ಪಕ್ಷದ ಚಿಹ್ನೆ, ಪ್ರಣಾಳಿಕೆ ಬಿಡುಗಡೆ | ರಾಜಕೀಯದ ʼಫುಟ್ಬಾಲ್ʼ ಆಟ ಆರಂಭ ಎಂದ ಜನಾರ್ಧನ ರೆಡ್ಡಿ

Date:

  • ʼಇನ್ನು ಮುಂದೆ ನನ್ನ ಪಕ್ಷ ರಾಜಕೀಯದ ಪುಟ್ಬಾಲ್ ಆಡಲಿದೆʼ
  • ಭರ್ಜರಿ ಭರವಸೆಗಳನ್ನು ಘೋಷಣೆ ಮಾಡಿದ ಜನಾರ್ಧನ ರೆಡ್ಡಿ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಮತ್ತು ಪ್ರಣಾಳಿಕೆ ಬಿಡುಗಡೆ ಕಾರ್ಯ ಸೋಮವಾರ ಬೆಂಗಳೂರಿನಲ್ಲಿ ನಡೆಯಿತು.

ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಜನಾರ್ಧನ ರೆಡ್ಡಿ ಪಕ್ಷದ ಚಿಹ್ನೆ ʼಪುಟ್ಬಾಲ್ʼ ಹಾಗೂ ʼಪ್ರಣಾಳಿಕೆʼ ವಿಚಾರಗಳನ್ನು ಅನಾವರಣ ಮಾಡಿದರು.

ಬಳಿಕ ಮಾತನಾಡಿದ ಜನಾರ್ಧನ ರೆಡ್ಡಿ, “ರಾಜಕೀಯದಲ್ಲಿ ನನ್ನವರು, ಶತ್ರುಗಳು, ಎಲ್ಲರೂ ಸೇರಿಕೊಂಡು ನನ್ನನ್ನು ಫುಟ್ಬಾಲ್ ತರ ಆಡಿಸಿದರು. ಈಗ ನಾನು ಎಲ್ಲರನ್ನು ಸೇರಿಸಿ ಫುಟ್ಬಾಲ್ ಆಡಬಹುದು ಎಂದು ʼಫುಟ್ಬಾಲ್ʼ ಚಿಹ್ನೆಯನ್ನ ಆಯ್ಕೆ ಮಾಡಿಕೊಂಡಿದ್ದೇನೆ” ಎಂದರು.

“ಕಳೆದ ಡಿಸೆಂಬರ್ ತಿಂಗಳಿನಿಂದಲೇ ನಾನು ನನ್ನ ಪಕ್ಷದ ಉದ್ದೇಶ, ಧ್ಯೇಯಗಳನ್ನು ಪ್ರಚಾರ ಮಾಡುತ್ತಿದ್ದೆ. ಪಕ್ಷಕ್ಕೆ ನಾನು ಊಹಿಸಿಕೊಂಡಿದ್ದಕ್ಕಿಂತಲೂ ಹೆಚ್ಚಿನ ಬೆಂಬಲ ಸಿಕ್ಕಿದೆ. ನಿರೀಕ್ಷೆ ಮೀರಿ ಜನರ ವಿಶ್ವಾಸ ಗಳಿಸಿಕೊಂಡಿದ್ದೇನೆ.

ಕಾರ್ಯಾರಂಭ ಮಾಡಿದ 90 ದಿನಗಳಲ್ಲಿ 12 ಮಂದಿ ಅಭ್ಯರ್ಥಿಗಳ ಘೋಷಣೆ ಮಾಡಿದ್ದೇನೆ. ಇನ್ನೊಂದು ವಾರದಲ್ಲಿ 19 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ” ಎಂದು ರೆಡ್ಡಿ ಹೇಳಿದರು.

“ಇನ್ನೂ 20 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಹಾಕಲಿದ್ದೇವೆ. 51 ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಾಚರಣೆ ನಡೆಯುತ್ತಿದೆ. ಒಟ್ಟಾರೆ 30 ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ಇದಕ್ಕಾಗಿ ಹಗಲಿರುಳು ಪಕ್ಷ ಸಂಘಟನಾ ಕೆಲಸ ಮಾಡುತ್ತಿದ್ದೇನೆ” ಎಂದು ರೆಡ್ಡಿ ತಿಳಿಸಿದರು.

“ಮರಳಿ ಬಿಜೆಪಿಗೆ ಹೋಗುವ ಮಾತಿಲ್ಲ. ಈ ಬಗ್ಗೆ ನಾನು ಯಾರ ಜೊತೆಗೂ ಮಾತನಾಡಿಲ್ಲ. ಆ ಸಮಯ ಈಗ ಮೀರಿ ಹೋಗಿದೆ. ಹಿರಿಯರಿಗೆಲ್ಲ ಅಂದೇ ಮಾತನಾಡಿ ಎಲ್ಲ ಆಗಿದೆ ಎಂದಿದ್ದೇನೆ. ಯಾವ ಬಿಜೆಪಿ ನಾಯಕರ ಜೊತೆಗೂ ನಾನು ಸಂಪರ್ಕ ಹೊಂದಿಲ್ಲ” ಎಂದರು.

