ತೆಲಂಗಾಣದಲ್ಲೂ ‘ಗ್ಯಾರಂಟಿ’ಯ ಭರವಸೆ ನೀಡಿದ ಕಾಂಗ್ರೆಸ್; ಆದರೆ ಐದಲ್ಲ, ಆರು!

Date:

  • ಕರ್ನಾಟಕದ ಮಾದರಿಯನ್ನೇ ತೆಲಂಗಾಣದಲ್ಲೂ ಘೋಷಿಸಿದ ಕಾಂಗ್ರೆಸ್
  • ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರದ ನನ್ನ ಕನಸು ಎಂದ ಸೋನಿಯಾ ಗಾಂಧಿ

ಕರ್ನಾಟಕದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಮುಖ ಐದು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್, ತೆಲಂಗಾಣದಲ್ಲೂ ಅದೇ ಮಾದರಿಯನ್ನು ಅನುಸರಿಸಿದೆ.

ಪಂಚ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್, ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕೆ ಚಂದ್ರಶೇಖರ್ ರಾವ್ ಪಕ್ಷಕ್ಕೆ ಠಕ್ಕರ್ ನೀಡಲು, ‘ಆರು ಗ್ಯಾರಂಟಿ’ ಅಸ್ತ್ರ ಪ್ರಯೋಗಿಸಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 6 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಭರವಸೆ ನೀಡಿದ್ದು, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದಲ್ಲಿ ನಡೆದ ಕಾಂಗ್ರೆಸ್​ ರ‍್ಯಾಲಿಯಲ್ಲಿ ಮೊದಲ ಗ್ಯಾರಂಟಿ ‘ಮಹಾಲಕ್ಷ್ಮೀ’ ಯೋಜನೆಯನ್ನು ಕಾಂಗ್ರೆಸ್​ ಮುಖಸ್ಥೆ ಸೋನಿಯಾ ಗಾಂಧಿ ಅಧಿಕೃತವಾಗಿ ಘೋಷಣೆ ಮಾಡಿದರು.

‘ಮಹಾಲಕ್ಷ್ಮೀ’ ಯೋಜನೆಯಡಿ ತೆಲಂಗಾಣದಲ್ಲಿ ಮಹಿಳೆಯರಿಗೆ ಮಾಸಿಕ 2,500 ಹಣ ನೀಡುವ ಯೋಜನೆಯಾಗಿದ್ದು, ಪ್ರತಿ ಸಿಲಿಂಡರ್‌ಗೆ 500 ರೂಪಾಯಿ ಸಬ್ಸಿಡಿ ಮತ್ತು ತೆಲಂಗಾಣದಲ್ಲಿ ಟಿಎಸ್‌ಆರ್‌ಟಿಸಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯದೊಳಗಡೆ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ್ದಾರೆ.

2ನೇ ಗ್ಯಾರಂಟಿಯಾಗಿ ‘ರೈತ ಭರೋಸಾ’ ಯೋಜನೆಯಡಿ ಆರ್ಥಿಕ ಸಹಾಯ ನೀಡಲು ಕಾಂಗ್ರೆಸ್ ಮುಂದಾಗಿದೆ. ಅನ್ನದಾತರಿಗೆ ಪ್ರತಿ ವರ್ಷ 15 ಸಾವಿರ ರೂಪಾಯಿ ನೀಡುವ ಯೋಜನೆ ಇದಾಗಿದೆ. ರೈತ ಕೂಲಿ ಕಾರ್ಮಿಕರಿಗೆ ಪ್ರತಿ ವರ್ಷ 12 ಸಾವಿರ ಆರ್ಥಿಕ ಸಹಾಯ ಒದಗಿಸಲಾಗುತ್ತಿದೆ. ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 500 ರೂಪಾಯಿ, ಮಾಸಿಕ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಯೋಜನೆ ಕೂಡ ಘೋಷಣೆ ಮಾಡಲಾಗಿದೆ.

