ನಮ್ಮ ಕ್ಷೇತ್ರದ ಶಾಸಕರಿಗೆ ಸಿಗುವ ಸಂಬಳ ಎಷ್ಟು ಗೊತ್ತೇ?

Date:

  • ಜನಸೇವೆಗೆ ಆಯ್ಕೆಯಾಗುವ ಜನಪ್ರತಿನಿಧಿಗಳಿಗೂ ಇದೆ ತಿಂಗಳ ವೇತನ
  • ಶಾಸಕರಾದವರಿಗೆ ಲಭ್ಯವಾಗಲಿದೆ ಹಲವು ಉಚಿತ- ಖಚಿತ ಸರ್ಕಾರಿ ಭತ್ಯೆ

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುವ ಭರವಸೆಯೊಂದಿಗೆ ಕಾರ್ಯಾರಂಭ ಮಾಡಿದೆ. ನಮ್ಮೂರಿನ ಜೊತೆಗೆ ನಾವೂ ಸ್ವಲ್ಪ ಅಭಿವೃದ್ದಿಯಾಗೋಣ ಎನ್ನುವ ನಿಟ್ಟಿನಲ್ಲಿ ಬದಲಾವಣೆಗೆ ಕೈ ಜೋಡಿಸಿರುವ ನಾಡಿನ ಜನ ತಮ್ಮ ಶಾಸಕರ ಕೆಲಸ ಕಾರ್ಯಗಳತ್ತ ಗಮನ ಹರಿಸಿದ್ದಾರೆ.

ಪ್ರಚಾರದ ವೇಳೆ ಹೇಳಿದ ಕೆಲಸಗಳನ್ನು ಮಾಡಿಕೊಡುತ್ತಾರೋ ಇಲ್ಲವೋ ಎನ್ನುವುದೇ ಅವರ ಮೇಲಿರುವ ಮೊದಲ ನಿರೀಕ್ಷೆ. ಹೀಗೆ ಜನಸಾಮಾನ್ಯರ ನಿರೀಕ್ಷೆ ಹಾಗೂ ಭರವಸೆಗಳನ್ನು ಹೆಗಲ ಮೇಲೆ ಹೊತ್ತು ಶಾಸನಸಭೆಯಲ್ಲಿ ಅವುಗಳ ಅನುಷ್ಠಾನಕ್ಕಾಗಿ ಹೋರಾಡುವವರು ನಮ್ಮೀ ಶಾಸಕರುಗಳು.

ಅಂದಹಾಗೆ ಜನಸೇವೆ ಮಾಡುವ ಈ ಶಾಸಕರಿಗೆ ಸರ್ಕಾರ ಈ ಕಾರ್ಯಕ್ಕಾಗಿ ಕೊಡವ ಸಂಬಳ ಎಷ್ಟು ಗೊತ್ತೇ? ಬರೋಬ್ಬರಿ 2 ಲಕ್ಷದ 16 ಸಾವಿರ ರೂಪಾಯಿಗಳು. ಹಾಗೆಯೇ ಇದರ ಜೊತೆಗೆ ವಾರ್ಷಿಕ ಇನ್ನಷ್ಟು ಹೆಚ್ಚುವರಿ ಭತ್ಯೆಗಳು ಅವರಿಗೆ ಲಭ್ಯವಾಗಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಶಾಸಕರ ಸಂಬಳ ಭತ್ಯೆ ವಿವರ ಹೀಗಿದೆ

ಸಂಬಳ- 40,000 ರೂಪಾಯಿಗಳು, ದೂರವಾಣಿ ವೆಚ್ಚ- 20,000 ರೂಪಾಯಿ, ಕ್ಷೇತ್ರ ಭತ್ಯೆ- 60,000 ಸಾವಿರ, ಅಂಚೆ ವೆಚ್ಚ- 5,000 ಸಾವಿರ, ಆಪ್ತ ಸಹಾಯಕ ಹಾಗೂ ರೂಮ್ ಬಾಯ್ ಸಂಬಳಕ್ಕೆ 20,000 ಸಾವಿರ ಹೀಗೆ ತಿಂಗಳಿಗೆ ಒಟ್ಟು 1,45,000 ರೂಪಾಯಿಗಳು ದೊರಕಲಿದೆ. ಇದರೊಂದಿಗೆ ಇನ್ನಿತರ ವೆಚ್ಚಗಳು ಹೆಚ್ಚುವರಿಯಾಗಿ ಸಿಗುತ್ತದೆ.

