ಪರವಾನಗಿ ಪಡೆದ ಪಿಸ್ತೂಲ್‌ಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿ: ಪೊಲೀಸ್ ಆಯುಕ್ತರ ಆದೇಶ

Date:

  • ಏಪ್ರಿಲ್‌ 10ರೊಳಗೆ ಶಸ್ತ್ರಾಸ್ತ್ರಗಳನ್ನು ತಮ್ಮ ವ್ಯಾಪ್ತಿಯ ಠಾಣೆಗೆ ಒಪ್ಪಿಸಿ
  • ಮೇ 16ರ ಬಳಿಕ ಶಸ್ತ್ರಾಸ್ತ್ರಗಳನ್ನು ವಾಪಸು ಪಡೆದುಕೊಳ್ಳಲು ಸೂಚನೆ

ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ರಾಜಧಾನಿಯಲ್ಲಿ ಪರವಾನಗಿ ಹೊಂದಿದ ಪಿಸ್ತೂಲ್, ಶಸ್ತ್ರಾಸ್ತ್ರ(ಆಯುಧಗಳ) ಬಳಕೆಗೆ ನಿಷೇಧ ಹೇರಲಾಗಿದೆ.

ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಆಯುಕ್ತರ ಆದೇಶದಂತೆ ಬೆಂಗಳೂರಿನಲ್ಲಿ ಲೈಸೆನ್ಸ್ ಹೊಂದಿರುವ ಶಸ್ತ್ರಾಸ್ತ್ರಗಳ ಬಳಕೆಗೆ ನಿರ್ಬಂಧ ಹೇರಿದ್ದು, ಏಪ್ರಿಲ್ 10ರೊಳಗೆ ಶಸ್ತ್ರಾಸ್ತ್ರಗಳನ್ನು ತಮ್ಮ ವ್ಯಾಪ್ತಿಯ ಠಾಣೆಗೆ ಒಪ್ಪಿಸಲು ಸೂಚಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಾಗೆಯೇ ಮೇ 16ರ ಬಳಿಕ ಈ ಶಸ್ತ್ರಾಸ್ತ್ರಗಳನ್ನು ಮರಳಿ ಪಡೆದುಕೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯಗಳು ಸಭೆ ಸಮಾರಂಭಗಳ ಸಂದರ್ಭದಲ್ಲಿ ಗುಂಪುಘರ್ಷಣೆ, ಮದ್ಯದ ಅಮಲಿನ ಓಡಾಟ, ಗಲಭೆ, ಹೊಡೆದಾಟಗಳಂತ ಘಟನೆಗಳು ದಾಖಲಾಗುವ ಸಾಧ್ಯತೆ ಇದೆ. ಈ ವೇಳೆ ಶಸ್ತ್ರಾಸ್ತ್ರ ಹೊಂದಿರುವವರು ಉದ್ವೇಗದಲ್ಲಿ ಅವುಗಳ ಬಳಕೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆಯೇ ನಗರ ವ್ಯಾಪ್ತಿಯಲ್ಲಿ ರೌಡಿ ಗುಂಪುಗಳ ಅಟಾಟೋಪಗಳ ಸಾಧ್ಯತೆಯೂ ಇದ್ದು, ಇವರಿಂದ ಜನಸಾಮಾನ್ಯರಿಗೆ ತೊಂದರೆಯಾಗುವ ಸಂಭವವವೂ ಹೆಚ್ಚಾಗಿರುತ್ತದೆ.

ಈ ಎಲ್ಲ ಕಾರಣಗಳಿಂದ ಶಸ್ತ್ರಾಸ್ತ್ರ ನಿಷೇಧದ ಆದೇಶ ಮಾಡಲಾಗಿದೆ ಎಂದು ಆಯುಕ್ತರು ಮಾಹಿತಿ ಒದಗಿಸಿದ್ದಾರೆ.

