- ಆಡಿಯೋ ಅಸಲಿಯತ್ತು ಪರಿಶೀಲನೆ ಸಲುವಾಗಿ ಪ್ರಕರಣ ದಾಖಲು
- ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮದ ಭರವಸೆ ನೀಡಿದ ಸಿಎಂ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ಕೊಲೆ ಸಂಚು ಕುರಿತಂತೆ ಮಾತನಾಡಿರುವ ಆಡಿಯೋ ಬಗ್ಗೆ ಪ್ರಕರಣ ದಾಖಲಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಣಿಕಂಠ ರಾಠೋಡ್ ಮಾತಾಡಿದ ಫೋನ್ ಧ್ವನಿ ಮುದ್ರಿಕೆ ವಿಚಾರದಲ್ಲಿ ಪ್ರಕರಣ ದಾಖಲಿಸಿ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಧ್ವನಿ ಮುದ್ರಿಕೆ ವಿಚಾರದಲ್ಲಿ ಅನುಮಾನವಿದೆ. ಅದನ್ನು ತಿರುಚಲಾಗಿದೆಯೋ ಏನು ಎಂಬುವುದನ್ನು ನೋಡಬೇಕು. ಆ ಬಳಿಕ ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿ ಬೊಮ್ಮಾಯಿ ಹೇಳಿದರು.
ಈ ಸುದ್ದಿ ಓದಿದ್ದೀರಾ?:ಬಿಜೆಪಿಯಿಂದ ಖರ್ಗೆ ಕುಟುಂಬ ಹತ್ಯೆಗೆ ಸಂಚು, ಮೋದಿ ಮೌನಕ್ಕೆ ಶರಣು : ಸುರ್ಜೇವಾಲ ಗಂಭೀರ ಆರೋಪ
ಇದೇ ವೇಳೆ ಕಾಂಗ್ರೆಸ್ ಪರ ನಟ ಶಿವರಾಜ್ ಕುಮಾರ್ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಶಿವರಾಜ್ ಕುಮಾರ್ ಪ್ರಚಾರದ ಬಗ್ಗೆ ನನಗೇನು ಅಭ್ಯಂತರವಿಲ್ಲ ಎಂದರು.
ರಾಜ್ಯದಲ್ಲಿ ಮೋದಿ ಅಲೆ ಮೊದಲಿಗಿಂತಲೂ ಈಗ ಜಾಸ್ತಿಯಾಗಿದೆ. ಹೀಗಾಗಿ ನಮಗೇನೂ ಆತಂಕವಿಲ್ಲ. ಅವರವರ ಪಕ್ಷದವರು ಅವರಿಗೆ ಬೇಕಾದವರನ್ನು ಕರೆಯಿಸಿಕೊಂಡು ಪ್ರಚಾರ ನಡೆಸಿಕೊಳ್ಳಲಿ ಎಂದು ಹೇಳಿದರು.