ವೈದ್ಯಕೀಯ ಚಿಕಿತ್ಸೆ ವೆಚ್ಚ: ಆರೋಗ್ಯ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ವಹಣೆಯ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ತಾನು ಪಡೆದ ವೈದ್ಯೋಪಚಾರ ಹಾಗೂ ಚಿಕಿತ್ಸೆಗಾಗಿ ವೈದ್ಯಕೀಯ ವೆಚ್ಚಗಳನ್ನು ಭರಿಸಿದ ಸಂದರ್ಭದಲ್ಲಿ, ಅವರು ಸರ್ಕಾರಿ ಆಸ್ಪತ್ರೆ ಅಥವಾ ಚಿಕಿತ್ಸಾಲಯದಲ್ಲಿ ಪಡೆದ ವೈದ್ಯೋಪಚಾರ ಅಥವಾ ಚಿಕಿತ್ಸೆ ವೆಚ್ಚಗಳ ಸಮನಾದ ವೆಚ್ಚಕ್ಕೆ ಮರುಪಾವತಿ ಪಡೆಯಲು ಅರ್ಹರಿರುತ್ತಾರೆ.

ಯಾರೇ ಸದಸ್ಯರು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಗೆ ಮಾತ್ರ ಶ್ರವಣ ಸಾಧನಕ್ಕಾಗಿ ಪ್ರತಿ ಕಿವಿಗೆ ರೂ.1,00,000/-ಗಳವರೆಗೆ, ದಂತಪಂಕ್ತಿಗಾಗಿ ರೂ.50,000/-ಗಳವರೆಗೆ ಹಾಗೂ ಕ್ಯಾಪ್‌ನೊಂದಿಗೆ ರೂಟ್ ಕೆನಾಲ್ ಗಾಗಿ ರೂ.10,000/-ಗಳವರೆಗೆ ವೈದ್ಯಕೀಯ ವೆಚ್ಚ ಮರುಪಾವತಿ ಪಡೆಯಬಹುದು. ಹಾಗೆಯೇ ‘ಕುಟುಂಬದ ಸೀಮಿತ ಸದಸ್ಯ’ರಿಗೂ ಇದು ಅನ್ವಯವಾಗುತ್ತದೆ.

ಗಣಕ ಯಂತ್ರ ಅನುದಾನವಾಗಿ ವಾರ್ಷಿಕ 50 ಸಾವಿರ ರೂಪಾಯಿಗಳನ್ನು ಶಾಸಕರು ವಿನಿಯೋಗಿಸಬಹುದು. ಹಾಗೆಯೇ ಮೋಟಾರು ವಾಹನ ಖರೀದಿ ಸಾಲ ಸೌಲಭ್ಯವೂ ಶಾಸಕರಿಗೆ ಲಭ್ಯವಾಗುತ್ತದೆ. ಇದರ ಪ್ರಕಾರ ಶೇ.7%ರ ಸರಳ ಬಡ್ಡಿ ದರದ ಮೇಲೆ ಮೋಟಾರು ಸೈಕಲ್ ಖರೀದಿಗೆ ರೂ.8,000, ವಾಹನಗಳ ಖರೀದಿಗೆ 15 ಲಕ್ಷಗಳ ಮೊಬಲಗನ್ನು ಮುಂಗಡವನ್ನು ಪಡೆದುಕೊಳ್ಳಲು ಅವಕಾಶವಿದೆ.

ಒಂದು ವೇಳೆ ಮುಂಗಡ ಹಣದ ಬಾಕಿಗಳು ವಸೂಲಿಯಾಗುವುದಕ್ಕಿಂತ ಮುಂಚೆ ಸದಸ್ಯನು ಮರಣ ಹೊಂದಿದಲ್ಲಿ (ಅಸಲು ಹಾಗೂ ಅದರ ಮೇಲಿನ ಬಡ್ಡಿ ಎರಡೂ ಸೇರಿದಂತೆ) ಬಾಕಿಯಿರುವ ಸಂಪೂರ್ಣ ಮೊತ್ತವನ್ನು ಮನ್ನಾ ಮಾಡಲಾಗುವುದು.

