ ಪ್ರಕರಣಗಳು ದಾಖಲು: ಉತ್ತರ ಪ್ರದೇಶ ಹೆಚ್ಚು

ದೇಶದಲ್ಲಿ 2022ರಲ್ಲಿ ಒಟ್ಟು 28,522 ಕೊಲೆಗಳ ಎಫ್ಐಆರ್‌ಗಳು ದಾಖಲಾಗಿವೆ ಎಂದು ರಾಷ್ಟ್ರೀಯ...