ಮಿತ್ರರ ಕ್ಷೇತ್ರಗಳಲ್ಲಿ ಸ್ಪರ್ಧೆ ಇಲ್ಲ

“ಎಲ್ಲಿ ನಮಗೆ ಶಕ್ತಿ ಇರುತ್ತದೆಯೋ ಅಲ್ಲಿ ಸ್ಪರ್ಧೆ ಮಾಡ್ತೇವೆ. ಗೆಲ್ಲುವ ಸಾಧ್ಯತೆ ಇರುವ ಕಡೆ ಮಾತ್ರ ಸ್ಪರ್ಧೆ ಮಾಡುತ್ತೇವೆ ಎಂದು ಜನಾರ್ಧನ ರೆಡ್ಡಿ ಹೇಳಿದರು.ಆ ಮೂಲಕ ಮಿತ್ರ ಶ್ರೀರಾಮುಲು ಕಣಕ್ಕಿಳಿಯಲಿರುವ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷದ ಸ್ಪರ್ಧೆ ಇಲ್ಲ” ಎಂದು ಪರೋಕ್ಷವಾಗಿ ರೆಡ್ಡಿ ತಿಳಿಸಿದರು.

ಪ್ರಶ್ನೋತ್ತರದ ಬಳಿಕ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ಧನರೆಡ್ಡಿ, ಜನರಿಗೆ ನೀಡಿರುವ ಭರವಸೆಗಳ ಅನಾವರಣ ಮಾಡಿದರು.

  • ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಹೀಗಿವೆ:
  • ಪ್ರತಿ ಮನೆಗೆ 250 ಯೂನಿಟ್ ಉಚಿತ ವಿದ್ಯುತ್
  • ಎಸ್ ಸಿ, ಎಸ್ಟಿ ಸಮುದಾಯದವರಿಗೆ ಉಚಿತ ನಿವೇಶನ
  • 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ 15 ಸಾವಿರ ಬಂಡವಾಳ ನೆರವು
  • ರೈತರಿಗೆ ಬಡ್ಡಿ ರಹಿತ ಸಾಲ
  • ಹೆಣ್ಣು ಮಕ್ಕಳ ಹೆಸರಿನಲ್ಲಿ ಮನೆ ಇಲ್ಲದೆ ಇರುವವರಿಗೆ 2ಬಿಹೆಚ್ಕೆ ಮನೆ
  • ಎಲ್ಲ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ವೇತನ
  • ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ
  • ಮಹಿಳೆಯರ ಭದ್ರತೆಗಾಗಿ ಹೊಸ ಮಹಿಳೆಯರ ತಂಡ ಸ್ಥಾಪನೆ
  • ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ರೂ. ವೇತನ ಹೆಚ್ಚಳ
  • ಆರ್ಥಿಕ ದೌರ್ಬಲ್ಯ ಮಕ್ಕಳಿಗೆ ಉಚಿತ ಶಿಕ್ಷಣ ಇತ್ಯಾದಿಗಳಾಗಿವೆ.
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾರ್ತಾ ಇಲಾಖೆಯ ನೂತನ ಆಯುಕ್ತರಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕಾರ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಹಿರಿಯ ಐಪಿಎಸ್...

ಮಾಜಿ ಪ್ರಧಾನಿ ದೇವೇಗೌಡಗೆ ಕಸಾಪ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼ

2022ನೇ ಸಾಲಿನ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ʼ ದತ್ತಿ ಪ್ರಶಸ್ತಿ ಪ್ರದಾನ ನಾಡಿನ...

ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

ದತ್ತಾಂಶದ ಆಧಾರದಲ್ಲಿ ವಿವಿಧ ಸಮುದಾಯಗಳಿಗೆ ಅನುಕೂಲ: ಸಿಎಂ 'ಬಿಜೆಪಿ ಸರ್ಕಾರವು ಮೀಸಲಾತಿಯಲ್ಲಿ ಸೃಷ್ಟಿಸಿದ...

ನಮ್ಮ ಸಚಿವರು | ಮೌಢ್ಯವನ್ನು ಮೆಟ್ಟಿ ಗೆಲ್ಲುತ್ತಿರುವ ಸತೀಶ್ ಜಾರಕಿಹೊಳಿ

32 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹಾಗೂ ನಾಲ್ಕು ಬಾರಿ ಸಚಿವರಾಗಿರುವ...