ಪ್ರಯಾಣ ಭತ್ಯೆ: ರಾಜ್ಯದಲ್ಲಿನ ಪ್ರಯಾಣ ಖರ್ಚಿಗಾಗಿ ಶಾಸಕರಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಇದು ಅವರು ಹಾಜರಾದ ಸಭೆ ಅಥವಾ ಪ್ರಯಾಣಿಸಿದ ಹಾದಿಯ ವೆಚ್ಚದ ಮೇಲೆ ನಿಗದಿಯಾಗುತ್ತದೆ. ಅಂದರೆ ಪ್ರಯಾಣದ ಬಗೆಯನ್ನು ಗಣನೆಗೆ ತೆಗೆದುಕೊಳ್ಳದೆ ಪ್ರತಿ ಕಿಲೋ ಮೀಟರ್ ಗೆ ರೂ.35/, ಅಥವಾ ರೂ.1,500/-ಗಳನ್ನು ಪ್ರತಿ ಸಭೆಯ ಹಾಜರಾತಿಗೆ ನೀಡಲಾಗುತ್ತದೆ.

ಈ ಸುದ್ದಿ ಓದಿದ್ದೀರಾ? : ಚಂಡೀಗಢಕ್ಕೆ ಟ್ರಕ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ | ಚಾಲಕರೊಡನೆ ಮಾತುಕತೆ

ವಿಮಾನ ಮತ್ತು ರೈಲ್ವೆ ಪ್ರಯಾಣ ಭತ್ಯೆ: ಪ್ರತಿ ಆರ್ಥಿಕ ವರ್ಷದಲ್ಲಿ, ಸದಸ್ಯರು ಭಾರತದಲ್ಲಿ ವಿಮಾನದ ಮೂಲಕ ಅಥವಾ ರೈಲ್ವೆ ಮೂಲಕ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪ್ರಯಾಣಗಳಲ್ಲಿ ಒಬ್ಬರೇ ಅಥವಾ ಸಹಚರರೊಂದಿಗೆ ಪ್ರಯಾಣಿಸುವ ಉದ್ದೇಶಕ್ಕಾಗಿ ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳಲ್ಲಿ ರೂ.2,50,000/- (ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳು ಮಾತ್ರ) ಮೊತ್ತವನ್ನು ಎರಡು ಸಮಾನ ಕಂತುಗಳಲ್ಲಿ ಪಡೆಯ ಬಹುದಾಗಿದೆ.

ಇನ್ನು ಹೊರ ರಾಜ್ಯದಲ್ಲಿನ ಸಭೆ ಸಮಾರಂಭಗಳಿಗೂ ಪ್ರತ್ಯೇಕ ಭತ್ಯೆ ಇದ್ದು ಇವನ್ನೂ ಶಾಸಕರು ಬಿಲ್ ತೋರಿಸಿ ಪಡೆದುಕೊಳ್ಳಬಹುದಾಗಿದೆ. ಶಾಸಕರ ಅಧಿಕಾರಾವಧಿ ಮುಗಿದ ಬಳಿಕ ಇವರಿಗೆ ಪಿಂಚಣಿ ಸೌಲಭ್ಯವೂ ಇದ್ದು, ತಿಂಗಳಿಗೆ 50 ಸಾವಿರ ಫೆನ್ಷನ್‌ ಲಭ್ಯವಾಗುತ್ತದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಪ್ರಕಾಶ್ ಅಂಬೇಡ್ಕರ್‌ಗೆ ಎಐಎಂಐಎಂ ಬೆಂಬಲ: ಓವೈಸಿ

ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ವಂಚಿತ್ ಬಹುಜನ ಅಘಾಡಿ...

ಕೇಂದ್ರ ಸರ್ಕಾರ ಉದ್ಯಮಿಗಳ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ: ರಾಹುಲ್‌ ಗಾಂಧಿ ವಾಗ್ದಾಳಿ

"ಕೇಂದ್ರ ಸರ್ಕಾರ 20-25 ಉದ್ಯಮಿಗಳ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ. ಉದ್ಯಮಿಗಳ...

ನರೇಂದ್ರ ಮೋದಿಯೇ ಭಾರತದ ದೊಡ್ಡ ಸಮಸ್ಯೆ: ಎಂ ಕೆ ಸ್ಟಾಲಿನ್

ಪ್ರಸ್ತುತ ಭಾರತದ ದೊಡ್ಡ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಿದ್ದಾರೆ...

ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌.ಡಿ ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್ ಭೇಟಿ

ಪೊಲೀಸ್‌ ಅಧಿಕಾರಿ ಆಗಬೇಕೆಂಬ ರಾಜ್ಯದ ಯುವಜನರ ಭವಿಷ್ಯವನ್ನೇ ಹಾಳು ಮಾಡಿದ್ದ ಪಿಎಸ್‌ಐ...