‘ಇಂದಿರಮ್ಮ ಗೃಹ ನಿರ್ಮಾಣ’ ಯೋಜನೆ ಘೋಷಿಸಿರುವ ಕಾಂಗ್ರೆಸ್‌, ಮನೆ ಇಲ್ಲದವರಿಗೆ ನಿವೇಶನ ಖರೀದಿಸಲು 5 ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ. ತೆಲಂಗಾಣ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಹೋರಾಟ ಮಾಡಿದವರಿಗೆ ಉಚಿತ ನಿವೇಶನ ನೀಡಲು ಇದೇ ವೇಳೆ ಕಾಂಗ್ರೆಸ್​ ಮುಂದಾಗಿದೆ.

ಪ್ರಮುಖ 6 ಗ್ಯಾರಂಟಿ ಯೋಜನೆಗಳ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಐಟಿ ಸೆಲ್, ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲೇ ಗ್ಯಾರಂಟಿ ಯೋಜನೆ ಅನುಷ್ಠಾನ ಭರವಸೆ ನೀಡಿದೆ. ಮಹಾಲಕ್ಷ್ಮೀ, ರೈತ ಭರೋಸಾ, ಇಂದಿರಮ್ಮ ಗೃಹ ನಿರ್ಮಾಣ, ವಿದ್ಯಾ ಭರೋಸಾ, ಯುವ ವಿಕಾಸ, ಚೆಯುತ ಎಂಬುದು ಆರು ಪ್ರಮುಖ ಗ್ಯಾರಂಟಿಗಳಾಗಿದೆ.

ಘೋಷಣೆ ಬಳಿಕ ಮಾತನಾಡಿದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ತೆಲಂಗಾಣ ಜನರ ಆಕಾಂಕ್ಷೆಗಳನ್ನು ಈಡೇರಿಸಲು ನಾವು ಆರು ಗ್ಯಾರಂಟಿಗಳನ್ನು ಘೋಷಿಸಿದ್ದು, ಅವುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ನನ್ನ ಕನಸು ಎಂದು ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ೬ ಗ್ಯಾರಂಟಿಗಳ ಬದಲಿಗೆ ಪ್ಬೇರಮುಖವಾಗಿ ಬೇಕಿರುವುದು ಭ್ರಷ್ಟಾಚಾರರಹಿತ ಕಾರ್ಸೇಯಾಂಗ ಸೇವೆಯ ಗ್ಯಾರಂಟಿ (ಪ್ರಾಮಾಣಿಕ ಸೇವೆ).

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರಾಗಿ ಸಚಿವರ ನೇಮಕ; ಎಂ ಬಿ ಪಾಟೀಲ್‌, ಜಾರ್ಜ್‌ಗಿಲ್ಲ ಜವಾಬ್ದಾರಿ

ಸಚಿವರ ತವರು ಜಿಲ್ಲೆ ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಗಳಿಗೆ ನೇಮಕ ಸಂಭಾವ್ಯ ಅಭ್ಯರ್ಥಿಗಳ...

ವಿಪಕ್ಷಗಳಿಂದ ನೀರಿನ ರಾಜಕಾರಣ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಕಾವೇರಿ ನೀರಿನ ವಿಚಾರದಲ್ಲಿ ವಿಪಕ್ಷಗಳ ಮುಖಂಡರಾದ ಬಿಎಸ್​ವೈ, ಬೊಮ್ಮಾಯಿ, ಹೆಚ್​ಡಿ ಕುಮಾರಸ್ವಾಮಿಯವರು...

ತಮಿಳುನಾಡಿಗೆ ನೀರು ಬಿಟ್ಟಿದ್ದೇ ಆದರೆ ನಮ್ಮ ನಡೆ ಬೇರೆ ಇರಲಿದೆ: ಕುಮಾರಸ್ವಾಮಿ ಎಚ್ಚರಿಕೆ

ತಮಿಳುನಾಡು ಕೇಳುವ ಮೊದಲೇ ನೀರು ಬಿಟ್ಟ ಸರ್ಕಾರ ತಮಿಳುನಾಡಿನವರು ಎರಡು ಬೆಳೆ ಬೆಳೆಯುತ್ತಾರೆ:...

ಹೊಸ ಸಂಸತ್ ಕಟ್ಟಡವನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎನ್ನಬೇಕು: ಜೈರಾಮ್ ರಮೇಶ್

ಹೊಸ ಸಂಸತ್ ಭವನದ ರಚನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್...