ಉಳಿದಂತೆ ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಇತರೆಡೆಯಲ್ಲೂ ಇದೇ ಮಾದರಿ ಆದೇಶವನ್ನು ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿದ್ದಾರೆ. ಜಿಲ್ಲಾವಾರು ಶಸ್ತ್ರಾಸ್ತ್ರ ಹೊಂದಿರುವವರು, ಅಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಗೆ ತಮ್ಮ ಬಂದೂಕು, ಕೋವಿಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ. ಭದ್ರತಾ ಸೇವೆ ಒದಗಿಸುವ, ಬ್ಯಾಂಕ್ ಎಟಿಎಂ ಸೇವೆ ನೀಡುವ ಕಾಯಕದಲ್ಲಿರುವವರು ತಮ್ಮ ಶಸ್ತ್ರಾಸ್ತ್ರಗಳ ಮಾಹಿತಿ ಒದಗಿಸಿ ಅವನ್ನು ಬಳಸಿಕೊಳ್ಳಲು ಈ ಆದೇಶದಲ್ಲಿ ವಿನಾಯ್ತಿ ನೀಡಲಾಗಿದೆ.

ಅಂದಹಾಗೆ ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಮೆ10 ರಂದು ನಡೆಯಲಿದ್ದು ಮೇ13ರಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಶಸ್ತ್ರಾಸ್ತ್ರ ಬಳಕೆಗೆ ಅನುಮತಿ
ಕರ್ನಾಟಕವನ್ನೂ ಒಳಗೊಂಡಂತೆ ದೇಶದ ಹಲವೆಡೆ ಶಸ್ತ್ರಾಸ್ತ್ರ ಬಳಕೆಗೆ ಸರ್ಕಾರ ಅನುಮತಿ ನೀಡಿದೆ.

ಸ್ವಯಂ ಭದ್ರತೆ, ಕಾಡುಪ್ರಾಣಿಗಳಿಂದ ರಕ್ಷಣೆ, ಕೃಷಿ ಚಟುವಟಿಕೆ ರಕ್ಷಣೆ ಹಾಗೂ ದಟ್ಟ ಕಾಡಿನೊಳಗಿನ ಮತ್ತು ಅನಿವಾರ್ಯ ಭದ್ರತೆ ಬೇಡುವ ಸ್ಥಳಗಳಲ್ಲಿನ ಜನರಿಗೆ ಭದ್ರತೆ ಸಲುವಾಗಿ ಆಯುಧ, ಶಸ್ತ್ರಾಸ್ತ್ರಗಳನ್ನು ಹೊಂದಿಕೊಳ್ಳಲು ಅವಕಾಶ ಕಲ್ಪಿಸಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಂದ ಪರವಾನಿಗೆ ಪಡೆದುಕೊಂಡು ನಿಯಮಾನುಸಾರ ಸೀಮಿತ ಶಸ್ತ್ರಾಸ್ತ್ರಗಳನ್ನು ಭಾರತೀಯ ನಾಗರಿಕರು ಪಡೆದುಕೊಳ್ಳಬಹುದಾಗಿದೆ. ರಾಜ್ಯದ ಕೊಡಗು ಜಿಲ್ಲೆಯಲ್ಲಿ ಈ ವಿಚಾರದಲ್ಲಿ ಸಡಿಲಿಕೆ ನೀಡಲಾಗಿದ್ದು, ವಂಶಪಾರಂಪರ್ಯವಾಗಿ ಬಂದಿರುವ ಶಸ್ತ್ರಾಸ್ತ್ರಗಳನ್ನು ವರ್ಷಪೂರ್ತಿ ಹೊಂದಿಕೊಳ್ಳಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.

ಚುನಾವಣೆ ಸಂದರ್ಭ ಹಾಗೂ ಸರ್ಕಾರ ಹೊರಡಿಸುವ ತುರ್ತು ಸಂದರ್ಭಗಳಲ್ಲಿ ಇವರೂ ತಮ್ಮ ಆಯುಧಗಳನ್ನು ಪೊಲೀಸರಿಗೆ ಒಪ್ಪಿಸಬೇಕಾಗುತ್ತದೆ.

ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ

ಕಾಲಾಂತರದಲ್ಲಾಗಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ.

ನಿಷೇಧಿತ ಶಸ್ತ್ರಾಸ್ತ್ರಗಳನ್ನು ತಯಾರಿಸುವವರು ಹಾಗೂ ಅವುಗಳನ್ನು ಹೊಂದಿರುವವರು ವಿರುದ್ಧ ಕ್ರಮಕ್ಕೂ ಚಿಂತನೆ ನಡೆಸಲಾಗಿದೆ. ಅಂತಹವರು ಜೀವನಪೂರ್ತಿ ಜೈಲಿನಲ್ಲಿ ಕಳೆಯುವಂತಹ ಶಿಕ್ಷೆ ವಿಧಿಸಲು ತಿದ್ದುಪಡಿ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಹೊಸ ನಿಯಮ ಜಾರಿಯಾದಲ್ಲಿ ಲೈಸನ್ಸ್ ಇರುವ, ಒಂದಕ್ಕಿಂತ ಹೆಚ್ಚು ಬಂದೂಕು ಹೊಂದಿಕೊಳ್ಳುವುದನ್ನು ನಿಷೇಧಿಸಲಾಗುವುದು. ಹಾಗೆಯೇ ಎರಡಕ್ಕಿಂತ ಹೆಚ್ಚು ಬಂದೂಕು ಹೊಂದಿರುವವರು ಮೂರನೇ ಅಥವಾ ಹೆಚ್ಚುವರಿ ಬಂದೂಕನ್ನು ಸಂಬಂಧಪಟ್ಟ ಸರ್ಕಾರಿ ಕಚೇರಿಗೆ ಒಪ್ಪಿಸಬೇಕು ಎಂದು ಕರಡು ಮಸೂದೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? : ಮಾದರಿ ನೀತಿ ಸಂಹಿತೆ ಜಾರಿ ವೇಳೆ ಯಾವುದಕ್ಕೆ ಅನುಮತಿ, ಯಾವುದಕ್ಕೆ ನಿರಾಕರಣೆ?

ಇವುಗಳ ಜೊತೆಗೆ ಶಸ್ತ್ರಾಸ್ತ್ರಗಳು ಹಾಗೂ ಅವುಗಳ ಬಿಡಿಭಾಗಗಳನ್ನು ಅಕ್ರಮವಾಗಿ ಸಾಗಣೆ ಮಾಡುವುದು, ಸಂಘಟಿತ ಅಪರಾಧವಾಗಲಿದೆ.

ಉತ್ಸವ ಮತ್ತಿತರ ಆಚರಣೆ ಸಂದರ್ಭದಲ್ಲಿ ಗುಂಡು ಹಾರಿಸುವುದನ್ನು ನಿಷೇಧಿಸುವಂತಹ ಅಂಶಗಳೂ ಸೇರಿವೆ ಎಂದು ಮೂಲಗಳು ಹೇಳಿವೆ. ಕೇಂದ್ರ ಸರ್ಕಾರ ಮಾಹಿತಿ ಪ್ರಕಾರ ದೇಶದಲ್ಲಿ 35 ಲಕ್ಷ ಲೈಸನ್ಸ್ ಹೊಂದಿರುವ ಬಂದೂಕುಗಳಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ ಬಿಜೆಪಿಯಲ್ಲಿ ಯೋಗಿ-ಮೌರ್ಯ ನಡುವೆ ಗುದ್ದಾಟ; ಮೋದಿ-ಶಾ ಚರ್ಚೆ

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ತೀರಾ ಕಳಪೆ ಪ್ರದರ್ಶನ ನೀಡಿದೆ....

ಕನ್ನಡಿಗರಿಗೆ ಉದ್ಯೋಗ | ‘ಅಸ್ತು’ ಎಂದು ಹೆಜ್ಜೆ ಇಟ್ಟ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’: ವಿಜಯೇಂದ್ರ ವ್ಯಂಗ್ಯ

ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ?...

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಗೆ ತಡೆ; ಯೂ-ಟರ್ನ್‌ ಸರ್ಕಾರ ಎಂದ ಬಿಜೆಪಿ

ಖಾಸಗಿ ವಲಯದ ಕಂಪನಿಗಳು, ಸಂಸ್ಥೆಗಳಲ್ಲಿ ಕನ್ನಡಿಗರಿಗೆ 75% ಮೀಸಲಾತಿ ಒದಗಿಸುವ ಮಸೂದೆಯನ್ನು...

‘ಬಡವರ ವಿರುದ್ಧ ಬುಲ್ಡೋಜರ್ ಹರಿಸಿದ್ದೇ ಬಿಜೆಪಿಗೆ ಮುಳುವಾಯಿತು’; ಬಿಜೆಪಿ ಮಿತ್ರ ಪಕ್ಷದ ಟೀಕೆ

ಬಡವರ ವಿರುದ್ಧ ಬುಲ್ಡೋಜರ್ ಹರಿಸಿದ್ದೇ ಬಿಜೆಪಿಗೆ ಮುಳುವಾಯಿತು ಎಂದು ಉತ್ತರಪ್ರದೇಶದ ಯೋಗಿ...