ದಲಿತ ಸಂಘರ್ಷ ಸಮಿತಿಯ ಪ್ರಬುದ್ಧ ನಡೆ

Date:

ಚುನಾವಣೆಗೂ ಒಂದು ವಾರ ಮುಂಚೆ ಒಳಮೀಸಲಾತಿ ಜಾರಿ ಎಂಬ ಸುಳ್ಳು ಹಬ್ಬಿಸಿದ ಬಿಜೆಪಿಯ ಬಣ್ಣವನ್ನು ದಸಂಸ ಬಯಲು ಮಾಡಿದೆ. ಪರಿಶಿಷ್ಟರ ಮೀಸಲು ಹೆಚ್ಚಳವೆಂಬ ಬೃಹನ್ನಾಟಕದ ಗಂಟು ಮೂಟೆ ಕಟ್ಟಿಸಿದೆ

ಬುದ್ಧ, ಬಸವ, ಅಂಬೇಡ್ಕರ್ ಅದರ ಗುರುಗಳು. ಶಿಕ್ಷಣ, ಸಂಘಟನೆ, ಹೋರಾಟ ಅದರ ಮಂತ್ರಗಳು. ಸಮಸ್ತ ಮಾನವತಾವಾದಿಗಳೆಲ್ಲರೂ ಅದಕ್ಕೆ ಆದರ್ಶ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನವೇ ಅದರ ಪಥ. ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವವೇ ಅದರ ಗುರಿ. ಅದುವೇ ದೇಶ ಕಂಡಂತಹ ಶಕ್ತಿಶಾಲಿ ಚಳವಳಿ ದಲಿತ ಸಂಘರ್ಷ ಸಮಿತಿ.

1970 ರ ದಶಕದಿಂದಲೂ ತನ್ನದೇ ಆದ ಸಂಘಟನಾ ಶಕ್ತಿಯನ್ನು ಹೊಂದಿರುವ ದಲಿತ ಸಂಘರ್ಷ ಸಮಿತಿಯು ಅಮೆರಿಕಾದ ಬ್ಲಾಕ್ ಪ್ಯಾಂಥರ್ಸ್ ಹಾಗೂ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ನಿಂದ ಪ್ರಭಾವ ಹೊಂದಿತಾದರೂ ಆದಿಕರ್ನಾಟಕ, ಆದಿದ್ರಾವಿಡ ಚಳವಳಿಯಾದಿಯಾಗಿ ತನ್ನದೇ ಆದಂತಹ ವಿಶಿಷ್ಟ ಅಸ್ಮಿತೆಯನ್ನು ಕಂಡುಕೊಂಡಿದೆ. ದಲಿತ ಸಂಘರ್ಷ ಸಮಿತಿಗೆ ದುಡಿದ ಜೀವಗಳು ಲೆಕ್ಕಕ್ಕಿಲ್ಲ. ಅದರ ಸಂಸ್ಥಾಪಕರು ಹಚ್ಚಿಟ್ಟ ಹೋರಾಟದ ಹಣತೆಯನ್ನು ಆರಿಸದಂತೆ ಇಂದಿಗೂ ಕಾಪಿಟ್ಟುಕೊಂಡು ಬರುತ್ತಿದೆ. ಇಂದು ದಲಿತ ಸಂಘರ್ಷ ಸಮಿತಿಯನ್ನು ಮುನ್ನಡೆಸುವ ಪಣ ತೊಟ್ಟು ಒಟ್ಟಾಗಿರುವ 14 ನಾಯಕರೂ, ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿದ ಮತ್ತು ದುಡಿಯುತ್ತಿರುವ ಸಮಸ್ತರೂ ಸಹ ದೇಶದ ಪ್ರಗತಿ ಬಯಸುವವರೇ. ಎಲೆಮರೆ ಕಾಯಿಗಳಂತೆ ದಸಂಸ ಆಶಯಗಳ ಪರವಾಗಿ ಅಲ್ಲೆಲ್ಲೋ ದುಡಿಯುತ್ತಿರುವ ದಲಿತ ಸಂಘಟನೆಗಳೂ ಸಹ ಅದರ ಕುಟುಂಬವೇ.

