ಮಸೀದಿಗಳಲ್ಲಿ ಶಿವನ ವಿಗ್ರಹ ಹುಡುಕಬೇಡಿ: ​ಈಶ್ವರಪ್ಪ ವಿರುದ್ಧ ಮತ್ತೆ ಮಂಜುನಾಥ್ ವಾಗ್ದಾಳಿ

Date:

  • ‘ನಾನು ಶಿವಮೊಗ್ಗದ ಟಿಕೆಟ್‌ ಕೇಳುವುದೇ ತಪ್ಪೇ’
  • ‘ಪಕ್ಷ ಈಶ್ವರಪ್ಪ ಅವರಿಗೆ ಎಲ್ಲ ಅಧಿಕಾರ ನೀಡಿದೆ’

“ಎಲ್ಲ ಮಸೀದಿಗಳಲ್ಲೂ ಶಿವನ ವಿಗ್ರಹ ಹುಡುಕಬೇಡಿ. ಅಲ್ಪಸಂಖ್ಯಾತರ ಜೊತೆಗೆ ಸೌಹಾರ್ದತೆಯಿಂದ ಇರಬೇಕು. ಶಿವಮೊಗ್ಗದಲ್ಲಿ ಶಾಂತಿಯಿಂದ ಇರಬೇಕು ಎಂದು ಹೇಳುವುದೇ ತಪ್ಪೇ?” ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸ್ವಪಕ್ಷ ನಾಯಕ ಕೆ ಎಸ್‌ ಈಶ್ವರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ ಕೆಲ ದಿನಗಳಿಂದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಯನೂರು ಮಂಜುನಾಥ್ ಅವರು ಕೆ ಎಸ್‌ ಈಶ್ವರಪ್ಪ ಅವರ ಮೇಲೆ ಮುಗಿಬಿದ್ದಿದ್ದಾರೆ. ಟಿಕೆಟ್‌ ವಿಚಾರವಾಗಿ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಈಶ್ವರಪ್ಪ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನಾನು ಶಿವಮೊಗ್ಗ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಆಗಿದ್ದೇನೆ. 32 ವರ್ಷಗಳ ಕಾಲ ಕೆ ಎಸ್ ಈಶ್ವರಪ್ಪಗೆ ಪಕ್ಷ ಅವಕಾಶ ನೀಡಿದೆ. ಎಲ್ಲ ರೀತಿಯ ಅಧಿಕಾರವನ್ನು ಸಹ ಪಡೆದಿದ್ದಾರೆ. ಈಶ್ವರಪ್ಪ ತಮ್ಮ ಮಗನಿಗೆ ಟಿಕೆಟ್ ಕೇಳುತ್ತಿದ್ದಾರೆ. ಬೇರೆ ಮುಖಂಡರ ಹೆಸರನ್ನು ಸಹ ಅವರು ಪ್ರಸ್ತಾಪ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ” ಎಂದಿದ್ದಾರೆ.

“ಎಲ್ಲ ಮಸೀದಿಗಳಲ್ಲೂ ಶಿವನ ವಿಗ್ರಹ ಹುಡುಕಾಟ ಮಾಡಬೇಡಿ. ಅಲ್ಪಸಂಖ್ಯಾತರ ಜೊತೆಗೆ ಸೌಹಾರ್ದತೆಯಿಂದ ಇರಬೇಕು. ಶಿವಮೊಗ್ಗದಲ್ಲಿ ಶಾಂತಿಯಿಂದ ಇರಬೇಕು ಎಂದು ಹೇಳುವುದೇ ತಪ್ಪೇ? ನಾನು ಟಿಕೆಟ್‌ ನಿರೀಕ್ಷೆ ಮಾಡುತ್ತಿರುವುದೇ ತಪ್ಪಾ?” ಎಂದು ಪ್ರಶ್ನಿಸಿದ್ದಾರೆ.

“ಕಳೆದ 25 ವರ್ಷದ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ಎದುರಿಸಿದ್ದೇನೆ. ನನ್ನ ಬಗ್ಗೆ ಟೀಕೆ ಮಾಡುವವರು ತಮ್ಮ ಅರ್ಹತೆ ಬಗ್ಗೆ ತಿಳಿದುಕೊಳ್ಳಿ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

“ಮೊನ್ನೆಯ ದಿನ ಯುಗಾದಿಯ ಶುಭಾಶಯ ಕೋರಿ ಫ್ಲೆಕ್ಸ್ ಹಾಕಿದ್ದೆ. ನನ್ನ ನಿರೀಕ್ಷೆಗೂ ಮೀರಿ ಎಲ್ಲರ ಗಮನ ಸೆಳೆದಿದೆ. ಬಹಳಷ್ಟು ಜನ ಸ್ವಾಗತಿಸಿ, ನಗರಕ್ಕೆ ಶಾಂತಿ ಬೇಕು. ಹಿಂದೂ – ಮುಸ್ಲಿಂ ಮತ್ತು ಕ್ರೈಸ್ತರು ಸೇರಿದಂತೆ ಎಲ್ಲ ಧರ್ಮದವರು ಅದನ್ನು ಸ್ವಾಗತಿಸಿದ್ದಾರೆ” ಎಂದು ಹೇಳಿದ್ದಾರೆ.

“ವಾಸ್ತವಿಕತೆ ಹತ್ತಿರ ಇರೋ ಫ್ಲೆಕ್ಸ್, ಜನರ ನಾಡಿಮಿಡಿತದ ರೀತಿಯಲ್ಲಿ ಪ್ರಕಟ ಆಗಿದೆ. ಬಡವರ ಬದುಕು, ಶಿವಮೊಗ್ಗ ಜನರ ಸಾಮಾಜಿಕ ಜನರ ಸ್ವಾಸ್ಥ್ಯಕ್ಕಾಗಿ ಹೇಳಿದ್ದೇನೆ. ಅದು ಯಾವುದೋ ವ್ಯಕ್ತಿಗೆ ಹೇಳಿದ್ದಲ್ಲ. ಆದರೆ, ವ್ಯಕ್ತಿಗೆ ಹೇಳಿದಂತೆ ಭಾಸವಾಗಿದೆ. ಚುನಾವಣಾ ಹಿನ್ನೆಲೆ ಎಲ್ಲರ ಅನುಭವಕ್ಕೆ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.

“ಶಿವಮೊಗ್ಗದ ಶಾಂತಿ ಅಪಹಾಸ್ಯದ, ಮನೋರಂಜನೆ ವಸ್ತುವಾಗುತ್ತಿರುವುದು ಬೇಸರ ತರಿಸಿದೆ. ಕೆಲವರು ನನ್ನನ್ನು ನಿತ್ಯ ಸುಮಂಗಲಿಗೆ ಹೋಲಿಸಿದ್ದಾರೆ. ಯಾರು ನಿತ್ಯ ಸುಮಂಗಲಿ ಬಯಸಿ ಆಗುವುದಿಲ್ಲ, ಸಮಾಜ ಅವರನ್ನು ಹಾಗೆ ಮಾಡುತ್ತದೆ. ಜನ ಸಾಮಾನ್ಯರ ಬದುಕಿಗಾಗಿ ನಾನೋರ್ವ ಜನಪ್ರತಿನಿಧಿಯಾಗಿ ನಿತ್ಯ ಸುಮಂಗಲಿಯಾಗಲು ಸಿದ್ಧನಿದ್ದೇನೆ. ವಿದ್ಯಾರ್ಥಿ ಜೀವನದಲ್ಲೇ ಹೋರಾಟ ಮಾಡಿ, ಜೈಲಿಗೆ ಹೋದವನು ನಾನು. ನಾನೊಂದು ಟಿಕೆಟ್ ಕೇಳಿದರೆ, ಇಷ್ಟೊಂದು ಕೆಳಮಟ್ಟದ ಕಮೆಂಟ್‌ಗಳೇ” ಎಂದು ಪ್ರಶ್ನಿಸಿದ್ದಾರೆ.

“ನನಗೆ ಟಿಕೆಟ್ ಕೇಳುವ ಹಕ್ಕಿಲ್ಲವೇ? ಈ ಹಿಂದೆ ಹೊಸನಗರ ಕ್ಷೇತ್ರದಲ್ಲೂ ಸ್ಫರ್ದಿಸಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಬಳಿಕ ಪಕ್ಷ ಹೇಳಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇ. ಬಂಗಾರಪ್ಪನವರ ವಿರುದ್ಧ ಪಕ್ಷದಿಂದ ಸ್ಫರ್ಧಿಸಿ, ಲೋಕಸಭೆಗೆ ಹೋಗಿದ್ದೇ. ಪಕ್ಷ ಹೇಳಿದಂತೆ ಮಾಡಿದ್ದೇನೆ. ಬರೀ ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು, ಒಂದೇ ಕಡೇ ಗೂಟ ಹೊಡೆದುಕೊಂಡು ಕೂತಿಲ್ಲ. ಶಿವಮೊಗ್ಗ ನನಗೆ ಕಾರ್ಯಕ್ಷೇತ್ರ. ಇಲ್ಲೊಂದು ಅವಕಾಶ ಕೊಡಿ ಎಂದು ಕೇಳಿದ್ರೆ ಎಷ್ಟೊಂದು ಅಸಹಿಷ್ಣುತೆ” ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ | ದಿಗ್ಗಜರ ದಿಕ್ಕೆಡಿಸಿದ, ಅವಾಂತರಕಾರಿಗಳಿಗೆ ಮಣೆ ಹಾಕಿದ ಕ್ಷೇತ್ರ

ಕೆನರಾ ಕ್ಷೇತ್ರದ ಚುನಾವಣಾ ಇತಿಹಾಸದ ಮೇಲೆ ಕಣ್ಣುಹಾಯಿಸಿದರೆ ಪರಿಚಿತರು, ಪ್ರಸಿದ್ಧರು ತಿರಸ್ಕೃತರಾಗಿರುವ...

ಸರ್ಕಾರದ ಮೇಲೆ ಕಾರ್ಪೊರೇಟ್ ನಿಯಂತ್ರಣವಿದೆ; ಬಿಜೆಪಿ ಪ್ರಣಾಳಿಕೆಯನ್ನ ರೈತರು ನಂಬುವುದಿಲ್ಲ: ರಾಕೇಶ್ ಟಿಕಾಯತ್

2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ರೈತರು ನಂಬುವುದಿಲ್ಲ....

ಬೀದರ್‌ | ಬೃಹತ್‌ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ

ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಚಿವ ಈಶ್ವರ ಖಂಡ್ರೆ ಮಗ...

ರಾಜ್ಯದಲ್ಲಿ 20 ಕ್ಷೇತ್ರ ಗೆಲ್ಲುತ್ತೇವೆ; ಯಾವ ಅನುಮಾನವೂ ಇಲ್ಲ: ಡಿ ಕೆ ಶಿವಕುಮಾರ್‌ ವಿಶ್ವಾಸ

ಹಾಸನ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ ಈ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್...