ಬಿಜೆಪಿಯಿಂದ ಲಿಂಗಾಯತರ ನಿಂದನೆ ಎಂದ ಮೋದಿ; ಕಮಲ ಪಡೆ ಯಡವಟ್ಟು

Date:

  • ಬೀದರ್‌ನಲ್ಲಿ ನರೇಂದ್ರ ಮೋದಿ ಭಾಷಣ
  • ಟ್ವೀಟ್‌ ಮಾಯ ಮಾಡಿದ ರಾಜ್ಯ ಬಿಜೆಪಿ

ರಾಜ್ಯ ವಿಧಾನಸಭಾ ಚುನಾವಣಾ ಭರ್ಜರಿ ಪ್ರಚಾರದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಲಿಂಗಾಯತ ನಾಯಕರ ವಿಚಾರವಾಗಿ ಬಿಜೆಪಿಯಿಂದ ಲಿಂಗಾಯತರ ನಿಂದನೆ ಎಂದ ಮೋದಿ; ಕಮಲ ಪಡೆ ಯಡವಟ್ಟನ್ನು ಮಾಡಿಕೊಂಡಿದೆ.

ಪ್ರಧಾನಿ ಮೋದಿ ಅವರು ಬೀದರ್‌ನ ಹುಮ್ನಾಬಾದ್‌ ಚಿನಕೇರಾದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಯಥಾಪ್ರಕಾರ ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ.

ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ, “ಬಿಜೆಪಿ ನನ್ನನ್ನು ಅಷ್ಟೇ ಅಲ್ಲ. ಇಡೀ ಲಿಂಗಾಯತ ಸಮುದಾಯವನ್ನು ನಿಂದಿಸಿದೆ” ಎಂದು ಬರೆದುಕೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೋದಿ ಮಾತನಾಡುವ ವೇಳೆ, ಕಾಂಗ್ರೆಸ್‌ ಲಿಂಗಾಯತ ಸಮುದಾಯವನ್ನು ಅವಮಾನಿಸಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಬಿಜೆಪಿ ಯಡವಟ್ಟು ಮಾಡಿಕೊಂಡು ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ.

ಲಿಂಗಾಯತ ನಾಯಕರನ್ನು ಬಿಜೆಪಿ ಈಗಾಗಲೇ ಕಡೆಗಣಿಸಿದೆ, ರಾಜಕೀಯವಾಗಿ ಮುಗಿಸಲು ಹೊರಟಿದೆ ಎನ್ನುವ ಆರೋಪಗಳು ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಈ ನಡುವೆ, ಬಿಜೆಪಿ ಸ್ವತಃ ತಾನು ಲಿಂಗಾಯತ ನಾಯಕರನ್ನು ಕಡೆಗಣಿಸಿರುವುದಾಗಿ ಒಪ್ಪಿಕೊಂಡಂತಾಗಿದೆ. 

ಬಿಜೆಪಿಯ ಟ್ವೀಟ್ ಅನ್ನು ಹಂಚಿಕೊಂಡಿರುವ ಕಾಂಗ್ರೆಸ್, “ನಿಜ, ಮೋದಿಯವರು ಸತ್ಯ ಹೇಳಿದ್ದಾರೆ. ಬಿಜೆಪಿ ಲಿಂಗಾಯತ ಸಮುದಾಯವನ್ನು ಬಿಜೆಪಿ ಅವಮಾನಿಸಿದೆ. ಹಾಗೆಯೇ ಮೋದಿಯವರನ್ನೂ ನಿಮ್ಮ ಶಾಸಕ ಶಿವರಾಜ್ ಪಾಟೀಲ್ ಅವಮಾನಿಸಿದ್ದಾರೆ. ಈ ಸತ್ಯವನ್ನು ಒಪ್ಪಿಕೊಂಡಿದ್ದಕ್ಕೆ ಮೋದಿಗೂ ಹಾಗೂ ಬಿಜೆಪಿಗೂ ಧನ್ಯವಾದಗಳು!” ಎಂದು ಕುಟುಕಿದೆ.

ತನ್ನ ತಪ್ಪಿನ ಅರಿವಾಗುತ್ತಿದ್ದಂತೆಯೇ ಬಿಜೆಪಿ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಯವಾಗಿದೆ. ಒಂದೆಡೆ, “ಬಿಜೆಪಿ ನಾಯಕರು ಕಡೆಗೂ ಲಿಂಗಾಯತ ಸಮುದಾಯವನ್ನು ಕಡೆಗಣಿಸಿರುವುದನ್ನು ಒಪ್ಪಿಕೊಂಡಿತು” ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಮೀಕ್ಷೆ | ಬಿಜೆಪಿಗೆ ನಿದ್ರಾಭಂಗ; ಕಾಂಗ್ರೆಸ್‌ನಲ್ಲಿ ಹೊಸ ಹುಮ್ಮಸ್ಸು

ಬೀದರ್‌ನಲ್ಲಿ ಮಾತನಾಡಿದ್ದ ಮೋದಿ, “ನನ್ನನ್ನು ಅಷ್ಟೇ ಅಲ್ಲ, ಇಡೀ ಲಿಂಗಾಯತ ಸಮುದಾಯವನ್ನೂ ಕಾಂಗ್ರೆಸ್ ನಿಂದಿಸಿದೆ. ಲಿಂಗಾಯತ ನಾಯಕರನ್ನು ಕೈ ನಾಯಕರು ಕಳ್ಳರು ಎಂದರು. ಈ ನಿಂದನೆಗೆ ಕರ್ನಾಟಕದ ಮತದಾರರು ಉತ್ತರ ಕೊಡಲಿದ್ದಾರೆ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೇಹಾ ಕನ್ನಡ ನಾಡಿನ ಮಗಳು, ಸಾವಿನ ಮನೆಯಲ್ಲಿ ಬಿಜೆಪಿ ರಾಜಕಾರಣ ಬೇಡ: ಸುರ್ಜೇವಾಲ್

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲ್ ಅವರು ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ನೇಹಾ...

‘ಈ ದಿನ’ ಸಮೀಕ್ಷೆ | ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ ಅಂತಾರೆ ಮತದಾರರು!

2014ರಲ್ಲಿ ಚುನಾವಣಾ ಪ್ರಚಾರಕ್ಕೆ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಪ್ರಮುಖ ವಿಚಾರವಾಗಿದ್ದು...

ಮಲ್ಲಿಕಾರ್ಜುನ ಖರ್ಗೆ ಸೋಲು ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ, ಈ ಬಾರಿ ಹಾಗೇ ಆಗಬಾರದು: ಸಿದ್ದರಾಮಯ್ಯ

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆಯವರು ಸೋತಿದ್ದರಿಂದ ಹೆಚ್ಚು...

ಹಾಸನ, ಮಂಡ್ಯದಲ್ಲಿ ಬಿಜೆಪಿ ನಾಯಕರ ಸಹಕಾರ ದೊರೆತಿಲ್ಲ: ಹೆಚ್‌ ಡಿ ದೇವೇಗೌಡ

ಹಾಸನದಲ್ಲಿ ಬಿಜೆಪಿಯ ಕೆಲವರು ವಿರೋಧ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ಅವರು...