ದಲಿತ ಸಂಘರ್ಷ ಸಮಿತಿಯು ಹುಟ್ಟಿದಾಗಿನಿಂದಲೂ ದೇಶದ-ನಾಡಿನ ಸಂಕಷ್ಟಕ್ಕೆ ಎಂದಿಗೂ ಬೆನ್ನು ಮಾಡಿಲ್ಲ. ಗುಂಡುಗಳಿಗೆ ಗುಂಡಿಗೆಯೊಡ್ಡಿ, ಹೆದರಿಸುವವರಿಗೆ ಎದೆಯೊಡ್ಡಿ, ಒಡೆದಾಳುವವರಿಗೆ ಒಗ್ಗಟ್ಟಿನಿಂದ ಪಾಠ ಕಲಿಸಿದೆ. ಕೋಮುವಾದಿ, ಜಾತಿವಾದಿ, ಮಹಿಳಾ ವಿರೋಧಿಗಳ ಚಳಿ ಬಿಡಿಸುವಂತೆ ಸಾಂವಿಧಾನಿಕವಾಗಿಯೇ ಹೋರಾಟ ಮಾಡಿದ್ದು ಇತಿಹಾಸ. ದಲಿತರ ಮೇಲೆ ಸತತವಾಗಿ ನಡೆಯುವ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಲೇ ತಾಯ್ನಾಡಿಗೆ ಬಂದೊದಗಿದ ಸಂಕಷ್ಟದ ವಿರುದ್ಧವೂ ಹೋರಾಡಿರುವುದು ನಿಜಕ್ಕೂ ಶ್ಲಾಘನೀಯ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೀಗಿರುವಾಗ 2014ರಲ್ಲಿ ಒಕ್ಕೂಟ ಸರ್ಕಾರ ರಚಿಸಿದ ಬಿಜೆಪಿಯು ಭಾರತದ ಸಂವಿಧಾನದ ಜೀವಾಳವಾದ ಬಂಧುತ್ವವನ್ನೇ ಬುಡಮೇಲು ಮಾಡುವಂತಹ ಕೃತ್ಯಗಳಿಗೆ ಬಹಿರಂಗವಾದ ಕುಮ್ಮಕ್ಕು ನೀಡಿತು. ಪ್ರಜಾಪ್ರಭುತ್ವದ ಅಂಗಗಳನ್ನೆಲ್ಲ ಒಂದೊಂದಾಗಿ ನುಂಗಿ ಜೀರ್ಣಿಸಿಕೊಳ್ಳಲು ಆರಂಭವಾಯಿತು. ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂಬ ಅಹಂಕಾರದ ಮಾತುಗಳನ್ನಾಡಿತು. ಇಂದಿಗೂ ಈ ವಾಮನ ಪಾದ ಭಾರತವನ್ನಾವರಿಸಿದೆ.

ಈ ಮಧ್ಯೆ ಅಸಂವಿಧಾನಿಕ ನಡೆಯಿಂದಾಗಿ ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಕನ್ನಡದ ಜನ ಬಹಳ ಹತ್ತಿರದಿಂದ ಆರ್ ಎಸ್ ಎಸ್ – ಬಿಜೆಪಿ ಕೋಮುವಾದದ ನರಕವನ್ನು ಕಂಡರು. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಯುವಜನತೆ ಎಲ್ಲರೂ ಕಣ್ಣೀರಿನಲ್ಲಿ ಕೈತೊಳೆಯುವಂತಾಯಿತು.

ಇಂತಹ ಭೀಬತ್ಸ ಸನ್ನಿವೇಶವು ನಮ್ಮ ನಾಡಿಗೆ ಎದುರಾದಾಗ ಆರ್‌ಎಸ್‌ಎಸ್-ಬಿಜೆಪಿಗೆ ತಕ್ಕ ಪಾಠ ಕಲಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ ದಲಿತ ಸಂಘರ್ಷ ಸಮಿತಿಯ ನಾಯಕರು 2021 ರಲ್ಲಿಯೇ ಒಗ್ಗಟ್ಟಿನ ಮಂತ್ರ ಜಪಿಸಿದರು. ಸತತ ಎರಡು ವರ್ಷಗಳ ಪ್ರಯತ್ನದಿಂದಾಗಿ 10 ಸಂಘಟನೆಗಳ 14 ನಾಯಕರು ಹಾಗೂ ಅವರ ಜೊತೆ ಸಾವಿರಾರು ಸಮಾನ ಮನಸ್ಕರು ಜೊತೆಗೂಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನ ಡಿಸೆಂಬರ್ 6, 2022 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಅಡಿಯಲ್ಲಿ “ದಲಿತರ ಸಾಂಸ್ಕೃತಿಕ ಪ್ರತಿರೋಧ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಎರಡು ತಿಂಗಳುಗಳ ಕಾಲ ಈ ಸಮಾವೇಶಕ್ಕೆ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಲಾಯಿತು.

