ವ್ಯಾಪಾರಸ್ಥರ ಬಿಜೆಪಿ, ದೀನದಲಿತರ ಕಾಂಗ್ರೆಸ್‌; ಯಾವುದು ಬೇಕು ನಿರ್ಧರಿಸಿ ಎಂದ ಮಹದೇವಪ್ಪ

Date:

  • ದೀನದಲಿತರ ಪರ ಇರುವ ಏಕೈಕ ಧ್ವನಿ ಕಾಂಗ್ರೆಸ್ ಪಕ್ಷ
  • ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ

ಬಿಜೆಪಿ ವ್ಯಾಪಾರಸ್ಥರ ಪಕ್ಷ, ಕಾಂಗ್ರೆಸ್ ದೀನದಲಿತರ ಪರ ಇರುವ ಪಕ್ಷ. ಈ ಬಾರಿ ಜನ ಯೋಚಿಸಿ ಮತ ನೀಡಿ ನಿಮ್ಮ ಆಯ್ಕೆ ಪ್ರದರ್ಶಿಸಿ ಎಂದು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಹೇಳಿದರು.

ತಮ್ಮ ಸ್ವಕ್ಷೇತ್ರ ಟಿ ನರಸೀಪುರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಕ್ಷದ ಸ್ಟಾರ್ ಕ್ಯಾಂಪೇನರ್ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಹದೇವಪ್ಪ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಬಿಜೆಪಿ ಎಂದಿಗೂ ಬಡವರ, ದೀನದಲಿತರ ಪರ ಕೆಲಸ ಮಾಡುವುದಿಲ್ಲ ಅವರದ್ದೇನಿದ್ದರೂ ಅಂಬಾನಿ, ಅದಾನಿಗಳಿಗಳಿಗಿರುವ ಪಕ್ಷ. ಅವರ ಉದ್ದಾರವೇ ಬಿಜೆಪಿಯ ಸಾಧನೆ ಎಂದು ಕಿಡಿಕಾರಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಿಜೆಪಿಯವರು ಯಾವತ್ತಿಗೂ ದೇಶ ಉಳಿಸುವ ಯೋಜನೆ ಹಾಗೂ ಯೋಚನೆಯನ್ನು ಮಾಡುವವರಲ್ಲ. ಇವರದ್ದೇನಿದ್ದರೂ ಮಾರುವ ಯೋಜನೆಗಳಷ್ಟೇ ಎಂದು ಮಹದೇವಪ್ಪ ಲೇವಡಿ ಮಾಡಿದರು.

ಭಾರತೀಯ ಜನತಾಪಕ್ಷ ಹಾಗೂ ಮೋದಿ ಆಡಳಿತದಲ್ಲಿ ಸಂವಿಧಾನ ಸಂಕಷ್ಟಕ್ಕೀಡಾಗಿದೆ. ಇವರು ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ.

ಸಮಾನತೆ, ಸ್ವಾತಂತ್ರ್ಯದ ಉದ್ದೇಶವನ್ನು ಇವರು ಹಾಳು ಮಾಡುತ್ತಾರೆ. ಇವರಿಗೆ ಮತ್ತೆ ಆಡಳಿತ ನೀಡಿದರೆ ದೇಶವನ್ನು ಅವನತಿ ಕಡೆಗೆ ಒಯ್ಯುತ್ತಾರೆ ಎಂದು ಮಾಜಿ ಸಚಿವರು ಹೇಳಿದರು.

ಬಿಜೆಪಿ ಆರ್‌ಎಸ್‌ಎಸ್‌ ಆಣತಿಯಂತೆ ಕೆಲಸ ಮಾಡುವ ಜನವಿರೋಧಿ ಪಕ್ಷ. ಜನ ಇಲ್ಲಿ ಬದುಕುವುದು ಅಸಾಧ್ಯ ಎನ್ನುವ ವಾತಾವರಣವನ್ನು ದೇಶ ಕಂಡಿದೆ.

ಇವರೇ ಅಧಿಕಾರದಲ್ಲಿದ್ದರೆ ನಿಮ್ಮ ಅಭಿವೃದ್ದಿ ಅಸಾಧ್ಯ. ಕಾಂಗ್ರೆಸ್ ದೇಶದ ಜನರ ಪಕ್ಷ. ಇದರೊಂದಿಗಿದ್ದರೆ ಜನ ಸದಾ ಸುರಕ್ಷಿತ, ದೇಶದ ಜೊತೆ ಸಂವಿಧಾನವೂ ಭದ್ರ ಎಂದು ಮಹದೇವಪ್ಪ ಹೇಳಿದರು.

