ದೇಶದ ಹೆಸರನ್ನು ಬದಲಿಸಲು ಈ ದೇಶ ನಿಮ್ಮ ಅಪ್ಪನದ್ದಾ? ಬಿಜೆಪಿ ವಿರುದ್ಧ ಕೇಜ್ರಿವಾಲ್ ಆಕ್ರೋಶ

Date:

  • ಬಿಜೆಪಿಗೆ ಧೈರ್ಯವಿದ್ದರೆ ಇಂಡಿಯಾ ಹೆಸರನ್ನು ಬದಲಿಸಲಿ: ದೆಹಲಿ ಸಿಎಂ
  • ಛತ್ತೀಸ್‌ಘಡದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

“‘ದೇಶದ ಹೆಸರನ್ನು ಬದಲಿಸಲು ಈ ದೇಶ ನಿಮ್ಮ ಅಪ್ಪನದ್ದಾ? ಇದು 140 ಕೋಟಿ ಜನರಿಗೆ ಸೇರಿದ್ದು. ಬಿಜೆಪಿಗೆ ಧೈರ್ಯವಿದ್ದರೆ ಇಂಡಿಯಾ ಹೆಸರನ್ನು ಬದಲಿಸಲಿ” ಎಂದು ಬಿಜೆಪಿ ವಿರುದ್ಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

‘ಇಂಡಿಯಾ’ ಹೆಸರನ್ನು ಅಧಿಕೃತವಾಗಿ ‘ಭಾರತ’ ಎಂದು ಬದಲಿಸಲಾಗುತ್ತದೆ ಎಂಬ ಸುದ್ದಿಯ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕೇಜ್ರಿವಾಲ್, ತಾಕತ್ತಿದ್ದರೆ ಇಂಡಿಯಾ ಹೆಸರನ್ನು ಬದಲಿಸಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

ಛತ್ತೀಸ್‌ಘಡದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಕೇಜ್ರಿವಾಲ್, “ಇಂಡಿಯಾ ನಿಮ್ಮ ಅಪ್ಪನಿಗೆ ಸೇರಿದ್ದಾ? ಇದು 140 ಕೋಟಿ ಜನರಿಗೆ ಸೇರಿದ್ದು. ಇಂಡಿಯಾ ನಮ್ಮ ಹೃದಯಗಳಲ್ಲಿ ನೆಲೆಸಿದೆ, ಭಾರತ ಕೂಡ ನಮ್ಮ ಹೃದಯಗಳಲ್ಲಿ ನೆಲೆಸಿದೆ, ಹಿಂದೂಸ್ತಾನವೂ ನಮ್ಮ ಹೃದಯಗಳಲ್ಲಿ ನೆಲೆಸಿದೆ” ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

“ಕಳೆದ ವರ್ಷದವರೆಗೂ ಇಂಡಿಯಾ ಹೆಸರಿನಡಿಯಲ್ಲಿ ಮೋದಿ ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿತ್ತು. ಆದರೆ ಈಗ ವಿಪಕ್ಷಗಳ ಇಂಡಿಯಾ ಬಣ ರಚನೆಯಾದ ಬಳಿಕ ಇದ್ದಕ್ಕಿದ್ದಂತೆ ದೇಶದ ಹೆಸರನ್ನು ಬದಲಿಸುವ ಬಗ್ಗೆ ಮಾತನಾಡುತ್ತಿದೆ” ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಕಿಡಿಕಾರಿದ್ದಾರೆ.

“ಬಿಜೆಪಿಗೆ ಧೈರ್ಯವಿದ್ದರೆ ಇಂಡಿಯಾ ಹೆಸರನ್ನು ಬದಲಿಸಿ ಎಂದು ನಾನು ಅವರಿಗೆ ಸವಾಲು ಹಾಕಲು ಬಯಸುತ್ತೇನೆ” ಎಂದು ದಿಲ್ಲಿ ಸಿಎಂ ಗುಡುಗಿದರು.

ದೇಶದ 28 ವಿರೋಧ ಪಕ್ಷಗಳು ಮೈತ್ರಿಕೂಟ ರಚಿಸಲು ಒಂದುಗೂಡಿವೆ. ಇದಕ್ಕೆ ಐಎನ್‌ಡಿಐಎ ಎಂಬ ಹೆಸರು ಇಡಲಾಗಿದೆ. ಇದರಿಂದ ಬಿಜೆಪಿ ಸರ್ಕಾರ ಎಷ್ಟು ಸಿಟ್ಟಿಗೆದ್ದಿದೆ ಎಂದರೆ, ದೇಶದ ಹೆಸರನ್ನು ಭಾರತ ಎಂದು ಬದಲಿಸುತ್ತೇವೆ ಎಂದು ಅವರು ಹೇಳುತ್ತಿದ್ದಾರೆ. ನಾಳೆ, ವಿರೋಧ ಪಕ್ಷಗಳ ಮೈತ್ರಿಕೂಟವು ತಮ್ಮನ್ನು ಭಾರತ ಎಂದು ಕರೆದುಕೊಂಡರೆ, ನೀವು ದೇಶದ ಹೆಸರನ್ನು ಮತ್ತೆ ಬದಲಿಸುತ್ತೀರಾ? ಎಂದು ಕಿಡಿಕಾರಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರಾಗಿ ಸಚಿವರ ನೇಮಕ; ಎಂ ಬಿ ಪಾಟೀಲ್‌, ಜಾರ್ಜ್‌ಗಿಲ್ಲ ಜವಾಬ್ದಾರಿ

ಸಚಿವರ ತವರು ಜಿಲ್ಲೆ ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಗಳಿಗೆ ನೇಮಕ ಸಂಭಾವ್ಯ ಅಭ್ಯರ್ಥಿಗಳ...

ವಿಪಕ್ಷಗಳಿಂದ ನೀರಿನ ರಾಜಕಾರಣ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಕಾವೇರಿ ನೀರಿನ ವಿಚಾರದಲ್ಲಿ ವಿಪಕ್ಷಗಳ ಮುಖಂಡರಾದ ಬಿಎಸ್​ವೈ, ಬೊಮ್ಮಾಯಿ, ಹೆಚ್​ಡಿ ಕುಮಾರಸ್ವಾಮಿಯವರು...

ತಮಿಳುನಾಡಿಗೆ ನೀರು ಬಿಟ್ಟಿದ್ದೇ ಆದರೆ ನಮ್ಮ ನಡೆ ಬೇರೆ ಇರಲಿದೆ: ಕುಮಾರಸ್ವಾಮಿ ಎಚ್ಚರಿಕೆ

ತಮಿಳುನಾಡು ಕೇಳುವ ಮೊದಲೇ ನೀರು ಬಿಟ್ಟ ಸರ್ಕಾರ ತಮಿಳುನಾಡಿನವರು ಎರಡು ಬೆಳೆ ಬೆಳೆಯುತ್ತಾರೆ:...

ಹೊಸ ಸಂಸತ್ ಕಟ್ಟಡವನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎನ್ನಬೇಕು: ಜೈರಾಮ್ ರಮೇಶ್

ಹೊಸ ಸಂಸತ್ ಭವನದ ರಚನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್...