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಸುಮಾರು 500ಕ್ಕೂ ಹೆಚ್ಚು ಪೋಸ್ಟರ್ 50ಕ್ಕೂ ಹೆಚ್ಚು ವಿಡಿಯೋ 5 ಲಕ್ಷ ಕರಪತ್ರದ ಮೂಲಕ ಪ್ರಚಾರ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗಳಾದ ರಮಾ ಅಂಬೇಡ್ಕರ್ ಅವರು ಉದ್ಘಾಟಿಸಿದರು. ನಾಡಿನ ಹಲವು ವಿದ್ವಾಂಸರು ಭಾಗವಹಿಸಿದ್ದರು. ಕರ್ನಾಟಕದಾದ್ಯಂತ 5 ಲಕ್ಷಕ್ಕೂ ಹೆಚ್ಚು ಜನ ಈ ಸಮಾವೇಶಕ್ಕೆ ಸಾಕ್ಷಿಯಾದರು. ಈ ವೇದಿಕೆಯಿಂದ ಮೋದಿ ನೇತೃತ್ವದ ಒಕ್ಕೂಟ ಸರ್ಕಾರಕ್ಕೆ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ದಸಂಸ ಅಂದೇ ಸವಾಲೊಡ್ಡಿತ್ತು. ಖಡಾಖಂಡಿತವಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ಪಣ ತೊಟ್ಟಿತ್ತು.
ಅಲ್ಲಿಂದ ದಸಂಸ ನಿಲ್ಲಲೇ ಇಲ್ಲ. ಸತತ ಕಾರ್ಯಕ್ರಮ, ಶಿಬಿರ ಮತ್ತು ಸಭೆಗಳ ಮೂಲಕ ದಲಿತರ ಮನದೊಂದಿಗೆ ನಿತ್ಯ ಸಂಪರ್ಕ ಬೆಳೆಸಿತು. ಬಿಜೆಪಿಯ ದುರಾಡಳಿತವನ್ನು ಮನೆ ಮನೆಗೆ ತಲುಪಿಸಿತು. ಇಡೀ ದೇಶದ ಜನರನ್ನು ಪ್ರಪಾತಕ್ಕೆ ತಳ್ಳಿರುವ ಬಿಜೆಪಿ ಸರ್ಕಾರವನ್ನು ತೊಲಗಿಸುವುದೇ ನಮ್ಮ ಮುಂದಿನ ದಾರಿ ಎಂದು ಘಂಟಾಘೋಷವಾಗಿ ಕೂಗಿ ಕೂಗಿ ಹೇಳಿತು.

ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯ ಸೋಲಿಸಲು ಕಾಂಗ್ರೆಸ್‌ಗೆ ಷರತ್ತುಬದ್ಧ ಬೆಂಬಲ ಘೋಷಿಸಿದ ಏಕೈಕ ಸಂಘಟನೆ ದಲಿತ ಸಂಘರ್ಷ ಸಮಿತಿ. 2023ರ ಮೇ 10ರ ಚುನಾವಣೆಗೆ ಮತ್ತದೇ ಪ್ರಚಾರ, ಸುಮಾರು ಒಂದು ತಿಂಗಳ ಕಾಲ 224 ಕ್ಷೇತ್ರಗಳಲ್ಲೂ ದಸಂಸ ಕಾರ್ಯಕರ್ತರು ಹಗಲಿರುಳು ನಿದ್ದೆಗಾಣದೆ ಶ್ರಮ ವಹಿಸಿದ್ದಾರೆ. ಸ್ವತಃ ದಸಂಸ ನಾಯಕರು 5 ಲಕ್ಷ ಕರಪತ್ರದೊಂದಿಗೆ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದಾರೆ. ದಸಂಸ ಸೋಷಿಯಲ್ ಮೀಡಿಯಾ ಸುಮಾರು 300 ಕ್ಕೂ ಹೆಚ್ಚು ಪೋಸ್ಟರ್, 20 ಕ್ಕೂ ಹೆಚ್ಚು ವಿಡಿಯೋ ಮೂಲಕ ಪ್ರತಿಕ್ಷಣ ಜನರನ್ನು ತಲುಪಿದೆ. ಬಹಿರಂಗವಾಗಿಯೇ ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದು ಪ್ರಚಾರ ಮಾಡಿದೆ.