ಹಿಂದೆ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 165 ಭರವಸೆಗಳನ್ನೂ ಈಡೇರಿಸಿದೆ. ಇದು ನಮ್ಮ ಕಾಂಗ್ರೆಸ್ ಸರ್ಕಾರ. ಬಿಜೆಪಿಯವರು ಹೇಳಿದ್ದಷ್ಟೇ ಹೊರತು ಮಾಡಿದ್ದೇನೂ ಇಲ್ಲ ಎಂದರು.

ಈ ಸುದ್ದಿ ಓದಿದ್ದೀರಾ?:ಹಳೆ ಮೈಸೂರಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಹರಸಾಹಸ : ಪ್ರಚಾರದ ಕಣಕ್ಕೆ ಎಚ್‌ಡಿಡಿ, ಎಚ್‌ಡಿಕೆ

ಸಮಯ ಸಾಧಕ ರಾಜಕೀಯನ್ನಷ್ಟೇ ಮಾಡುವ ಭಾಜಪದವರು ರಾಜ್ಯವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಮಹಿಳೆಯರು, ದಲಿತರು,ದುಡಿಯುವ ವರ್ಗವನ್ನು ಇವರು ಪ್ರಪಾತಕ್ಕೆ ತಳ್ಳಿದ್ದಾರೆ.

ಜನಪರ ಸೂಕ್ಷ್ಮತೆ, ಕಾಳಜಿ ಇಲ್ಲದ ಈ ಸರ್ಕಾರ ಎಮ್ಮೆಯ ದಪ್ಪ ಚರ್ಮದಂತೆ. ʼಇಂತಹ ಸರ್ಕಾರ ಇದ್ದರೆಷ್ಟು ಹೋದರೆಷ್ಟು ಎಂದು ಮಹದೇವಪ್ಪ ಗುಡುಗಿದರು.

ನೀವೆಲ್ಲ ಮತ್ತೊಮ್ಮೆ ಯೋಚನೆ ಮಾಡಿ, ಸ್ಥಿರ ಹಾಗೂ ಸುಭದ್ರ ಸರ್ಕಾರ ನೀಡಲು ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ, ನನಗೂ ಹಾಗೂ ನಮ್ಮ ಜಿಲ್ಲೆಯ ಎಲ್ಲರನ್ನೂ ಆಶೀರ್ವದಿಸಿ ಎಂದು ಕ್ಷೇತ್ರದ ಮತದಾರರು ಹಾಗೂ ಕಾಂಗ್ರೆಸ್ ಅಭಿಮಾನಿಗಳಲ್ಲಿ ವಿನಂತಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆ ಕದನ | ಸಂಘರ್ಷ ಪೀಡಿತ ಮಣಿಪುರದಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ?

ಮಣಿಪುರದಲ್ಲಿ ಬಿಜೆಪಿ ಕಳೆದೆರಡು ಚುನಾವಣೆಯಲ್ಲೂ ಮತಪ್ರಮಾಣದಲ್ಲಿ ಏರಿಕೆ ಕಂಡಿದ್ದರೂ ಈ ಬಾರಿ...

‘ಈಸ್ಟರ್ ಭಾನುವಾರ’ ಕೆಲಸದ ದಿನವೆಂದು ಘೋಷಣೆ; ಮಣಿಪುರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

ಕ್ರೈಸ್ತರ ಪ್ರಮುಖ ಹಬ್ಬವಾದ 'ಈಸ್ಟರ್ ಭಾನುವಾರ'ವನ್ನು (ಮಾರ್ಚ್‌ 31) ಕೆಲಸದ ದಿನವಾಗಿ...

ತಮಿಳುನಾಡು | 238 ಬಾರಿ ಚುನಾವಣೆಯಲ್ಲಿ ಸೋತರೂ ದಣಿಯದ ಪದ್ಮರಾಜನ್;‌ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ

ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೆ ಯಾರಿಗಾದರೂ ನಿರಾಶೆ ಉಂಟಾಗಬಹುದು. ಆದರೆ ಟೈರ್ ರಿಪೇರಿ...

ತೆರಿಗೆ ಮರು ಮೌಲ್ಯಮಾಪನ ವಿರುದ್ಧದ ಕಾಂಗ್ರೆಸ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ತೆರಿಗೆ ಅಧಿಕಾರಿಗಳು ತಮ್ಮ ವಿರುದ್ಧ ನಾಲ್ಕು ವರ್ಷಗಳ ಅವಧಿಯ ತೆರಿಗೆ ಮರುಮೌಲ್ಯಮಾಪನ...