ಚುನಾವಣಾ ಬಾಂಡ್ | ಅದಾನಿ ಗ್ರೂಪ್‌ ಜೊತೆ ನಂಟು; 4 ಕಂಪನಿಗಳಿಂದ ₹55 ಕೋಟಿ ಮೌಲ್ಯದ ಬಾಂಡ್‌ ಖರೀದಿ; ಬಿಜೆಪಿಗೆ ಸಿಂಹಪಾಲು

Date:

ಅದಾನಿ ಗ್ರೂಪ್‌ ಜೊತೆ ಸಂಬಂಧ ಹೊಂದಿರುವ ನಾಲ್ಕು ಕಂಪನಿಗಳು 2019ರ ಏಪ್ರಿಲ್‌ನಿಂದ 2023ರ ನವೆಂಬರ್‌ವರೆಗೆ ಒಟ್ಟು 55.4 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಅವುಗಳಲ್ಲಿ 42.4 ಕೋಟಿ ರೂ.ಗಳನ್ನು ಬಿಜೆಪಿ ನಗದೀಕರಿಸಿಕೊಂಡಿದೆ ಎಂಬುದು ಚುನಾವಣಾ ಆಯೋಗ ನೀಡಿರುವ ಮಾಹಿತಿಯಲ್ಲಿ ಗೊತ್ತಾಗಿದೆ.

ಈ ಬಾಂಡ್‌ಗಳನ್ನು ಬಿ.ಕೆ ಗೋಯೆಂಕಾ ಅವರ ABC ಇಂಡಿಯಾ ಲಿಮಿಟೆಡ್ ಮತ್ತು ವೆಲ್‌ಸ್ಪನ್ ಗ್ರೂಪ್‌ನ ಮೂರು ಅಂಗಸಂಸ್ಥೆಗಳು ಖರೀದಿಸಿವೆ.

ಬಾಂಡ್‌ಗಳನ್ನು ಖರೀದಿಸಿದ ಮೊದಲ ಅಂಗಸಂಸ್ಥೆ ವೆಲ್‌ಸ್ಪನ್ ಎಂಟರ್‌ಪ್ರೈಸಸ್ ಲಿಮಿಟೆಡ್. ಈ ಕಂಪನಿಯು ಎರಡು ಹಂತಗಳಲ್ಲಿ – 2019ರ ಏಪ್ರಿಲ್‌ (3 ಕೋಟಿ ರೂ.) ಮತ್ತು 2022ರ ನವೆಂಬರ್‌ನಲ್ಲಿ (10 ಕೋಟಿ ರೂ.) – ಒಟ್ಟು 13 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಕಂಪನಿಯು ಅದಾನಿ ಗ್ರೂಪ್‌ ಜೊತೆಗೆ ಸಂಪರ್ಕ ಹೊಂದಿದೆ. 2005 ರಲ್ಲಿ, ಅದಾನಿ ಗ್ರೂಪ್ ಜೊತೆ ಈ ಕಂಪನಿ ಜಂಟು ಉದ್ಯಮ ಆರಂಭಿಸಿದೆ. ವೆಲ್‌ಸ್ಪನ್ ನ್ಯಾಚುರಲ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಜೊತೆ ಅದಾನಿ ವೆಲ್‌ಸ್ಪನ್ ಎಕ್ಸ್‌ಪ್ಲೋರೇಶನ್ ಲಿಮಿಟೆಡ್ ಕಾರ್ಯನಿರ್ವಹಿಸುತ್ತಿದೆ.

ಪತ್ರಿಕಾ ಪ್ರಕಟಣೆಯ ಪ್ರಕಾರ, ಅದಾನಿ ವೆಲ್ಸ್‌ಪನ್ ಎಕ್ಸ್‌ಪ್ಲೋರೇಶನ್ ಲಿಮಿಟೆಡ್‌ನಲ್ಲಿ ಅದಾನಿ ಗ್ರೂಪ್ 65% ಷೇರುಗಳನ್ನು ಹೊಂದಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಗೌತಮ್ ಅದಾನಿ ಅಧ್ಯಕ್ಷ ಮತ್ತು ಅವರ ಮಗ ರಾಜೇಶ್ ಅದಾನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಏತನ್ಮಧ್ಯೆ, ಅದಾನಿ ವೆಲ್‌ಸ್ಪನ್ ಎಕ್ಸ್‌ಪ್ಲೋರೇಶನ್ ಲಿಮಿಟೆಡ್‌ನಲ್ಲಿ ವೆಲ್‌ಸ್ಪನ್ ನ್ಯಾಚುರಲ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಮೂಲಕ ವೆಲ್‌ಸ್ಪನ್ ಗ್ರೂಪ್ 35% ಷೇರುಗಳನ್ನು ಹೊಂದಿದೆ. ಇದು ವೆಲ್‌ಸ್ಪನ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ.

ಎರಡನೇ ಅಂಗಸಂಸ್ಥೆ, ವೆಲ್‌ಸ್ಪನ್ ಕಾರ್ಪೊರೇಟ್ ಲಿಮಿಟೆಡ್ 27 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಅದು, 2019ರ ಮೇನಲ್ಲಿ 5 ಕೋಟಿ ರೂ., 2020ರ ಜನವರಿಯಲ್ಲಿ 2 ಕೋಟಿ ರೂ., 2020ರ ಅಕ್ಟೋಬರ್‌ನಲ್ಲಿ 7 ಕೋಟಿ ರೂ., 2022ರ ಏಪ್ರಿಲ್‌ನಲ್ಲಿ 3 ಕೋಟಿ ರೂ. ಹಾಗೂ 2022ರ ನವೆಂಬರ್‌ನಲ್ಲಿ 10 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿ ಮಾಡಿದೆ.

ಮೂರನೇ ಅಂಗಸಂಸ್ಥೆ, ವೆಲ್‌ಸ್ಪನ್ ಲಿವಿಂಗ್ ಲಿಮಿಟೆಡ್‌ ಇದು ಈ ಹಿಂದೆ ವೆಲ್‌ಸ್ಪನ್ ಇಂಡಿಯಾ ಲಿಮಿಟೆಡ್ ಆಗಿತ್ತು. ಈ ಕಂಪನಿಯು 2022ರ ನವೆಂಬರ್‌ನಲ್ಲಿ 10 ಕೋಟಿ ರೂ. ಮತ್ತು 2023ರ ನವೆಂಬರ್‌ನಲ್ಲಿ 5 ಕೋಟಿ ರೂ. ಮೌಲ್ಯದ (ಒಟ್ಟು 15 ಕೋಟಿ ರೂ.) ಬಾಂಡ್‌ಗಳನ್ನು ಖರೀದಿಸಿದೆ.

ಒಟ್ಟಾರೆಯಾಗಿ, ವೆಲ್‌ಸ್ಪನ್‌ನ ಮೂರು ಅಂಗಸಂಸ್ಥೆಗಳು 55 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿವೆ.

ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆಗಳ ಸಮಯದಲ್ಲಿಯೇ 2022ರ ನವೆಂಬರ್‌ಲ್ಲಿ ಈ ಸಂಸ್ಥೆಗಳು 30 ಕೋಟಿ ರೂ.ಗಳ ಬಾಂಡ್‌ಗಳನ್ನು ಖರೀದಿಸಿವೆ.

2019 ರ ಲೋಕಸಭೆ ಚುನಾವಣೆಯ ಸಮಯದಲ್ಲಿ 8 ಕೋಟಿ ರೂ., 2020ರ ದೆಹಲಿ ವಿಧಾನಸಭಾ ಚುನಾವಣೆಯ ವೇಳೆ 2 ಕೋಟಿ ರೂ. ಹಾಗೂ 2020ರ ಬಿಹಾರ ವಿಧಾನಸಭಾ ಚುನಾವಣೆ ವೇಳೆ 7 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿವೆ.

2023ರ ನವೆಂಬರ್‌ನಲ್ಲಿ ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ನಡೆದ ಚುನಾವಣೆಗಳ ಸಂದರ್ಭದಲ್ಲಿ 5 ಕೋಟಿ ರೂ.ಗಳ ಬಾಂಡ್‌ಗಳನ್ನೂ ಖರೀಸಿದಿವೆ. ಇನ್ನು, ಚುನಾವಣೆ ನಡೆಯದ ಸಮಯದಲ್ಲಿ 2022ರ ಏಪ್ರಿಲ್‌ನಲ್ಲಿ 3 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿ ಮಾಡಿವೆ.

ಈ ವೆಲ್‌ಸ್ಪನ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ವೆಲ್‌ಸ್ಪನ್ ಕಾರ್ಪರೇಟ್ ಲಿಮಿಟೆಡ್ ಖರೀದಿಸಿದ ಎಲ್ಲ ಎಲೆಕ್ಟೋರಲ್ ಬಾಂಡ್‌ಗಳ ಪೈಕಿ 8 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ ನಗದೀಕರಿಸಿದೆ. ಇನ್ನು, 2023ರ ತೆಲಂಗಾಣ ಚುನಾವಣೆಯ ವೇಳೆ 5 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಗದೀಕರಿಸಿದೆ.

ಇನ್ನುದಳಿದಂತೆ, 2020ರ ಜನವರಿ ಮತ್ತು 2022ರ ನವೆಂಬರ್ ನಡುವೆ ಖರೀದಿಯಾಗಿರುವ 42 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಬಿಜೆಪಿ ಪಡೆದುಕೊಂಡಿದ್ದು, ನಗದೀಕರಿಸಿಕೊಂಡಿದೆ.

ಅದಾನಿ ಗ್ರೂಪ್‌ಗೆ ಜೊತೆ ಸಂಪರ್ಕ ಹೊಂದಿದ್ದು, ಚುನಾವಣಾ ಬಾಂಡ್‌ಗಳನ್ನು ಖರೀದಿಸಿರುವ ನಾಲ್ಕನೇ ಕಂಪನಿ ‘ಎಬಿಸಿ ಇಂಡಿಯಾ ಲಿಮಿಟೆಡ್’. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ತನ್ನ ಪ್ರಧಾನ ಕಚೇರಿ ಯೊಂದಿರುವ ಈ ಕಂಪನಿ, 2019ರ ಏಪ್ರಿಲ್‌ನಲ್ಲಿ 40 ಲಕ್ಷ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಅದನ್ನು ಬಿಜೆಪಿ ನಗದೀಕರಿಸಿಕೊಂಡಿದೆ.

ಈ ವರದಿ ಓದಿದ್ದೀರಾ?: ಸುಪ್ರೀಂ ಕೋರ್ಟ್ ಛೀಮಾರಿ ನಂತರ ಚುನಾವಣಾ ಬಾಂಡ್‌ಗಳ ಎಲ್ಲ ಮಾಹಿತಿ ಸಲ್ಲಿಸಿದ ಎಸ್‌ಬಿಐ

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಫೈಲಿಂಗ್‌ಗಳ ಪ್ರಕಾರ, ಅದಾನಿ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಎಬಿಸಿ ಇಂಡಿಯಾದಲ್ಲಿ 2016ರ ಮಾರ್ಚ್‌ನಿಂದ 2023 ಸೆಪ್ಟೆಂಬರ್‌ವರೆಗೆ 1.2% ಶೇರ್‌ಅನ್ನು ಖರೀದಿಸಿದೆ. ಆ ಕಂಪನಿಯಲ್ಲಿದ್ದ ತನ್ನ ಪಾಲನ್ನು ಅದಾನಿ ಪ್ರಾಪರ್ಟೀಸ್ 2023ರ ಡಿಸೆಂಬರ್‌ನಲ್ಲಿ ಮಾರಾಟ ಮಾಡಿದೆ.

“ನಾವು ನಿಮ್ಮ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ಅದಾನಿ ಗ್ರೂಪ್‌ ಯಾವುದೇ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಲು ನೇರವಾಗಿ ಅಥವಾ ಪರೋಕ್ಷವಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿಲ್ಲ” ಎಂದು ಅದಾನಿ ಗ್ರೂಪ್‌ನ ವಕ್ತಾರರು ಹೇಳಿರುವುದಾಗಿ ನ್ಯೂಸ್‌ಲ್ಯಾಂಡ್ರಿ ವರದಿ ಮಾಡಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ | ಸಚಿವ ಬಿ.ನಾಗೇಂದ್ರ ವಜಾಗೊಳಿಸಿ: ಪ್ರಲ್ಹಾದ್‌ ಜೋಶಿ ಆಗ್ರಹ

ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ...

ಪಪುವಾ ನ್ಯೂಗಿನಿಗೆ 1 ಮಿಲಿಯನ್ ಡಾಲರ್ ನೆರವು ಘೋಷಿಸಿದ ಭಾರತ

ಬೃಹತ್‌ ಪ್ರಮಾಣದ ಭೂಕುಸಿತದಿಂದ ಅಪಾರ ಪ್ರಮಾಣದ ಸಾವು ನೋವಿನ ನಷ್ಟ ಅನುಭವಿಸಿರುವ...

ಪಠ್ಯಪುಸ್ತಕ ಪರಿಷ್ಕರಣೆ | ಕೆಲವು ಪದ ಮತ್ತು ವಾಕ್ಯಗಳಲ್ಲಷ್ಟೇ ಬದಲಾವಣೆ: ಸಚಿವ ಮಧು ಬಂಗಾರಪ್ಪ

"ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಕ್ಕಳು ಯಾವುದೇ ತೊಂದರೆ ಇಲ್ಲದಂತೆ ತೊಡಗಿಸಿಕೊಳ್ಳಲು...