ಈ ಲೇಖನ ಓದಿದ್ದೀರಾ?: ಗ್ಯಾರಂಟಿ ಗಲಾಟೆಯಲ್ಲಿ ಕಾಣೆಯಾಯಿತು ಒಕ್ಕೂಟ ಸರ್ಕಾರ ಮಾಡುತ್ತಿರುವ ಅನ್ಯಾಯದ ಚರ್ಚೆ

ಚುನಾವಣೆಗೂ ಒಂದು ವಾರ ಮುಂಚೆ ಒಳಮೀಸಲಾತಿ ಜಾರಿ ಎಂಬ ಸುಳ್ಳು ಹಬ್ಬಿಸಿದ ಬಿಜೆಪಿಯ ಬಣ್ಣ ಬಯಲು ಮಾಡಿದೆ. ಪರಿಶಿಷ್ಟರ ಮೀಸಲು ಹೆಚ್ಚಳವೆಂಬ ಬೃಹನ್ನಾಟಕದ ಗಂಟು ಮೂಟೆ ಕಟ್ಟಿಸಿದೆ. ಹೀಗೆ.. ಅನುಭವಿಸಿದ್ದು ಸಾಕು.. ಬಿಜೆಪಿಯನ್ನು ಸೋಲಿಸಲೇಬೇಕು. ಸಂವಿಧಾನ ಬದಲಿಸುತ್ತೇವೆ ಎಂದವರನ್ನೇ ಬದಲಿಸೋಣ. ಜನವಿರೋಧಿ ಬಿಜೆಪಿಯನ್ನು ಸೋಲಿಸೋಣ. ಜನಪರವಾದ ಕಾಂಗ್ರೆಸ್ ಅನ್ನು ಗೆಲ್ಲಿಸೋಣ. ಎಂಬ ಘೋಷಣೆಯೊಂದಿಗೆ ಕರ್ನಾಟಕದ ಬೀದಿ ಬೀದಿಗಿಳಿದ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರಿಗೆ ನಿರಾಶೆಯಾಗಲಿಲ್ಲ. ಮೇ 13 ರಂದು ಫಲ ಸಿಕ್ಕಿತು.

ಈಗಲೂ ಸಹ ದಲಿತ ಸಂಘರ್ಷ ಸಮಿತಿ ಸುಮ್ಮನೆ ಕುಳಿತಿಲ್ಲ. ಮುಂದಿನ 2024 ರ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಅದಾಗಲೇ ಕಿರು ಹೊತ್ತಿಗೆಯನ್ನು ರೂಪಿಸಿದೆ. ಶಿಬಿರಗಳನ್ನು ಆಯೋಜಿಸಲು ಅಣಿಯಾಗುತ್ತಿದೆ. ಮನೆ ಮನೆಯಲ್ಲಿ ಭಾರತದ ಸಂವಿಧಾನ ಉಳಿಸುವ ಅಭಿಯಾನ ಆರಂಭಿಸಲು ಸಜ್ಜಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ದಸಂಸದ ಭೀಮಸಂಕಲ್ಪವಾಗಿದೆ. ಅದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಸಂಸ ವಿಧಿಸಿದ್ದ ಷರತ್ತುಗಳನ್ನು ನೆನಪಿಸಲು ಬಯಸುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಬಿಜೆಪಿ ಭದ್ರಕೋಟೆ ಬೆಂ. ದಕ್ಷಿಣದ ಮತದಾರರು ಹೇಳುತ್ತಿರೋದೇನು?

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26 ರಂದು...

ಬಿಜೆಪಿಯಿಂದ ಪಿಕ್ ಪಾಕೆಟ್ ಕಾಂಗ್ರೆಸ್, ಕನ್ನಡಿಗರ ಕೈಗೆ ಚಿಪ್ಪು ಪೋಸ್ಟರ್ ಬಿಡುಗಡೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಚುನಾವಣಾ ಆಯೋಗದ ಅನುಮತಿ ಕೇಳಿದ್ದು,...

ಮಹಾಪ್ರಭು ಬಟ್ಟೆಯೊಳಗಡೆಯೇ ಬೆವರುತ್ತಿದ್ದಾರೆ: ಪ್ರಕಾಶ್‌ ರಾಜ್

“ನಿಮ್ಮ ಪಕ್ಷದ ಮ್ಯಾನಿಫೆಸ್ಟೋ ಬಗ್ಗೆ ಮಾತನಾಡಪ್ಪ ಅಂದರೆ ಊಟದ ಮೆನು ತೋರಿಸುತ್ತಾರೆ....

ನೇಹಾ ಕೊಲೆ | ನಿರಂಜನ್ ಮನೆಗೆ ಸಚಿವ ಎಚ್‌ ಕೆ ಪಾಟೀಲ್ ಭೇಟಿ, ನಿರಂಜನ್‌ ಜೊತೆ ಸಿಎಂ ಮಾತು

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ...